ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!

Published : May 02, 2019, 05:49 PM ISTUpdated : May 02, 2019, 06:36 PM IST
ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!

ಸಾರಾಂಶ

ಬಜಾಜ್ ಡೊಮಿನಾರ್ ಬೈಕ್ ಹೊಸ ಆಫರ್ ನೀಡಿದೆ. ಸದ್ಯ ಡೊಮಿನಾರ್ ಬೈಕ್ ಖರೀದಿಗೆ ಸೂಕ್ತ ಸಮಯ. ನೂತನ ಆಫರ್‌ನಲ್ಲಿ ಡೊಮಿನಾರ್ ಬೆಲೆ ಕಡಿತಗೊಳಿಸಲಾಗಿದೆ. ಇಲ್ಲಿದೆ ನೂತನ ದರದ ಮಾಹಿತಿ.  

ನವದೆಹಲಿ(ಮೇ.02): ಬಜಾಜಾ ಡೊಮಿನಾರ್ 400 ಬೈಕ್ ಖರೀದಿಸೋ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. 2019ರಲ್ಲಿ ಬಿಡುಗಡೆಯಾದ ನೂತನ ಬಜಾಜ್ ಡೊಮಿನಾರ್ ಬೈಕ್ ಬೆಲೆ ಕಡಿತಗೊಳಿಸಲಾಗಿದೆ. 4,000 ರೂಪಾಯಿ ಕಡಿತಗೊಳಿಸಿರುವ ಬಜಾಜ್ ಹೊಸ ಬೆಲೆ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: 125 ಬೈಕ್ ಯಶಸ್ಸಿನ ಬಳಿಕ KTM ಡ್ಯೂಕ್ RC 125 ಶೀಘ್ರದಲ್ಲಿ ಬಿಡುಗಡೆ!

ಬಜಾಜ್ ಡೊಮಿನಾರ್ ನೂತನ ಬೆಲೆ 1.7 ಲಕ್ಷ  ರೂಪಾಯಿ. ಈ ಹಿಂದೆ 1.74 ಲಕ್ಷ ರೂಪಾಯಿ ಬೆಲೆಗೆ ಬಿಡುಗಡೆಯಾಗಿತ್ತು. 400 CC ಹಾಗೂ ಹೆಚ್ಚಿನ ಸಿಸಿ ಹೊಂದಿರುವ ಬೈಕ್‌ಗಳಿಗೆ ಪೈಪೋಟಿ ನೀಡಲು ಬಜಾಜ್ ಸಜ್ಜಾಗಿದೆ. ಪ್ರತಿ ತಿಂಗಳ ಕನಿಷ್ಠ 10,000 ಬೈಕ್ ಮಾರಾಟದ ಗುರಿ ಹೊಂದಿದೆ. ಹೀಗಾಗಿ ಬೆಲೆ ಕಡಿತ ಮಾಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಚ್ಚರಿ ಬೆಲೆಗೆ ಹೀರೋ XPulse 200, ಹೀರೋ XPulse 200T ಬೈಕ್ ಬಿಡುಗಡೆ!

ಬೆಲೆ ಕಡಿತಕ್ಕೆ ಬಜಾಜ್ ಸ್ಪಷ್ಟ ಕಾರಣ ನೀಡಿಲ್ಲ. 2019ರಲ್ಲಿ ಬಜಾಜ್ ಡೊಮಿನಾರ್ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಮಾರಾಟದಲ್ಲಿ ಗಣನೀಯ ಏರಿಕೆ ಕಾಣಲು ಬಜಾಜ್ ಡೊಮಿನಾರ್ ಇನ್ನಿಲ್ಲದ ಪರಿಶ್ರಮವಹಿಸುತ್ತಿದೆ. ಇದೀಗ ಬೆಲೆ ಕಡಿತದ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ