2020ರ ಬಳಿಕ ಸಿಗಲ್ಲ ಅಗ್ಗದ ಟಾಟಾ ನ್ಯಾನೋ ಕಾರು !

Published : Jan 25, 2019, 04:16 PM ISTUpdated : Jan 25, 2019, 04:19 PM IST
2020ರ ಬಳಿಕ ಸಿಗಲ್ಲ  ಅಗ್ಗದ  ಟಾಟಾ ನ್ಯಾನೋ ಕಾರು !

ಸಾರಾಂಶ

ದೇಶದ ಅಗ್ಗದ ಕಾರು, ಜನಸಾಮಾನ್ಯ ಕಾರು ಎಂದು ಗುರುತಿಸಿಕೊಂಡಿದ್ದ ಟಾಟಾ ನ್ಯಾನೋ ಕಾರು ಓಟ ನಿಲ್ಲಿಸುತ್ತಿದೆ. ರತನ್ ಟಾಟಾ ಕನಸಿನ ಕೂಸಾಗಿದ್ದ ಈ ಕಾರು ಗುಡ್ ಬೈ ಹೇಳಲು ಕಾರಣವೇನು? ಇಲ್ಲಿದೆ ವಿವರ.

ಮುಂಬೈ(ಜ.25): ಅತೀ ಕಡಿಮೆ ಬೆಲೆ, ಸಣ್ಣ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಟಾಟಾ ನ್ಯಾನೋ ಕಾರು 2020ರ ಎಪ್ರಿಲ್‌ಗೆ ನಿರ್ಮಾಣ ಸ್ಥಗಿತಗೊಳಿಸಲಿದೆ. 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ನ್ಯಾನೋ ಕಾರು ಇನ್ನೊಂದೇ ವರ್ಷದಲ್ಲಿ ಗುಡ್ ಬೈ ಹೇಳಲಿದೆ.

ಇದನ್ನೂ ಓದಿ: ಶೀಘ್ರದಲ್ಲಿ ಮಹೀಂದ್ರ GenZe ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ  2020ರ ಎಪ್ರಿಲ್‌ಗೆ  ಎಲ್ಲಾ ವಾಹನಗಳು BS VI ಹೊಗೆ ನಿಯಮ ಪಾಲಿಸಬೇಕು. ಹೀಗಾಗಿ ಸದ್ಯ ಇರೋ ಕಾರುಗಳು BS VI ಎಂಜಿನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಆದರೆ ಮಾರಾಟದಲ್ಲಿ ಇಳಿಮುಖವಾಗಿರುವ ಟಾಟಾ ನ್ಯಾನೋ ಹೆಚ್ಚಿನ ಬಂಡವಾಳ ಹೂಡಿ ಎಂಜಿನ್ ಅಪ್‌ಗ್ರೇಡ್ ಮಾಡುತ್ತಿಲ್ಲ. ಹೀಗಾಗಿ 2020ರಲ್ಲಿ ಟಾಟಾ ಗುಡ್ ಬೇ ಹೇಳಲಿದೆ.

ಇದನ್ನೂ ಓದಿ: ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

ಮಾರಾಟ ಕುಸಿದಿರುವ ಕಾರಣ ಈಗಾಗಲೇ ಗುಜರಾತ್ ಕಾರು ಘಟಕದಲ್ಲಿ ಟಾಟಾ ನ್ಯಾನೋ ಕಾರು ಸ್ಥಗಿತಗೊಂಡಿದೆ. ನ್ಯಾನೋ ಕಾರಿನ ಮಾರಾಟ ಈಗ ಪಾತಾಳಕ್ಕೆ ಕುಸಿದಿದೆ. ಮಾರ್ಚ್ 2017ರಲ್ಲಿ ಇಡೀ ದೇಶದಲ್ಲಿ ಕೇವಲ 174 ಕಾರುಗಳು ಮಾರಾಟವಾಗಿವೆ. ಇದೇ ರೀತಿ 2016ರ ಏಪ್ರಿಲ್‌ನಿಂದ 2017ರ ಮಾರ್ಚ್ ವರೆಗೆ ಕೇವಲ 7591 ನ್ಯಾನೋ ಕಾರುಗಳು ಮಾರಾಟವಾಗಿವೆ.

ಇದನ್ನೂ ಓದಿ: ನೂತನ ಮಾರುತಿ ವ್ಯಾಗನ್ಆರ್ ಬಿಡುಗಡೆ- ಬೆಲೆ ಕೇವಲ 4.19 ಲಕ್ಷ ರೂ!

2015-16ರಲ್ಲಿ 21,012 ಕಾರು ಮಾರಾಟವಾ​ಗಿದ್ದವು. ಹೀಗಾಗಿ ಈಗ ಮಾರಾಟದ ಕುಸಿತದ ಪ್ರಮಾಣ ಶೇ.63ರಷ್ಟಿದೆ. 1 ಲಕ್ಷ ರುಪಾಯಿ ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋ ಉದ್ಘಾಟನೆಗೊಂಡಾಗ 2 ಲಕ್ಷ ಬುಕ್ಕಿಂಗ್‌'ಗಳಾಗಿದ್ದವು. ಅಂತಾರಾಷ್ಟ್ರೀಯ ಮಟ್ಟ​ದಲ್ಲೂ ಸುದ್ದಿ ಮಾಡಿತ್ತು. ಆದರೆ ಕಾರಿನ ತಾಂತ್ರಿಕತೆಯಲ್ಲಿ ದೋಷಗಳು, ಕೆಲವೊಮ್ಮೆ ಕಾರಿನಲ್ಲಿ ಏಕಾಏಕಿ ಆದ ಬೆಂಕಿ ದುರಂತಗಳ ಕಾರಣ, ನ್ಯಾನೋ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡತೊಡಗಿ ಜನಪ್ರಿಯತೆ ಇಳಿಯಿತು.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ