ಬೆಂಗಳೂರು ಬಳಿಕ ಮತ್ತೊಂದು ನಗರದ ಪೊಲೀಸರಿಗೆ ಮಾರುತಿ ಎರ್ಟಿಗ ಕಾರು!

By Web Desk  |  First Published Jan 26, 2019, 3:38 PM IST

ಬೆಂಗಳೂರಿನ ಹೊಯ್ಸಳ ಪೊಲೀಸರು ಮಾರುತಿ ಎರ್ಟಿಗಾ ಕಾರು ಬಳಕೆ ಮಾಡುತ್ತಾರೆ. ಬೆಂಗಳೂರಿನ ಬಳಿಕ ಮತ್ತೊಂದು ನಗರದ ಪೊಲೀಸರು ನೂತನ ಎರ್ಟಿಗಾ ಕಾರನ್ನೇ ಖರೀದಿಸಿದ್ದಾರೆ. 


ಗುರುಗಾಂವ್(ಜ.26): ಭಾರತದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್ ಹೊಂದಿರುವ ಕಾರು-ಜೀಪ್‌ಗಳನ್ನ ಹೊಂದಿದೆ. ಈ ವಾಹನದ ಮೂಲಕ ಪೊಲೀಸ್ ಗಸ್ತು, ಕಳ್ಳ ಖದೀಮರ ಹೆಡೆ ಮುರಿ ಕಟ್ಟಲು ಪೊಲೀಸ್ ಇಲಾಖೆ ಸದಾ ಸಿದ್ದವಾಗಿರುತ್ತೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ಹೊಸ ವಾಹನಗಳನ್ನ ಖರೀದಿ ಮಾಡುತ್ತೆ. ಬೆಂಗಳೂರು ಪೊಲೀಸ್ ಇಲಾಖೆ ಈಗಾಗಲೇ ಮಾರುತಿ ಎರ್ಟಿಗಾ ಕಾರನ್ನ ಬಳಸುತ್ತಿದೆ. ಬೆಂಗಳೂರು ಪೊಲೀಸರ ಬಳಿಕ ಇದೀಗ ಹರಿಯಾಣದ ಗುರುಗಾಂವ್ ನಗರ ಪೊಲೀಸರು ನೂತನ ಎರ್ಟಿಗಾ ಕಾರನ್ನ ಖರೀದಿ ಮಾಡಿದ್ದಾರೆ.  

Latest Videos

undefined

ಇದನ್ನೂ ಓದಿ: 2020ರ ಬಳಿಕ ಸಿಗಲ್ಲ ಅಗ್ಗದ ಟಾಟಾ ನ್ಯಾನೋ ಕಾರು !

ಮಾರುತಿ ಸುಜುಕಿ ಸಂಸ್ಥೆ ನೂತನ ಎರ್ಟಿಗಾನ 2 ಜೆನರೇಶನ್ ಕಾರನ್ನ ಇತ್ತೀಚೆಗೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಕಾರು ನಿರ್ಮಾಣವಾಗಿದ್ದು, ಗುರುಗಾಂವ್ ಘಟಕದಲ್ಲಿ. ಇದೀಗ ಗುರುಗಾಂವ್ ಪೊಲೀಸರು 25 ನೂತನ ಎರ್ಟಿಗಾ MPV ಕಾರನ್ನ ಇಲಾಖೆಗೆ ಸೇರ್ಪಡೆ ಮಾಡಿದೆ.

ಇದನ್ನೂ ಓದಿ: ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

ಗುರುಗಾಂವ್ ಪೊಲೀಸರು ಎರ್ಟಿಗಾ MPV ಕಾರು 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 89bhp ಪವರ್ ಹಾಗೂ 200nm ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮಾರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟಾನ್ಸ್‌ಮಿಶನ್ ಹಾಗೂ ಮೈಲೈಡ್ ಹೈಬ್ರಿಡ್ ಸಿಸ್ಟಮ್ ಸೌಲಭ್ಯಹೊಂದಿದೆ.

click me!