ಕರ್ನಾಟಕದಲ್ಲಿ ಮತ್ತೊಂದು ಟ್ಯಾಕ್ಸಿ ಸೇವೆ ನಿಷೇಧಗೊಂಡಿದೆ. ರ‍್ಯಾಪಿಡೋ ಬೈಕ್ ಸೇವೆಗೆ ಕರ್ನಾಟಕ ಸರ್ಕಾರ ಬ್ರೇಕ್ ಹಾಕಿದೆ. ಯಾಕೆ? ಇಲ್ಲಿದೆ
ಬೆಂಗಳೂರು(ಏ.08): ರಾಜ್ಯದಲ್ಲಿ ಇತ್ತೀಚೆಗೆ ಒಲಾ ಟ್ಯಾಕ್ಸಿ ಸೇವೆಯನ್ನು ಕರ್ನಾಟಕ ಸರ್ಕಾರ ನಿಷೇಧಿಸಿತ್ತು. ಬಳಿಕ ದಂಡ ಪಾವತಿಸಿ ಮತ್ತೆ ಒಲಾ ರಸ್ತೆಗಿಳಿಯಿತು. ಇದೀಗ ರ‍್ಯಾಪಿಡೋ ಬೈಕ್ ಸೇವೆಯನ್ನು ನಿಷೇಧಿಸಲಾಗಿದೆ. ಅಕ್ರಮವಾಗಿ ರ‍್ಯಾಪಿಡೋ ಬೈಕ್ ಸೇವೆ ನಡೆಯುತ್ತಿದೆ ಅನ್ನೋ ಕಾರಣಕ್ಕೆ ಇದೀಗ ಬೈಕ್ ಸೇವೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ನಿಷೇಧ ಹಿಂಪಡೆದ ಬೆನ್ನಲ್ಲೇ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದ OLA!
undefined
ರ‍್ಯಾಪಿಡೋ ಬೈಕ್ ಸೇವೆಗೆ ಬ್ರೇಕ್ ಹಾಕಿರವು ಸರ್ಕಾರ 170 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಬೈಕ್‌ಗೆ 6,000 ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ರ‍್ಯಾಪಿಡೋ ಒಟ್ಟು 1.02 ಲಕ್ಷ ರೂಪಾಯಿ ದಂಡ ಪಾವತಿಸಬೇಕಾದ ಅನಿವಾರ್ಯತೆಯಲ್ಲಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬೆದರಿಕೆಯಿಂದ ಕಿಯಾ ಮೋಟಾರ್ಸ್ ಆಂಧ್ರಕ್ಕೆ- ಚಂದ್ರಬಾಬು ನಾಯ್ಡು!
ರ‍್ಯಾಪಿಡೋ ಬೈಕ್ ಸೇವೆ ಒಲಾ ಹಾಗೂ ಉಬರ್ ರೀತಿಯಲ್ಲಿ ಸೇವೆ ಒದಗಿಸುತ್ತಿದೆ. ನಗರದೊಳಗಿನ ಪ್ರಯಾಣಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನವರು ರ‍್ಯಾಪಿಡೋ ಬೈಕ್ ಸೇವೆ ಬಳಸುತ್ತಿದ್ದಾರೆ. ಇದು ಒಲಾ ಹಾಗೂ ಉಬರ್ ಟ್ಯಾಕ್ಸಿ ಸೇವೆಗಿಂತ ಕಡಿಮೆ ಬೆಲೆ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಚುನಾವಣೆ ಸಮೀಪದಲ್ಲಿ ಸರ್ಕಾರದ ನಿರ್ಧಾರಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.