ಸ್ಯಾಂಡಲ್ವುಡ್ ಸ್ಟಾರ್ ದರ್ಶನ್ ಖರೀದಿಸಿರುವ ನೂತನ ಲ್ಯಾಂಬೋರ್ಗಿನಿ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು(ಮೇ.02): ಸ್ಯಾಂಡಲ್‍ವುಡ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ ಐಷಾರಾಮಿ ಹಾಗೂ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನಿ ಉರುಸ್ ಕಾರಿನ ಬೆಲೆ 3 ಕೋಟಿ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಇದರ ಆನ್‌ರೋಡ್ ಬೆಲೆ ಸರಿಸುಮಾರ್ 3.5 ಕೋಟಿ ದಾಟಲಿದೆ.
undefined
ಇದನ್ನೂ ಓದಿ: 20 ಲಕ್ಷ ಸ್ಫಟಿಕದಿಂದ ಕಾರು ಮಾಡಿಫೈ ಮಾಡಿದ ಸೆಲೆಬ್ರೆಟಿ -ಬೇಕಾ ಬಿಟ್ಟಿ ಖರ್ಚಿಗೆ ತರಾಟೆ!
ಲ್ಯಾಂಬೊರ್ಗಿನಿ ಕಾರು ದರ್ಶನ್‌ಗೆ ಹೊಸದಲ್ಲ. ಕಳೆದ ವರ್ಷ ದರ್ಶನ್ ಲ್ಯಾಂಬೊರ್ಗಿನಿ ಅವೆಂಟಡೂರ್ ರೋಡ್‌ಸ್ಟರ್ ಕಾರು ಖರೀದಿಸಿದ್ದಾರೆ. ನೂತನ ಲ್ಯಾಂಬೋರ್ಗಿನಿ ಉರುಸ್ ಕಾರು ಸೂಪರ್ ಸ್ಪೊರ್ಟ್ ಯುಟಿಲಿಟಿ ವಾಹನ. ದರ್ಶನ ಹಳದಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಉರುಸ್ ವೇರಿಯೆಂಟ್ ವಿಭಾಗದಲ್ಲಿ ಲಭ್ಯವಿರುವು ಬಹು ಬೇಡಿಕೆಯ ಕಲರ್ ಇದು.
ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!
ಲ್ಯಾಂಬೋರ್ಗಿನಿ ಉರುಸ್ SUV:
ಲ್ಯಾಂಬೋರ್ಗಿನಿ ಉರುಸ್ ಕಾರು ವಿಶ್ವದ ಫಾಸ್ಟೆಸ್ಟ್ SUV ಕಾರು ಅನ್ನೋ ಹೆಗ್ಗಳಿಗೆಯೊಂದಿಕೆ ಬಿಡುಗಡೆಯಾದ ಕಾರು. ಹೆಚ್ಚಾಗಿ ಲ್ಯಾಂಬೋರ್ಗಿನಿ ಕಾರು ಗ್ರೌಂಡ್ ಕ್ಲೀಯರೆನ್ಸ್ ಕಡಿಮೆ. ಆದರೆ ಇದು SUV ಕಾರು. ಹೀಗಾಗಿ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಕಾರು. ಇಷ್ಟೇ ಅಲ್ಲ ಐಷಾರಾಮಿ ಹಾಗೂ ಅತ್ಯಂತ ಸುರಕ್ಷತೆಯ ಕಾರು ಕೂಡ ಹೌದು.
ಲ್ಯಾಂಬೋರ್ಗಿನಿ ಉರುಸ್ ಎಂಜಿನ್:
ಉರುಸ್ ಕಾರು 4.0 ಲೀಟರ್, ಟ್ವಿನ್ ಟರ್ಬೋ, ಪೆಟ್ರೋಲ್ ಎಂಜಿನ್ ಹೊಂದಿದ್ದು, 641PS ಪವರ್ ಹಾಗೂ 850Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ಈ ಕಾರು 0-100 ಸ್ಪೀಡ್‌ಗೆ ತೆಗೆದುಕೊಳ್ಳುವ ಸಮಯ ಕೇವಲ 3.6 ಸೆಕೆಂಡುಗಳು ಮಾತ್ರ. ಇದರ ಗರಿಷ್ಠ ವೇಗ 305 KMPH.
ಇದನ್ನೂ ಓದಿ: ಕೇರಳಾಗೆ ಬಂತು 2ನೇ ಲ್ಯಾಂಬೋರ್ಗಿನಿ - ಈ ಕಾರಿನ ಹಿಂದಿದೆ ಬೆಂಗಳೂರು ನಂಟು!
ಲ್ಯಾಂಬೋರ್ಗಿನಿ ಉರುಸ್ ಸುರಕ್ಷತೆ:
ಆಕರ್ಷಕ ವಿನ್ಯಾಸ ಹೊಂದಿರುವ ಉರುಸ್ ಕಾರು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಏರ್‌ಬ್ಯಾಗ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಎಲೆಕ್ಟ್ರಾನಿಕ್ ಬ್ರೇಕ್‌ಪೋರ್ಸ್ ಡಿಸ್ಟ್ರಿಬ್ಯೂಶನ್(EBD), ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟ್ ಪ್ರೊಗ್ರಾಮ್(ESP), ಟ್ರಾಕ್ಷನ್ ಕಂಟ್ರೋಲ್(TC) ಸೇರಿದಂತೆ ಅತ್ಯಾಧುನಿಕ ಬೇಕ್ ಸಿಸ್ಟಮ್ ಹೊಂದಿದೆ.
ಲ್ಯಾಂಬೋರ್ಗಿನಿ ಉರುಸ್ ತಂತ್ರಜ್ಞಾನ :
ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಪವರ್ ಡೂರ್ ಲಾಕ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಕಾರ್ನರಿಂಗ್ ಲೈಟ್ಸ್, ಟರ್ನ್ ಇಂಡೀಕೇಶನ್ ORVM, ರೈನ್ ಸೆನ್ಸಿಂಗ್ ವೈಪರ್, ಹೆಡ್‌ಲ್ಯಾಂಪ್ ಬೀಮ್ ಅಡ್ಜಸ್ಟರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಇತ್ತೀಚೆಗಷ್ಟೇ ಇದೇ ಕಾರನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಹಿಳಾ ದಿನಾಚರಣೆ ದಿನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಬಾಲಿವುಡ್ ನಟರಿಗಿಂತ ಹೆಚ್ಚು ಸ್ಯಾಂಡಲ್‌ವುಡ್ ನಟರೆ ಲ್ಯಾಂಬೋರ್ಗಿನಿ ಕಾರು ಖರೀದಿಸುತ್ತಿದ್ದಾರೆ.