ಹೊಸ ನಿಯಮ - ಕಾರಿನ ರಿಜಿಸ್ಟ್ರೇಶನ್ 10 ವರ್ಷ ಮಾತ್ರ

By Web DeskFirst Published Jan 26, 2019, 4:08 PM IST
Highlights

ಇನ್ಮುಂದೆ ಕಾರಿನ ಆಯಸ್ಸು ಕೇವಲ 10 ವರ್ಷ ಮಾತ್ರ? ನೂತನ ನಿಯಮದ ಪ್ರಕಾರ ಕಾರಿನ ರಿಜಿಸ್ಟ್ರೇಶನ್ 10 ವರ್ಷಕ್ಕೆ ಮಾತ್ರ. ಬಳಿಕ ನಿಮ್ಮ ಕಾರಿನ ನಂಬರ್, ಹೊಸ ಕಾರಿಗೆ ನೀಡಲಾಗುತ್ತೆ. ಈ ನೂತನ ನಿಯದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ತಿರುವನಂತಪುರಂ(ಜ.26): ಮಾಲಿನ್ಯ ನಿಯಂತ್ರಿಸಲು ಕೇಂದ್ರ ಮಾಲಿನ್ಯ ಪ್ರಾಧಿಕಾರ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ. ಈಗಾಗಲೇ 10 ವರ್ಷಕ್ಕಿಂತ ಹೆಚ್ಚಿನ ಡೀಸೆಲ್ ಕಾರು ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಪೆಟ್ರೋಲ್ ವಾಹನಗಳನ್ನ ನಿಷೇಧಿಸಲು ಗಂಭೀರ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಕಾರಿನ ರಿಜಿಸ್ಟ್ರೇಶನ್ ಅವಧಿಯನ್ನ 10 ವರ್ಷಕ್ಕೆ ಸೀಮಿತಗೊಳಿಸಲು ಮುಂದಾಗಿದೆ.

ಇದನ್ನೂ ಓದಿ: ತಂದೆ ಹುಟ್ಟುಹಬ್ಬಕ್ಕೆ ಮಗನಿಂದ ಆಡಿ ಕಾರು ಸರ್ಪ್ರೈಸ್ ಗಿಫ್ಟ್!

ಈ ನೂತನ ಯೋಜನೆ ಜಾರಿಗೆ ತರಲು ಮುಂದಾಗಿರೋದು ಕೇರಳ ಸರ್ಕಾರ. ಕೇರಳವನ್ನ ಮಾಲಿನ್ಯದಿಂದ ಮುಕ್ತಮಾಡಲು ಕಾರಿನ ರಿಜಿಸ್ಟ್ರೇಶನ್ ಅವಧಿಯನ್ನ 10 ವರ್ಷಕ್ಕೆ ಸೀಮಿತಗೊಳಿಸಲು ಮುಂದಾಗಿದೆ. ಸದ್ಯ ಕಾರು ಖರೀದಿಸುವಾಗ ಮಾಡೋ ರಿಜಿಸ್ಟ್ರೇಶನ್ ಲೈಫ್ ಟೈಮ್ ಆಗಿರುತ್ತೆ. ಆದರೆ ಇನ್ಮುಂದೆ 10 ವರ್ಷಕ್ಕೆ ಸಮೀತ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. 10  ವರ್ಷಗಳ ಬಳಿಕಾ ಕಾರಿನ ರಿಜಿಸ್ಟ್ರೇಶನ್ ರದ್ದಾಗಲಿದೆ. ಬಳಿಕ ಇದೇ ರಿಜಿಸ್ಟರ್ಡ್ ನಂಬರ್ ಬೇರೆ ಕಾರಿಗೆ ನೀಡಲಾಗುತ್ತೆ. 

ಇದನ್ನೂ ಓದಿ: ಬೆಂಗಳೂರು ಬಳಿಕ ಮತ್ತೊಂದು ನಗರದ ಪೊಲೀಸರಿಗೆ ಮಾರುತಿ ಎರ್ಟಿಗ ಕಾರು!

ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈಗಾಗಲೇ ರಿಜಿಸ್ಟ್ರೇಶನ್ ಆಗಿರುವ, 10ಕ್ಕಿಂತ ಹೆಚ್ಚು ವರ್ಷವಾಗಿರುವ ಕಾರುಗಳು ಪರಿಸ್ಥಿತಿ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಪ್ರಸ್ತಾವೆ ಅಂಗೀಕಾರವಾಗೋ ಸಾಧ್ಯತೆಗಳು ಕಡಿಮೆ.
 

click me!