ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ MG ZS EV ಬುಕಿಂಗ್ ಆರಂಭ; 50 ಸಾವಿರ ರೂ!

By Suvarna News  |  First Published Dec 22, 2019, 4:00 PM IST

MG ಎಲೆಕ್ಟ್ರಿಕ್ ಕಾರು ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರು ಸೇರಿದಂತೆ 5 ನಗರಗಳಲ್ಲಿ ಮಾತ್ರ ಬುಕಿಂಗ್ ಲಭ್ಯವಿದೆ. ಎಂಜಿ ಎಲೆಕ್ಟ್ರಿಕ್ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ(ಡಿ.22): ಭಾರತದಲ್ಲಿ ಅತ್ಯಲ್ಪ ಕಾಲದಲ್ಲಿ ಯಶಸ್ಸು ತಂಡ MG ಮೋಟಾರ್ಸ್ ಈಗಾಗಲೇ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. MG ಹೆಕ್ಟರ್ SUV ಕಾರಿನ ಯಶಸ್ಸಿನ ಬೆನ್ನಲ್ಲೇ MG ZS ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಇದೀಗ MG ZS EV ಕಾರಿನ ಬುಕಿಂಗ್ ಆರಂಭಗೊಂಡಿದೆ. ಗ್ರಾಹಕರು 50,000 ರೂಪಾಯಿ ನೀಡಿ MG ZS EV ಕಾರನ್ನು ಬುಕ್ ಮಾಡಬಹುದು.

ಇದನ್ನೂ ಓದಿ: ಹ್ಯುಂಡೈ ವೆನ್ಯು ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!.

Tap to resize

Latest Videos

undefined

ಬೆಂಗಳೂರು, ದೆಹಲಿ, ಮುಂಬೈ, ಅಹಮ್ಮದಾಬಾದ್ ಹಾಗೂ ಹೈದರಾಬಾದ್ ಒಟ್ಟು 5 ನಗರಗಳಲ್ಲಿ MG ZS EV ಕಾರು ಲಭ್ಯವಿದೆ. ಹೀಗಾಗಿ ಈ ನಗರಗಳಲ್ಲಿ ಮಾತ್ರ ಬುಕಿಂಗ್ ಅವಕಾಶ ಕಲ್ಪಿಸಲಾಗಿದೆ. ಮೊದಲು ಬುಕ್ ಮಾಡುವ 1000 ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಆರಂಭಿಕ 1000 ಗ್ರಾಹಕರಿಗೆ ಬೆಲೆಯಲ್ಲಿ ರಿಯಾಯಿತಿ ನೀಡುವುದಾಗಿ MG  ಮೋಟಾರ್ಸ್ ಘೋಷಿಸಿದೆ. 

ಇದನ್ನೂ ಓದಿ: ವಾಹನ ಚಾಲಕರಿಗೆ ಸಿಹಿ ಸುದ್ದಿ ನೀಡಿದ ನಿತಿನ್ ಗಡ್ಕರಿ!

MG ZS EV ಕಾರಿನಲ್ಲಿ  44.5 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ.  ಈ ಮೋಟಾರು 141 bhp ಪವರ್ ಹಾಗೂ 353 Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 340 km ಮೈಲೇಜ್ ರೇಂಜ್ ನೀಡಲಿದೆ. 

MG ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ 5 ವರ್ಷ ವಾರೆಂಟಿ, ಪ್ಲಸ್ 3 ವರ್ಷ ವಿಸ್ತರಣೆ ಅಥವಾ 1.5 ಲಕ್ಷ ಕಿ.ಮಿ ಬ್ಯಾಟರಿ ವಾರೆಂಟಿ ನೀಡಲಿದೆ. ಇದರ ಜೊತೆಗೆ 5 ವರ್ಷ ರೋಡ್ ಅಸಿಸ್ಟೆಂಟ್ ಕೂಡ ಸಿಗಲಿದೆ.
 

click me!