ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗ್ನಲ್, ಒನ್ ವೇ, ನೋ ಪಾರ್ಕಿಂಗ್, ಸ್ಪೀಡ್ ಲಿಮಿಟ್ ಸೇರಿದಂತೆ ಹಲವು ನಿಯಮಗಳು ಎದುರಾಗುತ್ತದೆ. ಸಿಗ್ನಲ್‌ನಲ್ಲಿ ಅಳವಡಿಸಿರುವ ಕ್ಯಾಮಾರ ಮೂಲಕ ದಂಡ ಹಾಕಲಾಗುತ್ತದೆ. ಇದೀಗ ಸಿಗ್ನಲ್ ಮಾತ್ರವಲ್ಲ, ಕ್ಯಾಮರ ಹಿಡಿದು ನಗರದಲ್ಲಿ ಸುತ್ತಾಡಿದಾಗ 22 ಕಿ.ಮೀಗೆ 250 ನಿಯಮ ಉಲ್ಲಂಘನೆ ದಾಖಲಾಗಿದೆ.
ಮುಂಬೈ(ಮಾ.01): ಸಿಗ್ನಲ್ ಅಥವಾ ಪೊಲೀಸರು ಕಂಡಾಗ ಹಲವರು ಹೆಲ್ಮೆಟ್ ಹಾಕಿಕೊಳ್ಳುತ್ತಾರೆ, ಸೀಟ್ ಬಲ್ಟ್ ಸಿಕ್ಕಿಸಿಕೊಳ್ಳುತ್ತಾರೆ, ಸ್ಪೀಡ್ ಕಡಿಮೆ ಮಾಡುತ್ತಾರೆ..ಹೀಗೆ ಹಲವಾರು. ಸಿಗ್ನಲ್ ಅಥವಾ ಪೊಲೀಸರನ್ನು ಪಾಸ್ ಆದರೆ ಸಾಕು ಮತ್ತೆ ಅದೇ ಸವಾರಿ. ಅದೆ ನಿಯವನ್ನು ಗಾಳಿಗೆ ತೂರಿ ಪ್ರಯಾಣ. ಈ ರೀತಿ ಮಾಡುವವರನ್ನು ಪತ್ತೆ ಹಚ್ಚಲು ಕ್ಯಾಮಾರೂ ಮೂಲಕ ನಗರದಲ್ಲಿ 22.4 ಕಿ.ಮೀ ಪ್ರಯಾಣಿಸಿ ಬರೋಬ್ಬರಿ 250 ನಿಯಮ ಉಲ್ಲಂಘನೆ ಮಾಡಿದವರನ್ನು ಬಹಿರಂಗ ಪಡಿಸಲಾಗಿದೆ.
ಇದನ್ನೂ ಓದಿ: ಕಾರು ಕದ್ದು ಅಡ್ಡಾ ದಿಡ್ಡಿ ಚಲಾಯಿಸಿದ ಕಳ್ಳರು; ಮಾಲೀಕನಿಗೆ 12 ಲಕ್ಷ ರೂ ಟ್ರಾಫಿಕ್ ಫೈನ್!
ಮುಂಬೈ ಮಹಾನಗರದಲ್ಲಿ ಈ ರೀತಿಯ ವಿಶೇಷ ಪ್ರಯತ್ನ ಮಾಡಲಾಗಿದೆ. ಅಂಧೇರಿಯಿಂದ ಕುರ್ಲಾ ಹಾಗೂ ಕುರ್ಲಾದಿಂದ ಅಂಧೇರಿ ನಡುವಿನ 22.4 ಕಿ.ಮೀ ಕ್ಯಾಮರ ಹಿಡಿದು ಪ್ರಯಾಣಿಸಿದ್ದಾರೆ. ಈ ವೇಳೆ ಕ್ಯಾಮಾರದಲ್ಲಿ 250 ಟ್ರಾಫಿಕ್ ನಿಯಮ ಪ್ರಕರಣಗಳು ದಾಖಲಾಗಿದೆ.ಇದರ ಒಟ್ಟು ದಂಡ 1.2 ಲಕ್ಷ ರೂಪಾಯಿ .
Here's the much awaited video. conducted an experiment to capture the road violations from Andheri E - Kurla W - Andheri E for a total distance of 22.4kms.
Check out this video & thread below for the findings of the experiment. pic.twitter.com/SNUqZFIIhg
ಇದನ್ನೂ ಓದಿ: ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!
ಮುಂಬೈನ ಸಾಮಾಜಿಕ ಕಾರ್ಯಕರ್ತರ ಗುಂಪು ಈ ಪ್ರಯತ್ನ ಮಾಡಿದೆ. ಈ ವಿಡಿಯೋವನ್ನು ಮುಂಬೈ ಟ್ರಾಫಿಕ್ ಪೊಲೀಸರ ಗಮನಕ್ಕೆ ತರಲಾಗಿದೆ. ಈ ಮೂಲಕ ಮುಂಬೈನ ರಸ್ತೆಗಳಲ್ಲಿ ಪ್ರಯಾಣಿಕರಲ್ಲಿ ಶಿಸ್ತು ತರಲು ಆಗ್ರಹಿಸಲಾಗಿದೆ. ಸಿಗ್ನಲ್‌ನಲ್ಲಿ ಮಾತ್ರವಲ್ಲ, ರಸ್ತೆಯುದ್ದಕ್ಕೂ ನಿಯಮ ಪಾಲಿಸಬೇಕು ಅನ್ನೋ ಮನವಿ ಮಾಡಲಾಗಿದೆ.