10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!

Suvarna News   | Asianet News
Published : Jan 01, 2020, 08:00 PM IST
10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!

ಸಾರಾಂಶ

ಜಾವಾ ಪೆರಾಕ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ನೂತನ ಬೈಕ್ ಲಿಮಿಟೆಡ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಕೇವಲ 3 ತಿಂಗಳ ಬುಕಿಂಗ್ ತರೆದಿದ್ದು, ಮೊದಲ ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ. ನೂತನ ಬೈಕ್ 10 ಸಾವಿರ ರೂಪಾಯಿ ನೀಡಿ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.   

ಮುಂಬೈ(ಜ.01): ಬಹುನಿರೀಕ್ಷಿತ ಜಾವಾ ಪೆರಾಕ್ ಬೈಕ್ 2019ರ ನವೆಂಬರ್ ತಿಂಗಳಲ್ಲಿ  ಬಿಡುಗಡೆಯಾಗಿದೆ. ಇದೀಗ 2020ರ ಜನವರಿಯಿಂದ ಜಾವಾ ಪೆರಾಕ್ ಬೊಬರ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ಬಾಬರ್ ಬೈಕ್ ಪೈಕಿ ಕಡಿಮೆ ಬೆಲೆಯ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಪೆರಾಕ್ 10,000 ರೂಪಾಯಿ ನೀಡಿ  ಬುಕ್ ಮಾಡಿಕೊಳ್ಳಬಹುದು. ಡೀಲರ್ ಅಥವಾ ಅಧೀಕೃತ  ವೆಬ್‌ಸೈಟ್ ಮೂಲಕ ಜಾವಾ ಬೈಕ್ ಬುಕ್ ಮಾಡಬಹುದು.

ಇದನ್ನೂ ಓದಿ: ಅಲೋಯ್ ವೀಲ್ಹ್, BS6: ಹೊಸ ರೂಪದಲ್ಲಿ ನೂತನ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350!.

ಬುಕಿಂಗ್ ಮಾಡಿದ ಬಳಿಕ ಕ್ಯಾನ್ಸಲ್ ಮಾಡಿದರೂ ಸಂಪೂರ್ಣ ಹಣ ಹಿಂದಿರುಗಿಸಲಾಗುವುದು ಎಂದು ಜಾವಾ ಮೋಟಾರ್‌ಸೈಕಲ್ ಸ್ಪಷ್ಟಪಡಿಸಿದೆ. ಆದರೆ ನಿಯಮಿತ ಬುಕಿಂಗ್‌ಗೆ ಮಾತ್ರ ಅವಕಾಶವಿದೆ. 3 ತಿಂಗಳು ಮಾತ್ರ ಬುಕಿಂಗ್ ತೆರೆದಿರುತ್ತದೆ.  ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ. ಎಪ್ರಿಲ್ ತಿಂಗಳಿನಿಂದ ಪೆರಾಕ್ ಬೈಕ್ ಡೆಲಿವರಿ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!.

ಪೆರಾಕ್ ಜಾವಾ ಕಂಪಿಯ ಮೊತ್ತ ಮೊದಲ BS6 ಎಂಜಿನ್ ಬೈಕ್. ಹಳೇ ಜಾವಾ ಮೋಟಾರ್ ಬೈಕ್ ಶೈಲಿಯಲ್ಲೇ ಬೊಬರ್ ಪೆರಾಕ್ ಬಿಡುಗಡೆಯಾಗಿದೆ. ರೌಂಡ್ ಹೆಡ್‌ಲೈಟ್ಸ್, ಫ್ಲೋಟಿಂಗ್ ಸಿಂಗಲ್ ಸೀಟ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.  ಈ ಬೈಕ್ ಬೆಲೆ 1.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಜಾವಾ ಪೆರಾಕ್ ಬೈಕ್ 334 cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 30 bhp ಪವರ್ ಹಾಗೂ  31 Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಹೊಂದಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ