ನೂತನ ನಿಯಮದಿಂದ ಭಾರತದಲ್ಲಿ ದುಬಾರಿಯಾಗಲಿದೆ ಕಾರು!

By Web Desk  |  First Published Nov 10, 2018, 10:04 PM IST

ಸುಪ್ರೀಂ ಕೋರ್ಟ್ ನೂತನ ನಿಯಮದಿಂದ ಭಾರತದಲ್ಲಿ ಎಲ್ಲಾ ಕಾರುಗಳ ಬೆಲೆ ಹೆಚ್ಚಾಗಲಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್ ನೂತನ ನಿಯಮವೇನು? ಇದರಿಂದ ಕಾರುಗಳ ಬೆಲೆ ಹೆಚ್ಚಾಗುವುದೇಗೆ? ಇಲ್ಲಿದೆ ಹೆಚ್ಚಿನ ವಿವರ.
 


ನವದೆಹಲಿ(ನ.10): ದೆಹಲಿ ಸೇರಿದಂತೆ ಭಾರತದಲ್ಲಿ ವಾಹನಗಳಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಮಾಲಿನ್ಯ ತಡೆಗಟ್ಟಲು ಆಯಾ ನಗರಗಳು ಹಲವು ಪ್ರಯೋಗಗಳನ್ನ ಮಾಡುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ನೂತನ ನಿಯಮದಿಂದ ಕಾರುಗಳ ಬೆಲೆ ಹೆಚ್ಚಾಗಲಿದೆ.

ಎಪ್ರಿಲ್ 1, 2020ರಿಂದ ಭಾರತದಲ್ಲಿ ಭಾರತ್ ಸ್ಟೇಜ್(ಬಿಎಸ್)VI ಕಾರುಗಳನ್ನ ಮಾರಾಟ ಮಾಡಲು ಸಾಧ್ಯ. BS VI ಎಮಿಶನ್ ಎಂಜಿನ್ ಕಾರುಗಳನ್ನ ಹೊರತು ಪಡಿಸಿ ಇತರ ಯಾವುದೇ ಸ್ಟೇಜ್ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. ಹೀಗಾಗಿ ನೂತನ ತಂತ್ರಜ್ಞಾನ ಅಭಿವೃದ್ದಿಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಬೆಲೆ ಹೆಚ್ಚಾಗಲಿದೆ.

Latest Videos

undefined

2017ರಲ್ಲಿ BS IV ಎಮಿಶನ್ ನಿಯಮವನ್ನ ಜಾರಿಗೆ ತರಲಾಗಿದೆ. 2020 ರಿಂದ BS VI ಎಮಿಶನ್ ಕ್ಲೀಯರ್ ಎಂಜಿನ್ ವಾಹನಗಳಿಗೆ ಮಾತ್ರ ಅವಕಾಶ. ಸದ್ಯ ಭಾರತದಲ್ಲಿ ಈ ತಂತ್ರಜ್ಞಾನ ಹೊಂದಿರುವ 3 ಕಾರುಗಳಿವೆ. ಮರ್ಸಡೀಸ್ ಬೆಂಜ್ 350 ಡಿ , ಇ ಕ್ಲಾಸ್ ಆಲ್ ಟೆರೈನ್ ಹಾಗು BMW XI sಡ್ರೈವ್i20 ಕಾರುಗಳಲ್ಲಿ ಈ ತಂತ್ರಜ್ಞಾನವಿದೆ.

ನೂತನ ತಂತ್ರಜ್ಞಾನದಿಂದ ಎಲ್ಲಾ ಕಾರುಗಳ ಬೆಲೆ ಶೇಕಡಾ 5 ರಿಂದ 10 ರಷ್ಟು ಹೆಚ್ಚಾಗಲಿದೆ. ಇದರಿಂದ ಭಾರತದಲ್ಲಿ ಎಲ್ಲಾ ಕಾರುಗಳು ದುಬಾರಿಯಾಗಲಿದೆ. ಇದು ಮಾಲಿನ್ಯ ತಡೆಯಲು ಉತ್ತಮ ಯೋಜನೆ ಕೂಡ ಆಗಿದೆ.
 

click me!