ಮರ್ಸಡೀಸ್ ಬೆಂಝ್ AMG G63 ಕಾರು ಸದ್ಯದ ಟ್ರೆಂಡ್. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈ ಕಾರು ಖರೀದಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಲ್ಲಿದೆ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರ ವಿವರ.
ಮುಂಬೈ(ಏ.08): ಭಾರತದಲ್ಲಿ ಐಷಾರಾಮಿ ಕಾರುಗಳಿಗೆ ಯಾವುದೇ ಕೊರತೆ ಇಲ್ಲ. ಸೆಲೆಬ್ರೆಟಿಗಳು, ರಾಜಕಾರಣಿಗಳು, ಉದ್ಯಮಿಗಳಲ್ಲಿ ಮರ್ಸಡೀಸ್ ಬೆಂಝ್ ಕಾರು ಇದ್ದೇ ದೆ. ಆದರೆ ಮರ್ಸಡೀಸ್ ಬೆಂಝ್ AMG G63 ಕಾರು ಕೆಲವೇ ಕೆಲವು ಸೆಲೆಬ್ರೆಟಿಗಳಲ್ಲಿದೆ. ಇತ್ತೀಚೆಗೆ ಈ ಲಿಸ್ಟ್‌ಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!
undefined
ಹಾರ್ದಿಕ್ ಪಾಂಡ್ಯ ಖರೀದಿಸಿದ ಮರ್ಸಡೀಸ್ ಬೆಂಝ್ AMG G63 SUV ಕಾರಿನ ಬೆಲೆ 2.19 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಬಾಲಿವುಡ್, ಟಾಲಿವುಡ್ ಹಾಗೂ ಉದ್ಯಮಿಗಳು ಸೇರಿದಂತೆ ಕಲವೇ ಕೆಲವೇ ಮಂದಿ ಸೆಲೆಬ್ರಟಿಗಳು ಈ ಕಾರನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!
ಮರ್ಸಡೀಸ್ ಬೆಂಝ್ AMG G63 SUV ಕಾರಿನ ಸೆಲೆಬ್ರೆಟಿ ಮಾಲೀಕರು:
ರಣಬೀರ್ ಕಪೂರ್ (ಬಾಲಿವುಡ್ ನಟ)
ಪವನ್ ಕಲ್ಯಾಣ್ (ಟಾಲಿವುಡ್ ನಟ)
ಜಿಮ್ಮಿ ಶೆರಿಗಿಲ್ (ಬಾಲಿವುಡ್ ನಟ)
ಅಖಿಲ್ ಅಕ್ಕಿನೇನಿ (ಟಾಲಿವುಡ್ ನಟ)
ಅನಂತ್ ಅಂಬಾನಿ( ಉದ್ಯಮಿ ಮುಖೇಶ್ ಅಂಬಾನಿ ಪುತ್ರ)
ಹಾರ್ದಿಕ್ ಪಾಂಡ್ಯ (ಟೀಂ ಇಂಡಿಯಾ ಕ್ರಿಕೆಟಿಗ)
AMG G63 SUV ಕಾರು ಹಲವು ವಿಶೇಷತೆ ಒಳಗೊಂಡಿದೆ. 4.0 ಲೀಟರ್ ಬೈ ಟರ್ಬೋ V8 ಪೆಟ್ರೋಲ್ ಎಂಜಿನ್, 585 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 220 km/h.