ಬರುತ್ತಿದೆ ನೂತನ ಹೊಂಡಾ ಆಕ್ಟಿವಾ 6G ಸ್ಕೂಟರ್; ಜ.15ಕ್ಕೆ ಬಿಡುಗಡೆ!

By Suvarna News  |  First Published Jan 1, 2020, 5:48 PM IST

ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ ಹೊಂಡಾ ಆಕ್ಟೀವಾ ಮೊದಲ ಸ್ಥಾನದಲ್ಲಿದೆ. ಸದ್ಯ ಹೊಂಡಾ ಆಕ್ಟೀವಾ 4G ಸ್ಕೂಟರ್ ಮಾರುಕಟ್ಟೆಯಲ್ಲಿದೆ. ಇದೀಗ ಹೊಂಡಾ ಆಕ್ಟೀವಾ 6G ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ(ಜ.01): ಮೊದಲ ಬಿಡುಗಡೆಯಿಂದ ಇಲ್ಲೀವರೆಗೂ ಹೊಂಡಾ ಆಕ್ಟೀವಾ ಸ್ಕೂಟರ್  ಭಾರತದ ನಂಬರ್ 1 ಸ್ಕೂಟರ್ ಆಗಿ ಮುಂದುವರಿದಿದೆ. ಪ್ರತಿ ತಿಂಗಳು ಸರಾಸರಿ 2.5 ಲಕ್ಷ ಸ್ಕೂಟರ್ ಮಾರಾಟವಾಗುತ್ತಿದೆ. ಪ್ರತಿ ಹಂತದಲ್ಲೂ ಆಕ್ಟೀವಾ ಹೊಸತವನ್ನು ಅಳವಡಿಸಿಕೊಳ್ಳುತ್ತಾ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಿಡುಗಡೆಯಾಗಿದೆ. ಇದೀಗ ಆಕ್ಟೀವಾ ಮತ್ತೆ ಅಪ್‌ಗ್ರೇಡ್ ವರ್ಶನ್ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ವೆಸ್ಪಾ ಪ್ರತಿಸ್ಪರ್ಧಿ ಸುಜುಕಿ ಸಲ್ಯೂಟೋ ಸ್ಕೂಟರ್ ಅನಾವರಣ!

Latest Videos

undefined

ಜನವರಿ 15ಕ್ಕೆ ಹೊಂಡಾ ಆಕ್ಟೀವಾ 6G ಬಿಡುಗಡೆಯಾಗುತ್ತಿದೆ. ನೂತನ ಆಕ್ಟೀವಾ 6G ಸ್ಕೂಟರ್ BS6 ಎಂಜಿನ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಆಕ್ಟೀವಾ 5G ಸ್ಕೂಟರ್ BS4 ಎಂಜಿನ್ ಹೊಂದಿದೆ.   109.19 cc HET ಏರ್ ಕೂಲ್ಡ್ ಎಂಜಿನ್ ಹೊಂದಿರುವ ನೂತನ ಸ್ಕೂಟರ್  7.96 PS ಪವರ್ ಹಾಗೂ 9 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  

ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!...

ನೂತನ ಸ್ಕೂಟರ್ ಬೆಲೆ ಸದ್ಯ ಮಾರುಕಟ್ಟೆಯಲ್ಲಿರುವ ಆಕ್ಟೀವಾ ಸ್ಕೂಟರ್‌ಗಿಂತ 5 ರಿಂದ 8 ಸಾವಿರ ರೂಪಾಯಿ ಹೆಚ್ಚಾಗಲಿದೆ. ಹೀಗಾಗಿ ಅಂದಾಜು 60,000 ರಿಂದ 62,000 ರೂಪಾಯಿ ಎನ್ನಲಾಗುತ್ತಿದೆ. ಈಗಾಗಲೇ ಟಿವಿಎಸ್ ಜುಪಿಟರ್  BS6 ಎಂಜಿನ್ ಅಪ್‌ಗ್ರೇಡ್ ಮಾಡಿದೆ. 2020ರ ಎಪ್ರಿಲ್ 1 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು  BS6 ಎಂಜಿನ್ ಹೊಂದಿರಬೇಕು.

click me!