ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!

By Suvarna NewsFirst Published Dec 22, 2019, 4:26 PM IST
Highlights

ಕಾರಿನ ನಂಬರ್ ಪ್ಲೇಟ್ ಅಥವಾ ರಿಜಿಸ್ಟ್ರೇಶನ್‌ಗಾಗಿ ನಾವು ಹೆಚ್ಚೆಂದರೆ 500, 1,000,2,000 ರೂಪಾಯಿ ಖರ್ಚು ಮಾಡಬಹುದು. ಈ ಹಣದಲ್ಲಿ ರಿಜಿಸ್ಟ್ರೇಶನ್ ಜೊತೆಗೆ ನಂಬರ್ ಪ್ಲೇಟ್ ವಾಹನಕ್ಕೆ ಫಿಕ್ಸ್ ಮಾಡಿ ಆಗಿರುತ್ತೆ. ಆದರೆ ಇಲ್ಲೊಬ್ಬ ಉದ್ಯಮಿ ಕಾರಿನ ರಿಜಿಸ್ಟ್ರೇಶನ್‌‍ಗೆ ಬರೋಬ್ಬರಿ 60 ಕೋಟಿ ರೂಪಾಯಿ ನೀಡಿದ್ದಾನೆ.
 

ದುಬೈ(ಡಿ.22): ಕಾರು ಖರೀದಿಸಿದ ಬಳಿಕ ನಂಬರ್ ರಿಜಿಸ್ಟ್ರೇಶನ್‌ಗೆ ಹೆಚ್ಚಿನವರು ಶ್ರಮವಹಿಸುತ್ತಾರೆ. ತಮಗಿಷ್ಟವಾದ, ಲಕ್ಕಿ, ಅದೃಷ್ಟದ ನಂಬರ್‌ಗಾಗಿ ಕಸರತ್ತು ಮಾಡುತ್ತಾರೆ. ಭಾರತದಲ್ಲಿ ಆರ್‌ಟಿಒ ಕಚೇರಿಗೆ ತೆರಳಿ ಇಂತಿಷ್ಟು ಹಣ ನೀಡಿ ತಮಗಿಷ್ಟವಾದ ನಂಬರ್ ಬುಕ್ ಮಾಡಿಕೊಳ್ಳುತ್ತಾರೆ. ಆದರೆ ವಿದೇಶಗಳಲ್ಲಿ ಫ್ಯಾನ್ಸಿ ಕಾರಿನ ನಂಬರ್ ಹರಾಜಿನ ಮೂಲಕ ಖರೀದಿಸಬೇಕು.

ಇದನ್ನೂ ಓದಿ: ಫ್ಯಾಶನ್ ನಂಬರ್ ಪ್ಲೇಟ್; 940 ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್!

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ಬಲ್ವಿಂದರ್ ಸಿಂಗ್ ತಮ್ಮ ರೋಲ್ಸ್ ರಾಯ್ಸ್ ಕಾರುಗಳ ನಂಬರ್‌ಗಾಗಿ ಬರೋಬ್ಬರಿ 60 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ರೋಲ್ಸ್ ರಾಯ್ಸ್ ಕಾರಿನ 05 ರಿಜಿಸ್ಟ್ರೇಶನ್ ನಂಬರ್‌ನ್ನು ಹರಾಜಿನ ಮೂಲಕ 45.3 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು.

ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!

ದುಬೈ ರೋಡ್ ಟ್ರಾನ್ಸ್‌ಪೋರ್ಟ್ ಆಥಾರಿಟಿ 80 ಫ್ಯಾನ್ಸಿ ನಂಬರ್ ಪ್ಲೇಟ್ ಹರಾಜಿಗೆ ಹಾಕಿದ್ದರು.  300 ಶ್ರೀಮಂತರು ಹರಾಜಿನಲ್ಲಿ ಪೈಪೋಟಿ ನಡೆಸಿದ್ದರು. ಇದೇ ಹರಾಜಿನಲ್ಲಿ 2 ನಂಬರ್ ಪ್ಲೇಟನ್ನು ಖರೀದಿಸಿದ್ದಾರೆ. 05 ಬಳಿಕ 09 ನಂಬರ್ ಪ್ಲೇಟಿಗೆ 14.7 ಕೋಟಿ ರೂಪಾಯಿ ನೀಡಿದ್ದಾರೆ. ಒಟ್ಟು 2 ನಂಬರ್ ಪ್ಲೇಟಿಗೆ 60 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ  ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!..

ನಂಬರ್ ಪ್ಲೇಟಿಗಾಗಿ ದುಬೈನಲ್ಲಿ ಗರಿಷ್ಠ ಮೊತ್ತ ವ್ಯಯಿಸಿದ ಉದ್ಯಮಿ ಅನ್ನೋ ಹೆಗ್ಗಳಿಕೆಗೆ ಬಲ್ವಿಂದರ್ ಸಿಂಗ್ ಪಾತ್ರರಾಗಿದ್ದಾರೆ. 

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!