ದಂಡ ಕಟ್ಟಿ ಜಾರಿಕೊಳ್ಳೋ ಚಾನ್ಸೇ ಇಲ್ಲ, ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್!

By Suvarna News  |  First Published Nov 6, 2020, 5:51 PM IST

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣಗೊಳ್ಳುತ್ತಿದೆ. ಐನೂರು ಅಥವಾ ಸಾವಿರ ರೂಪಾಯಿ ದಂಡ ಕಟ್ಟಿದರಾಯಿತು ಎಂದುಕೊಂಡವರಿಗೆ ಇನ್ನುಮುಂದೆ ತೀವ್ರ ಸಂಕಷ್ಟ ಎದುರಾಗಲಿದೆ. ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದಾಗಲಿದೆ.
 


ಬೆಂಗಳೂರು(ನ.06): ನಗರದಲ್ಲಿ ನಡೆಯುವ ಹೆಚ್ಚಿನ ಅಪಘಾತಗಳಿಗೆ ನಿಯಮ ಉಲ್ಲಂಘನೆ ಪ್ರಮುಖ ಕಾರಣವಾಗುತ್ತಿದೆ. ಇತ್ತ ಸುಗಮ ಸಂಚರಕ್ಕೂ ಅಡ್ಡಿಯಾಗುತ್ತಿದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘನೆಯಿಂದ ಇತರರ ಸವಾರರಿಗೆ, ಪದಾಚಾರಿಗಳ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಹೀಗಾಗಿ ಇದೀಗ ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ ಮಾಡಲಾಗುತ್ತಿದೆ.

ವಾಹನ ಸವಾರರೇ ಎಚ್ಚರ : ನಿಮ್ಮ DL ರದ್ದಾಗಬಹುದು!

Tap to resize

Latest Videos

ಬೆಂಳೂರು ಹಾಗೂ ಕರ್ನಾಟಕದಲ್ಲಿ ಟ್ರಾಫಿಕ್ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ಕೆಲ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಹೆಲ್ಮೆಟ್ ರಹಿತ, ವಿಮೆ ರಹಿತ ಪ್ರಯಾಣ, ಸಿಗ್ನಲ್ ಜಂಪ್, ಒನ್ ವೇ ಸಂಚಾರ ಸೇರಿದಂತೆ ಇತರ ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ, ಮೊದಲ ಬಾರಿಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ 3 ತಿಂಗಳಿಗೆ ರದ್ದಾಗಲಿದೆ.

ಸುರಕ್ಷತೆಯ ಕಾರಣಕ್ಕಾಗಿ 4 ವರ್ಷಕ್ಕಿಂತ ಮೇಲ್ಪಟ್ಟ ದ್ವಿಚಕ್ರವಾಹನ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ಸವಾರ ಹೆಲ್ಮೆಟ್ ಧರಿಸದಿದ್ದರೆ ಲೈಸೆನ್ಸ್ ಅಮಾನತ್ತಾಗಲಿದೆ. ಇನ್ನು ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ, ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ರಸ್ತೆಯಲ್ಲಿ ಅತೀ ಎಚ್ಚರದ ರೈಡ್ ಹಾಗೂ ನಿಯಮ ಪಾಲನೆ ಅತ್ಯಗತ್ಯವಾಗಿದೆ.

ಮೊದಲ ನಿಯಮ ಉಲ್ಲಂಘನೆಗೆ 3 ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ಅಮಾನತು ಬಳಿಕ, ಶಾಶ್ವತವಾಗಿ ಲೈಸೆನ್ಸ್ ರದ್ದಾಗಲಿದೆ. ಇಷ್ಟೇ ಅಲ್ಲ 3 ತಿಂಗಳ ರದ್ದತಿ ಬಳಿಕ ಕೆಲ ರಾಜ್ಯಗಲ್ಲಿ ಮತ್ತೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಪಾಸ್ ಮಾಡಿದರೆ ಮಾತ್ರ ಡ್ರೈವಿಂಗ್ ಲೈಸೆನ್ಸ್ ಸಿಗಲಿದೆ.
 

click me!