MV ಅಗಸ್ಟಾ ಬ್ರುಟೇಲ್ 800 RR ಅಮೆರಿಕಾ ಎಡಿಶನ್ ಬೈಕ್ ಬಿಡುಗಡೆ!

By Web DeskFirst Published Apr 22, 2019, 6:18 PM IST
Highlights

ಭಾರತದಲ್ಲಿ ಇಟಲಿ ಮೂಲದ MV ಅಗಸ್ಟಾ ಬ್ರುಟೇಲ್ 800 RR ಅಮೆರಿಕಾ ಎಡಿಶನ್ ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ವಿಶೇಷತೆ ಏನು? ದುಬಾರಿ ಬೈಕ್ ಎಂದೇ ಹೆಸರುವಾಸಿಯಾಗಿರುವ MV ಅಗಸ್ಟಾ ಕೆಂಪನಿಯ ಬ್ರುಟೇಲ್ 800 RR ಅಮೆರಿಕಾ ಎಡಿಶನ್ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.
 

ನವದೆಹಲಿ(ಏ.22): ಇಟಲಿ ಮೂಲದ MV ಅಗಸ್ಟಾ ಮೋಟರ್‌ಸೈಕಲ್ ಕಂಪನಿ ಭಾರತದಲ್ಲಿ ನೂತನ ಬೈಕ್  ಬಿಡುಗಡೆ ಮಾಡಿದೆ.  MV ಅಗಸ್ಟಾ ಬ್ರುಟೇಲ್ 800 RR ಅಮೆರಿಕಾ ಎಡಿಶನ್ ಬೈಕ್ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಇದು ಲಿಮಿಟೆಡ್ ಎಡಿಶನ್ ಬೈಕ್ ಇದಾಗಿದ್ದು, ಒಟ್ಟು 200 ಬೈಕ್ ಬಿಡುಗಡೆಯಾಗಿದೆ. ಇನ್ನು ಭಾರತದಲ್ಲಿ ಕೇವಲ 5 ಬೈಕ್‌ಗಳು ಮಾತ್ರ ಮಾರಾಟಕ್ಕೆ ಲಭ್ಯ.

ಇದನ್ನೂ ಓದಿ: ಭಾರತ್ ಟ್ರೈಲರ್ ಬಿಡುಗಡೆ: ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್‌ನಲ್ಲಿ ಸಲ್ಮಾನ್ ಸ್ಟಂಟ್!

MV ಅಗಸ್ಟಾ ಬ್ರುಟೇಲ್ 800 RR ಅಮೆರಿಕಾ ಎಡಿಶನ್ ಬೈಕ್ ಬೆಲೆ 18.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಈ ದುಬಾರಿ ಬೈಕ್ 798cc, ಇನ್‌ಲೈನ್, 3 ಸಿಲಿಂಡರ್ ಎಂಜಿನ್ ಹೊಂದಿದ್ದು,  138 bhp ಪವರ್(@ 12,300 rpm) ಹಾಗೂ  86 Nm ಪೀಕ್ ಟಾರ್ಕ್ (@10,100 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಇದನ್ನೂ ಓದಿ: ಹೊಂಡಾ CBR650R ಸ್ಪೋರ್ಟ್ ಬೈಕ್ ಬಿಡುಗಡೆ!

ಸ್ಲಿಪ್ಪರ್ ಕ್ಲಚ್, 2 ವೇ ಕ್ವಿಕ್ ಶಿಫ್ಟರ್ ಹಾಗೂ 8 ಲೆವೆಲ್ ಟ್ರಾಕ್ಷನ್ ಕಂಟ್ರೋಲ್ ಹೊಂದಿದ್ದು, ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಹೊಂದಿದೆ. ಅತ್ಯಂತ ದುಬಾರಿ ಬೈಕ್‌ಗಳಲ್ಲಿ MV ಅಗಸ್ಟಾ ಕಂಪನಿ ಬೈಕ್‌ಗಳು ಮುಂಚೂಣಿಯಲ್ಲಿವೆ. ಇದೀಗ ಭಾರತಕ್ಕೂ ಈ ಬೈಕ್ ಕಾಲಿಟ್ಟಿದು, ಬೈಕ್ ಪ್ರಿಯರಲ್ಲಿ ಸಂತಸ ಮೂಡಿಸಿದೆ.

click me!