ಬೆಂಗಳೂರಿನಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಂಟೇಜ್ ಕಾರ್ ಪಾರ್ಕ್!

Published : Feb 26, 2019, 12:40 PM ISTUpdated : Feb 26, 2019, 12:42 PM IST
ಬೆಂಗಳೂರಿನಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಂಟೇಜ್ ಕಾರ್ ಪಾರ್ಕ್!

ಸಾರಾಂಶ

ವಿಂಟೇಜ್ ಕಾರುಗಳ ಕುತೂಹಲಗಳ ಆಗರ. ಇಷ್ಟೇ ಅಲ್ಲ ಈ ಕಾರುಗಳಿಗೆ  ಭಾರಿ ಬೇಡಿಕೆ ಕೂಡ ಇದೆ. ಇದೀಗ ಕರ್ನಾಟಕ ಮೊಟ್ಟ ಮೊದಲ ವಿಂಟೇಜ್ ಕಾರು ಪಾರ್ಕ್ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಇಲ್ಲಿದೆ ಈ ಕಾರು ಪಾರ್ಕಿನ ವಿವರ.

ಬೆಂಗಳೂರು(ಫೆ.26): ಕರ್ನಾಟಕದ ಮೊಟ್ಟ ಮೊದಲ ವಿಂಟೇಜ್ ಕಾರು ಪಾರ್ಕ್ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಫೆ.27 ರಂದು  ಬೊಮ್ಮನಹಳ್ಳಿಯಲ್ಲಿ ವಿನೂತ ಪಾರ್ಕ್ ಉದ್ಘಾಟನೆಗೊಳ್ಳಲಿದೆ. ವಿಶೇಷ ಅಂದರೆ ಈ ಪಾರ್ಕ್ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಪಾರ್ಕಿಂಗ್ ದುರಂತ: 158 ಕಾರು ಮಾಲೀಕರಿಗೆ ಸಿಗುತ್ತಿಲ್ಲ ತಮ್ಮ ಕಾರಿನ ಗುರುತು!

ಕಲ್ಲಿನ ಪಾರ್ಕ್ ಮಾಡಲು ಪ್ಲಾನ್ ರೆಡಿ ಮಾಡಿದ್ದ ಬೊಮ್ಮನಹಳ್ಳಿ ಬಿಬಿಎಂಪಿ ಕಾರ್ಪೋರೇಟರ್ ಸತೀಶ್ ರೆಡ್ಡಿ ಬಳಿಕ ವಿಂಟೇಜ್ ಕಾರು ಪಾರ್ಕ್ ಮಾಡಲು ನಿರ್ಧರಿಸಿದ್ದರು.  ಅನಂತ್ ಕುಮಾರ್ ಕುಮಾರ್ ಸೂಕ್ತ ಸಹಾಯದಿಂದ ಈ ಪಾರ್ಕ್ ಇದೀಗ ಉದ್ಘಾಟನೆಗೊಳ್ಳುತ್ತಿದೆ ಎಂದು ಪಾರ್ಕ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಸತೀಶ್ ರೆಡ್ಡಿ ಹೇಳಿದ್ದಾರೆ. 

ವಿಂಟೇಜ್ ಕಾರು ಪಾರ್ಕ್‌ನಲ್ಲಿ ಹಳೇ ಕಾರುಗಳನ್ನ ಇಡಲಾಗಿದೆ. ಜೊತೆಗೆ ಮಕ್ಕಳಿಗೆ ಆಟವಾಡೋ ಹಲವು ಪರಿಕರಗಳನ್ನೂ ಇಡಲಾಗಿದೆ. ಈ ಎಲ್ಲಾ ಕಾರುಗಳ ಒಳಗೆ ಕೂತು ಮಕ್ಕಳು ಆಟವಾಡ ಬಹುದು. 

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ವಿನೂತ ವಿಂಟೇಜ್ ಕಾರು ಪಾರ್ಕನ್ನ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಉದ್ಘಾಟಿಸಲಿದ್ದಾರೆ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಪಾರ್ಕ್ ನಿರ್ಮಾಣ ಜವಾಬ್ದಾರಿ ಹೊತ್ತ ಸತೀಶ್ ರೆಡ್ಡಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

PREV
click me!

Recommended Stories

Pulsar N160 ಬೈಕ್‌ S & SS ವೇರಿಯಂಟ್‌ನಲ್ಲಿ ಲಾಂಚ್; ಫೀಚರ್ಸ್, ಬೆಲೆಯ ಮಾಹಿತಿ ಇಲ್ಲಿದೆ
Mahindra Thar Facelift: ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್