ಜೀಪಿಗೆ 50ನೇ ವರ್ಷದ ಹುಟ್ಟು ಹಬ್ಬ; ಗ್ರಾಮಕ್ಕೆ ಸಿಹಿ ಹಂಚಿದ ಮಾಲೀಕ!

By Suvarna NewsFirst Published Dec 14, 2019, 6:18 PM IST
Highlights

ಶೃಂಗೇರಿ ಸಮೀಪಿದ ಮುಂಡೋಡಿ ಗ್ರಾಮದಲ್ಲಿ ಹಬ್ಬದ ವಾತಾವರಣ. ಕಾರಣ ಈ ಗ್ರಾಮದಲ್ಲಿರುವ ಜೀಪ್‌ಗೆ 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಜೀಪ್ ಮಾಲೀಕ ಹಾಗೂ ಮಾಲೀಕನ ಪುತ್ರ ಗ್ರಾಮಕ್ಕೆ ಸಿಹಿ ಹಂಚಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಜೀಪ್ ಹುಟ್ಟು ಹಬ್ಬದ ಮಾಹಿತಿ ಇಲ್ಲಿದೆ.

ಮುಂಡೋಡಿ([ಡಿ.14): ಭಾರತೀಯರಿಗೆ ಆಯುಧ ಪೂಜೆ ಅಥವಾ ದೀಪಾವಳಿ ಹಬ್ಬದಲ್ಲಿ ವಾಹನ ಪೂಜೆಗೆ ವಿಶೇಷ ಮಹತ್ವವಿದೆ. ಕಾರಣ ವಾಹನಗಳು ಕೇವಲ ಪ್ರಯಾಣಕ್ಕೆ ಅಥವಾ ಸರಕುಗಳನ್ನು ಸಾಗಿಸುವ ಸಾಧನಗಳಲ್ಲ. ಇದು ಕುಟುಂಬದ ಮತ್ತೊಬ್ಬ ಸದಸ್ಯನಿದ್ದಂತೆ. ಹೀಗೆ ಖರೀದಿಸಿದ ಜೀಪನ್ನು ಮನೆಯ ಸದಸ್ಯನಂತೆ ನೋಡಿದ ಮಾಲೀಕ ಹಾಗೂ ಪುತ್ರ, ಜೀಪಿನ 50ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಇದನ್ನೂ ಓದಿ: ಆಧುನಿಕ ಬಾಹುಬಲಿ; ನಡು ರಸ್ತೆಯಲ್ಲಿದ್ದ ಸ್ವಿಫ್ಟ್ ಕಾರನ್ನೇ ಎತ್ತಿ ಬದಿಗಿಟ್ಟ ಚಾಲಕ!

ಶೃಂಗೇರಿ ಸಮೀಪದ ಮುಂಡೋಡಿ ಗ್ರಾಮದ ಮಣಿ ಮುಂಡೋಡಿ ಹಾಗೂ ಪುತ್ರ ಧ್ರುವ ಮುಂಡೋಡಿ ತಮ್ಮ ಮಹೀಂದ್ರ CJ3B ಜೀಪ್‌ನ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಹುಟ್ಟು ಹಬ್ಬ ಪ್ರಯುಕ್ತ ಜೀಪಿನಲ್ಲಿ ತೆರಳಿ ಮುಂಡೂಡಿ ಗ್ರಾಮದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಡಿಸೆಂಬರ್ 2, 1969ರಲ್ಲಿ ಮಹೀಂದ್ರ CJ3B ಜೀಪ್‌ನ್ನು ಖರೀದಿಸಲಾಗಿತ್ತು. ಇದೀಗ ಈ ಜೀಪ್ 50 ವರ್ಷ ಪೂರೈಸಿದೆ. ಹೀಗಾಗಿ ಮುಂಡೋಡಿ ಕುಟುಂಬ 50 ವರ್ಷದಿಂದ ತಮ್ಮ ಜೊತೆ ಕಷ್ಟ ಸುಖದಲ್ಲಿ ನೆರವಾದ ಜೀಪ್‌ನ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಕಳೆದ 50 ವರ್ಷಗಳಿಂದ ಈ ಜೀಪ್ ಯಾವುದೇ ಸಮಸ್ಯೆ ಇಲ್ಲದೆ ಓಡಾಡುತ್ತಿದೆ. ಈಗಲೂ ಹೊಚ್ಚ ಹೊಸ ಜೀಪ್‌ನಂತೆ ಕಂಗೊಳಿಸುತ್ತಿದೆ. ಜೀಪ್‌ನ 50ನೇ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

 

ಮಹೀಂದ್ರ CJ3B ಜೀಪ್‌ಗೆ ಮುಂಡೋಡಿ ಕುಟುಂಬ ಹೊಸ ಟಚ್ ನೀಡಿದ್ದಾರೆ. ಜೀಪ್‌ಗೆ ಕೆಂಪು ಬಣ್ಣ ನೀಡಲಾಗಿದ್ದು, ಅಲೋಯ್ ವೀಲ್ಹ್ ಬಳಸಿದ್ದಾರೆ. ಮಹೀಂದ್ರ CJ3B ಜೀಪ್ 4×4 SUV ವಾಹನವಾಗಿದೆ. ಆಫ್ ರೋಡ್‌ಗೆ  ಹೇಳಿ ಮಾಡಿಸಿದ ಜೀಪ್ ಇದಾಗಿದ್ದು, 3 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. 
 

click me!