BS6 ಜಾವಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

By Suvarna News  |  First Published Mar 2, 2020, 4:04 PM IST

ಜಾವಾ ಮೋಟರ್‌ಸೈಕಲ್ ಅಪ್‌ಗ್ರೇಡ್ ಆಗಿದೆ. BS6 ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಬಿಡುಗಡೆಯಾಗಿದೆ. ಎಂಜಿನ್ ಸಾಮರ್ಥ್ಯ ಹೆಚ್ಚಳ ಸೇರಿದಂತ ಕೆಲ ಬದಲಾವಣೆ ಮಾಡಲಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 
 


ನವದೆಹಲಿ(ಮಾ.02): ಏಪ್ರಿಲ್ 1, 2020 ರಿಂದ ಮಾರಾಟವಾಗುವ ಎಲ್ಲಾ ನೂತನ ವಾಹಗಳು  BS6 ಎಮಿಶನ್ ಎಂಜಿನ್ ಹೊಂದಿರಬೇಕು. ಈಗಾಗಲೇ ಹಲವು ಆಟೋಮೇಕರ್ BS6 ಎಂಜಿನ್ ಅಪ್‌ಗ್ರೇಡ್ ಮಾಡಿ ವಾಹನ ಬಿಡುಗಡೆ ಮಾಡಿದೆ. ಇದೀಗ ಜಾವಾ ಮೋಟರ್‌ಸೈಕಲ್   BS6 ಎಂಜಿನ್ ಅಪ್‌ಗ್ರೇಡ್ ಮಾಡಿದೆ.

ಇದನ್ನೂ ಓದಿ: ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ!

Tap to resize

Latest Videos

undefined

 BS4 ಎಂಜಿನ್ ಮೂಲಕ ಭಾರತದಲ್ಲಿ ಸಂಚಲನ ಮೂಡಿಸಿದ್ದ ಜಾವಾ ಮೋಟರ್‌ಸೈಕಲ್ ಇದೀಗ  BS6 ಎಂಜಿನ್ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 1.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಟಾಪ್ ಮಾಡೆಲ್ ಬೆಲೆ 1.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಇದನ್ನೂ ಓದಿ: ಭರ್ಜರಿ ಆಫರ್; ಝೀರೋ ಡೌನ್‌ಪೇಮೆಂಟ್ ಮೂಲಕ ಖರೀದಿಸಿ ಜಾವಾ ಪೆರಾಕ್!

ಹಳೇ ಜಾವಾ ಬೈಕ್‌ಗಿಂತ ನೂತನ ಬೈಕ್ ಬೆಲೆ 5,000 ರೂಪಾಯಿಂದ 10,000 ರೂಪಾಯಿ ಹೆಚ್ಚಾಗಿದೆ. ಜಾವಾ 42 ಸಿಂಗಲ್ ಡಿಸ್ಕ್ ವೇರಿಯೆಂಟ್ ಬೆಲೆ 1.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ  1.65 ಲಕ್ಷ ರೂಪಾಯಿ. ಜಾವಾ 42 ಡ್ಯುಯೆಲ್ ಡಿಸ್ಕ್ ವೇರಿಯೆಂಟ್ ಬೆಲೆ 1.69 ಲಕ್ಷ  ರೂಪಾಯಿಯಿಂದ  1.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದರೊಂದಿಗೆ ಜಾವಾ ಪೆರಾಕ್ ಬೊಬ್ಬರ್ ಬೈಕ್ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. 10,000 ರೂಪಾಯಿ ನೀಡಿ ನೂತನ ಜಾವಾ ಪೆರಾಕ್ ಬೈಕ್ ಬುಕ್ ಮಾಡಿಕೊಳ್ಳಬಹುದು. 

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!