ಕಾರು ಖರೀದಿಗೆ ಇದು ಸೂಕ್ತ ಕಾಲ, ಸಿಗಲಿದೆ ಭರ್ಜರಿ ಡಿಸ್ಕೌಂಟ್!

By Suvarna News  |  First Published Dec 14, 2019, 5:31 PM IST

ಎಪ್ರಿಲ್ 1 ರಿಂದ ಬಿಎಸ್ 4 ವಾಹನ ಮಾರಾಟ ಬಂದ್ ಆಗಲಿದೆ. ಬಿಎಸ್ 6 ಎಂಜಿನ್ ಮಾರಾಟ ಜಾರಿಯಾಗಲಿದೆ. ಹೀಗಾಗಿ ಸದ್ಯ ಕಾರು  ಕಂಪನಿಗಳು ಬಿಎಸ್ 4 ಎಂಜಿನ್ ಸ್ಟಾಕ್ ಕ್ಲೀಯರ್ ಮಾಡಲು ಭಾರಿ ಡಿಸ್ಕೌಂಟ್ ನೀಡುತ್ತಿದೆ.


ನವದೆಹಲಿ(ಡಿ.14): ಆಟೋಮೊಬೈಲ್ ಕ್ಷೇತ್ರ ಭಾರಿ ಕುಸಿತದಿಂದ  ಚೇತರಿಕೆ ಕಾಣುತ್ತಿದೆ. ಹೊಸ ವರ್ಷದಲ್ಲಿ ಕೆಲ ಬದಲಾವಣೆ ಕಾಣುತ್ತಿದೆ. ಎಪ್ರಿಲ್ 1, 2020ರಿಂದ ಆಟೋಮೊಬೈಲ್ ಕಂಪನಿಗಳು BS VI ಎಮಿಶನ್ ಎಂಜಿನ್ ಕಾರುಗಳನ್ನುಮಾತ್ರ ಮಾರಾಟ ಮಾಡಬೇಕು. ಸದ್ಯ ಕಾರುಗಳಲ್ಲಿ BS IV ಎಂಜಿನ್ ಕಾರುಗಳು ಲಭ್ಯವಿದೆ.(ಇತ್ತೀಚೆಗೆ ಬಿಡುಗಡೆಯಾದ ಕೆಲ ಕಾರುಗಳನ್ನು ಹೊರತು ಪಡಿಸಿ) ಹೀಗಾಗಿ ಸ್ಟಾಕ್ ಕ್ಲೀಯರ್‌ಗಾಗಿ ಕಾರು ಕಂಪನಿಗಳು ಭಾರಿ ಡಿಸ್ಕೌಂಟ್ ನೀಡುತ್ತಿದೆ.

ಇದನ್ನೂ ಓದಿ: ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!

Latest Videos

undefined

2020ರ ಎಪ್ರಿಲ್ 1 ರಿಂದ ಕಂಪನಿಗಳು ಬಿಎಸ್ 4 ಎಂಜಿನ್ ವಾಹನ ಮಾರಾಟ ಮಾಡುವಂತಿಲ್ಲ. ಹೀಗಾಗಿ ಸದ್ಯ ಆಟೋಮೊಬೈಲ್ ಕಂಪನಿಗಳು 5 ರಿಂದ 15 ಶೇಕಡಾ ಡಿಸ್ಕೌಂಟ್ ಘೋಷಣೆ ಮಾಡುತ್ತಿದೆ. ಮಾರುತಿ ಸುಜುಕಿ ಬಹುತೇಕ ಬಿಎಸ್ 4 ಕಾರುಗಳು ಮಾರಾಟವಾಗಿದೆ. ಬಾಕಿ ಉಳಿದಿರುವ ಕಾರುಗಳಿಗೆ ಸುಜುಕಿ 37,000 ರೂಪಾಯಿಂದ  ಗರಿಷ್ಟ 89,000 ರೂಪಾಯಿ ವರೆಗೆ ರಿಯಾಯಿತಿ ನೀಡಲಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕಾರು ಖರೀದಿಸಲು ಬಯಸಿದರೆ, ಚೇಂಜ್ ಮಾಡಿ ಪ್ಲಾನ್!

ಹ್ಯುಂಡೈ ಕಾರು 20,000 ರೂಪಾಯಿಂದ ಗರಿಷ್ಠ 2ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಿಸಿದೆ. ಎಲ್ಯಾಂಟ್ರ ಹಾಗೂ ಟಸ್ಕನ್ ಬಿಎಸ್ 4  ವಾಹನಕ್ಕೆ ಗರಿಷ್ಠ 2 ಲಕ್ಷ ರೂಪಾಯಿ ಡಿಸ್ಕೌಂಡ್ ನೀಡಲಾಗಿದೆ.  ಟಾಟಾದ ಹ್ಯಾಾಚ್ ಬ್ಯಾಕ್ ಕಾರುಗಳಿಗೆ 77,500 ರೂಪಾಯಿ ಡಿಸ್ಕೌಂಟ್ ನೀಡಲಾಗಿದ್ದರೆ, ಟಾಟಾ ಹೆಕ್ಸಾ ಕಾರಿಗೆ 2.25 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಿದೆ.

ಇದನ್ನೂ ಓದಿ: ಡಿ.17ಕ್ಕೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣ; ಬೆಂಗಳೂರಿನಲ್ಲಿ ಲಭ್ಯ!

ಸದ್ಯ ಗ್ರಾಹಕರು ಮಾರ್ಚ್ ತಿಂಗಳಲ್ಲಿ ಕಾರು ಖರೀದಿಸಲು ಪ್ಲಾನ್ ಹಾಕಿಕೊಂಡಿದ್ದಾರೆ. ಕಾರಣ ಎಪ್ರಿಲ್‌ನಿಂದ ಬಿಎಸ್ 6 ಎಂಜಿನ್ ಕಡ್ಡಾಯವಾಗಿರುವ ಕಾರಣ, ಮಾರ್ಚ್‌ನಲ್ಲಿ ಮತ್ತಷ್ಟು ಡಿಸ್ಕೌಂಟ್ ಸಿಗುವ ಸಾಧ್ಯತೆ ಇದೆ. 2017ರಲ್ಲಿ ದ್ವಿಚಕ್ರವಾಹನ ಬಿಎಸ್ 3 ರಿಂದ ಬಿಎಸ್ 4 ಎಂಜಿನ್ ಕಡ್ಡಾಯ ಮಾಡಿದಾಗ ಭಾರಿ ಡಿಸ್ಕೌಂಟ್ ಮಾರಾಟ ದೇಶದಲ್ಲೇ ಎಲ್ಲರ ಗಮನಸೆಳೆದಿತ್ತು. ಇದೀಗ ಕಾರು ಮಾರುಕಟ್ಟೆ ಇದೇ ರೀತಿಯ ಡಿಸ್ಕೌಂಟ್‌ಗೆ ಮುಂದಾಗಿದೆ.

ಸೂಚನೆ: ಡಿಸ್ಕೌಂಟ್, ನಗರದಿಂದ ನಗರಕ್ಕೆ, ರಾಜ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಹೀಗಾಗಿ ಹತ್ತಿರದ ಡೀಲರ್ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ

click me!