ಜಾವಾ ಮೋಟರ್‌ಬೈಕ್ ವೀಡಿಯೋ ಟೀಸರ್ ಬಿಡುಗಡೆ!

By Web DeskFirst Published Nov 11, 2018, 2:54 PM IST
Highlights

ಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಿಡುಗಡೆಗೆ ಇನ್ನು 4 ದಿನ ಬಾಕಿ ಇರುವಾಗಲೇ ಜಾವಾ ಬೈಕ್ ವೀಡಿಯೋ ಟೀಸರ್ ಬಿಡುಗಡೆ ಮಾಡಿದೆ. ವೀಡಿಯೋ ಟೀಸರ್ ಹೇಗಿದೆ? ಇಲ್ಲಿದೆ ನೋಡಿ.

ಬೆಂಗಳೂರು(ನ.11): ಜಾವಾ ಮೋಟರ್‌ಸೈಕಲ್ ಬಿಡುಗಡೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ನವೆಂಬರ್ 15 ರಂದು ಜಾವಾ ಬೈಕ್ ಬಿಡುಗಡೆಯಾಗಲಿದೆ. ಈಗಾಗಲೇ ಜಾವಾ ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರೈಸಿದೆ. ಇದೀಗ ಬಿಡುಗಡೆ ಬೆನ್ನಲ್ಲೇ ವೀಡಿಯೋ ಟೀಸರ್ ಬಿಡುಗಡೆ ಮಾಡಲಾಗಿದೆ.

2016ರಲ್ಲಿ ಮಹೀಂದ್ರ ಮೋಟಾರು ಸಂಸ್ಥೆ ಜಾವಾ ಮೋಟಾರ್ ಸೈಕಲ್ ನಿರ್ಮಾಣದ ಹಕ್ಕನ್ನ ಪಡೆದಿದೆ. ಇದೀಗ 2 ವರ್ಷಗಳ ಬಳಿಕ ಮಹೀಂದ್ರ ಜಾವಾ ಬೈಕ್ ಬಿಡುಗಡೆಗೆ ಎಲ್ಲಾ ತಯಾರಿ ನಡೆಸಿದೆ. ಇದೀಗ ಬೈಕ್ ಪ್ರಿಯರ ಕುತೂಹಲ ಇಮ್ಮಡಿಗೊಳಿಸಿರುವ ಜಾವಾ ವೀಡಿಯೋ ಟೀಸರ್ ಬಿಡುಗಡೆ ಮಾಡಿದೆ.

14 ಸೆಕಂಡುಗಳಿರುವ ಈ ವೀಡಿಯೋದಲ್ಲಿ ಜಾವಾ  ಬೈಕ್ ಕುರಿತು ಕೆಲ ಮಾಹಿತಿಗಳಿವೆ. ಜಾವಾ ಬೈಕ್ ಶಬ್ದ ಹಾಗೂ ರೆಟ್ರೋ ಲುಕ್ ಎಲ್ಲರನ್ನ ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. 

293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, 27ಪಿಎಸ್ ಹಾಗೂ 28nm ಟಾರ್ಕ್ ಉತ್ವಾದಿಸಲಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿಗೆ. ನೂತನ ಜಾವಾ ಬೈಕ್ ಬೆಲೆ 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ.

click me!