ಸಲ್ಮಾನ್ ಖಾನ್ ಅಭಿನಯದ ಭಾರತ ಟ್ರೈಲರ್ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಸಲ್ಮಾನ್ ಖಾನ್ ಬೈಕ್ ಸ್ಟೆಂಟ್ ಎಲ್ಲರ ಗಮನಸೆಳೆದಿದೆ. ಈ ಸ್ಟಂಟ್‌ಗಾಗಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್ ಬಳಸಾಲಿದೆ. ಸಲ್ಮಾನ್ ಸ್ಟೆಂಟ್ ಹಾಗೂ ಈ ಬೈಕ್ ವಿಶೇಷತೆ ಇಲ್ಲಿದೆ.
ಮುಂಬೈ(ಏ.22): ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಭಾರತ್, ಜೂನ್ 5 ರಂದು ಬಿಡುಗಡೆಯಾಗಲಿದೆ. ಈದ್ ಹಬ್ಬದ ದಿನ ಬಹುಕೋಟಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದ್ಬುತವಾಗಿ ಮೂಡಿ ಬಂದಿರುವ ಈ ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಸ್ಟಂಟ್ ಎಲ್ಲರ ಗಮನೆಸೆಳೆದಿದೆ.
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಬ್ರಿಟೀಷ್ ಬೈಕ್- ಬೆಲೆ ಎಷ್ಟು?
undefined
ಭಾರತ್ ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಆರಂಭಿಕ ದಿನಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರದಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಮೇಲೆ ಮರಣ ಭಾವಿಯಲ್ಲಿ ರೌಂಡ್ ಹೊಡೆಯೋ ದೃಶ್ಯವಿದೆ. ಬಳಿಕ 2 ಕಾರುಗಳ ಮಧ್ಯೆ ಸಲ್ಮಾನ್ ಸ್ಟಂಟ್ ಮಾಡುವ ದೃಶ್ಯ ಬಳಸಲಾಗಿದೆ. ಈ ಸ್ಟೆಂಟ್‌ಗಳಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಬಳಸಲಾಗಿದೆ.
ಇದನ್ನೂ ಓದಿ: KTM ಡ್ಯೂಕ್ -RC ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ ಪಟ್ಟಿ!
ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಬೆಲೆ 10.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 18 ಲೀಟರ್ ಮೈಲೇಜ್ ನೀಡಲಿದೆ. 1200.0 CC, 2 ಸಿಲಿಂಡರ್ ಹೊಂದಿದ್ದು, 79 bhp (@ 6550 rpm) ಪವರ್ ಹಾಗೂ 105 Nm (@ 3100 rpm) ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಇದನ್ನೂ ಓದಿ: ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್!
ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), 17 ಇಂಚಿನ ಆಲೋಯ್ ವೀಲ್ಹ್, 14.5 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಗರಿಷ್ಠ ಸ್ಪೀಡ್ 261 KMPH. ಬಾಲಿವುಡ್ ಹಲವು ಸೆಲೆಬ್ರೆಟಿಗಳು ಟ್ರಿಯಂಪ್ ಬೈಕ್ ಹೊಂದಿದ್ದಾರೆ.