ಹೊಸ ವರ್ಷದಿಂದ ವಾಹನ ಖರೀದಿ ಮೇಲೆ ತೆರಿಗೆ ಕಡಿತ ಇಲ್ಲ!

By Suvarna News  |  First Published Jan 1, 2020, 3:15 PM IST

2019ಕ್ಕೆ ಗುಡ್ ಬೈ ಹೇಳಿ, 2020ರ ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ. ಈ ವರ್ಷ ಎಲ್ಲವೂ ಒಳ್ಳೆಯದಾಗಲಿ ಅನ್ನೋದು ಎಲ್ಲರ ಬಯಕೆ. ಆದರೆ ವರ್ಷದ ಮೊದಲ ದಿನವೇ ವಾಹನ ಖರೀದಿದಾರರಿಗೆ ಸರ್ಕಾರ ಶಾಕ್ ನೀಡಿದೆ.


ಪಣಜಿ(ಜ.01): 2019ರ ಅಂತ್ಯದಲ್ಲಿ ಆಟೋಮೊಬೈಲ್ ಕ್ಷೇತ್ರ ಗಣನೀಯ ಕುಸಿತ ಕಂಡಿತ್ತು. ಸೆಪ್ಟೆಂಬರ್‌ನಿಂದ ಪಾತಾಳಕ್ಕೆ ಕುಸಿತ ವಾಹನ ಮಾರಾಟ ಡಿಸೆಂಬರ್ ಅಂತ್ಯದ ವರೆಗೂ ಹಿನ್ನಡೆ ಅನುಭವಿಸಿತು. ಹೀಗಾಗಿ ವಾಹನ ಮಾರಾಟ ಉತ್ತೇಜಿಸಲು ಗೋವಾ ಸರ್ಕಾರ ವಾಹನ ಖರೀದಿ ಮೇಲಿನ ತೆರಿಗೆ ಕಡಿತಗೊಳಿಸಿತ್ತು. ಇದೀಗ ಈ ಆಫರ್ ಅಂತ್ಯಗೊಂಡಿದ್ದು, ಹೊಸ ವರ್ಷದಿಂದ ವಾಹನ ಖರೀದಿಸವವರು ಸಂಪೂರ್ಣ ತೆರಿಗೆ ಪಾವತಿಸಬೇಕು ಎಂದಿದೆ. 

ಇದನ್ನೂ ಓದಿ: ಟಾಟಾ ಮೋಟಾರ್ಸ್ ಕ್ರಾಂತಿ; ಬಿಡುಗಡೆಯಾಗಲಿದೆ 12 ಹೊಸ ಕಾರು

Latest Videos

undefined

ಗೋವಾ ಸರ್ಕಾರ 2019ರ ನವೆಂಬರ್‌ನಲ್ಲಿ ಹೊಸ ವಾಹನ ಖರೀದಿ ಮೇಲಿನ ತೆರಿಗೆ ಕಡಿತಗೊಳಿಸಿತ್ತು. ಶೇಕಡಾ 50 ರಷ್ಟು ತೆರಿಗೆ ಕಡಿತಗೊಳಿಸಿತ್ತು. ಈ ಮೂಲಕ ಕುಸಿತಗೊಂಡಿದ್ದ ವಾಹನ ಮಾರಾಟ ಉತ್ತೇಜಿಸಲು ಯೋಜನೆ ಜಾರಿ ಮಾಡಿತ್ತು. ಡಿಸೆಂಬರ್ 31ರ ವರೆಗೆ ನೂತನ ಯೋಜನೆ ಜಾರಿಯಲ್ಲಿತ್ತು. ಆದರೆ 2020ರ ಹೊಸ ವರ್ಷದಿಂದ ತೆರಿಗೆ ಕಡಿತಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: ಬರುತ್ತಿದೆ ಸ್ಪೊರ್ಟೀವ್ ಮಾರುತಿ ಸ್ವಿಫ್ಟ್ ಕಾರು!

2020ರ ಜನವರಿ 1 ರಿಂದ ಗೋವಾದಲ್ಲಿ ನೂತನ ವಾಹನ ಖರೀದಿಸುವ ಗ್ರಾಹಕರು ಸಂಪೂರ್ಣ ತೆರಿಗೆ ಪಾವತಿಸಬೇಕು. ತೆರಿಗೆ ಕಡಿತ ರದ್ದುಗೊಳಿಸದ ಬೆನ್ನಲ್ಲೇ ಗೋವಾ ಆಟೋಮೊಬೈಲ್ ಡೀಲರ್ಸ್ ಅಸಮಧಾನಗೊಂಡಿದ್ದಾರೆ. ತೆರಿಗೆ ಕಡಿತ ನಿಯವನ್ನು ಪ್ರಸ್ರಕ್ತ ಆರ್ಥಿಕ ವರ್ಷದ ವರೆಗೆ ವಿಸ್ತರಿಸಲು ಮನವಿ ಮಾಡಿದೆ.
 

click me!