ವಾಹನ ಚಾಲಕರಿಗೆ ಸಿಹಿ ಸುದ್ದಿ ನೀಡಿದ ನಿತಿನ್ ಗಡ್ಕರಿ!

By Suvarna News  |  First Published Dec 20, 2019, 7:34 PM IST

ವಾಹನ ಚಾಲನೆ ಮಾಡುತ್ತಾ ಬದುಕು ಕಟ್ಟಿಕೊಂಡವರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಯ ನೀಡಿದ್ದಾರೆ. ಸಾರಿಗ ಸಚಿವರು ವಾಹನ ಚಾಲಕರಿಗೆ ನೀಡಿದ ಸಿಹಿ ಸುದ್ದಿ ಏನು? ಇಲ್ಲಿದೆ ವಿವರ.


ನವದೆಹಲಿ(ಡಿ.20): ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ ನೀಡಿದ್ದಾರೆ. ವಿಶ್ವದಲ್ಲೇ ಸೆಂಚಲನ ಮೂಡಿಸುತ್ತಿರುವ ಚಾಲಕ ರಹಿತ(ಡ್ರೈವರ್ ಲೆಸ್) ಕಾರು ಭಾರತಕ್ಕೆ ಎಂಟ್ರಿ ಕೊಡಲು ಬಿಡುವುದಿಲ್ಲ ನಿತಿನ್ ಗಡ್ಕರಿ ಅಭಯ ನೀಡಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಅರ್ಧಕ್ಕರ್ಧ ವಾಹನಗಳು ಈ ನಿಯಮ ಪಾಲಿಸಿಲ್ಲ!.

Tap to resize

Latest Videos

undefined

ಭಾರತದಲ್ಲಿ ವಾಹನ ಚಾಲಕರ ಕ್ಷೇತ್ರ ಹೆಚ್ಚು ಉದ್ಯೋಗ ಸೃಷ್ಟಿಸಿದೆ. ಸದ್ಯ ಭಾರತದಲ್ಲಿ 22 ಲಕ್ಷ ಚಾಲಕರ ಅವಶ್ಯಕತೆ ಇದೆ. ಹೀಗಿರುವಾಗ ಡ್ರೈವರ್ ಲೆಸ್ ಕಾರು ಭಾರತ ಪ್ರವೇಶಿಸಿದರೆ, ಚಾಲಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಚಾಲಕ ರಹಿತ ಕಾರು ಭಾರತಕ್ಕೆ ಲಗ್ಗೆ ಇಡಲು ಅವಕಾಶ ನೀಡುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ; ಸಾರಿಗೆ ಸಚಿವರಿಂದ ಬಂಪರ್ ಆಫರ್!

ಭಾರತ 5 ಟ್ರಿಲಿಯನ್ ಎಕಾನಮಿಗೆ ಆಟೋಮೊಬೈಲ್ ಕ್ಷೇತ್ರ ಹೆಚ್ಚಿನ ಕೊಡುಗೆ ನೀಡುತ್ತಿದೆ. ಭಾರತದ ಆಟೋಮೊಬೈಲ್ ಕ್ಷೇತ್ರ ಸದ್ಯ 4.5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಇದೀಗ ವಾಹನ ಸ್ಕ್ರಾಪ್ ಯೋಜನೆ ಅಂತಿಮ ಹಂತದಲ್ಲಿ ಇದೆ. ಭಾರತದಲ್ಲೇ ವಾಹನಗಳನ್ನು ಸ್ಕ್ರಾಪ್ ಮಾಡಿ, ಬಿಡಿ ಭಾಗಗಳ ಉತ್ಪಾದನೆ ಆರಂಭವಾದರೆ ಆಟೋಮೊಬೈಲ್ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಹೀಗಾದಲ್ಲಿ ಭಾರತ ಗರಿಷ್ಠ ವಾಹನಗಳನ್ನು ರಫ್ತು ಮಾಡುವ ಸಾಮರ್ಥ್ಯ ಪಡೆಯಲಿದೆ. ಇದು ಭಾರತದ ಆರ್ಥಿಕತೆಗೆ ಸಹಕಾರಿಯಾಗಲಿದೆ ಎಂದರು.

click me!