ನ್ಯಾನೋಗಿಂತ ಮೊದಲು ಭಾರತದಲ್ಲಿತ್ತು 12ಸಾವಿರ ರೂಪಾಯಿ ಸಣ್ಣ ಕಾರು!

By Web Desk  |  First Published Dec 23, 2018, 1:07 PM IST

ಸಣ್ಮ ಹಾಗೂ ಕಡಿಮೆ ಬೆಲೆ ಕಾರಿನಲ್ಲಿ ಟಾಟಾ ನ್ಯಾನೋ ಕಾರಿಗೆ ಪೈಪೋಟಿ ನೀಡಬಲ್ಲ ಕಾರು ಭಾರತದಲ್ಲಿಲ್ಲ. ಆದರೆ ನ್ಯಾನೋಗಿಂತ ಮೊದಲು ಭಾರತದಲ್ಲಿ ಕೇವಲ 12 ಸಾವಿರ ರೂಪಾಯಿಗೆ ಕಾರು ಲಭ್ಯವಿತ್ತು. ಈ ಕುರಿತ ರೋಚಕ ಕಹಾನಿ ಇಲ್ಲಿದೆ.
 


ಮುಂಬೈ(ಡಿ.23): ಟಾಟ ನ್ಯಾನೋ ಸಣ್ಣ ಕಾರು ಭಾರತದಲ್ಲಿ ಹೊಸ ಕ್ರಾಂತಿ ಮಾಡಿತ್ತು. 1 ಲಕ್ಷ ರೂಪಾಯಿ ಮೌಲ್ಯದ ಟಾಟಾ ನ್ಯಾನೋ ಕಾರು ಜನಸಾಮಾನ್ಯರ ಕಾರು ಕನಸನ್ನ ನನಸು ಮಾಡಿತ್ತು.  ಆದರೆ ಭಾರತದಲ್ಲಿ ಕಡಿಮೆ ಬೆಲೆಯ ಕಾರು ಪರಿಕಲ್ಪನೆ ಇದೇ ಮೊದಲಲ್ಲ. ನ್ಯಾನೋ ಕಾರಿಗಿಂತ ಮೊದಲು ಭಾರತದಲ್ಲಿ ಈ ಪ್ರಯೋಗಗಳು ನಡೆದಿದೆ. 

Latest Videos

undefined

ಇದನ್ನೂ ಓದಿ: ರಾಂಗ್ ಸೈಡ್ ಡ್ರೈವ್ ಮಾಡಿದರೆ ಲೈಸೆನ್ಸ್ ಕ್ಯಾನ್ಸಲ್-ಹೊಸ ನಿಯಮ!

ನ್ಯಾನೋ ಕಾರಿಗೆ  1 ಲಕ್ಷ ರೂಪಾಯಿ ಆಗಿದ್ದರೆ, ಇದಕ್ಕೂ ಹಿಂದೆ ಬಿಡುಗಡೆಯಾಗಿದ್ದ ಮೀರಾ ಕಾರಿಗೆ ಕೇವಲ 12,000 ರೂಪಾಯಿ. ಇದು ಸತ್ಯ. 1975ರಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆಗಿತ್ತು. ಮುಂಬೈ ಉದ್ಯಮಿ ಶಂಕರ್ ರಾವ್ ಕುಲಕರ್ಣಿ ಮೀರಾ ಅನ್ನೋ ಸಣ್ಣ ಕಾರನ್ನ ಬಿಡುಗಡೆ ಮಾಡಿದ್ದರು. ನಾಲ್ಕು ಸೀಟಿನ ಈ ಕಾರಿನ  ಬೆಲೆ 12,000 ರೂಪಾಯಿ ಮಾತ್ರ.

ಇದನ್ನೂ ಓದಿ: ಜಾವ ನನ್ನ ಜೀವ: ಹೇಗಿತ್ತು ಡಾ.ರಾಜ್‌ ಕುಮಾರ್ ಜಾವ ಬೈಕ್ ರೈಡ್?

ಮೀರಾ ಕಾರು ಹಾಗೂ ಟಾಟಾ ನ್ಯಾನೋ ಕಾರಿಗೂ ಸಾಮ್ಯತೆ ಇತ್ತು. ಎರಡು ಕಾರುಗಳು 4 ಸೀಟರ್. ಇಷ್ಟೇ ಅಲ್ಲ 20kmph ಪ್ರತಿ ಲೀಟರ್ ಪೆಟ್ರೋಲ್ ಮೈಲೇಜ್ ನೀಡುತ್ತಿತ್ತು. ಆದರೆ ಮೀರಾ ಕಾರೂ ಮಾರಾಟಕ್ಕೆ ಲಭ್ಯವಾಗಿರಲಿಲ್ಲ. 5 ಕಾರುಗಳನ್ನ ತಯಾರಿಸಿದ್ದ ಶಂಕರ್ ರಾವ್ ಕುಲಕರ್ಣಿ ದೇಶದಲ್ಲಿ ಸಂಚಲನ ಮೂಡಿಸಿದ್ದರು. ಮುಂಬೈನ ಜಯಸಿಂಗ್‌ಪುರ ನಗರ ಪಾಲಿಕೆ ಕಾರು ತಯಾರಿಕಾ ಘಟಕ ನಿರ್ಮಾಣ ಮಾಡುವಂತೆ ಉಚಿತವಾಗಿ ಜಮೀನು ನೀಡಿತ್ತು.

ಇದನ್ನೂ ಓದಿ: ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್!

ಶಂಕರ್ ರಾವ್ ಕುಲಕರ್ಣಿ ತಮ್ಮ ಕನಸನ್ನ ಸಾಕಾರ ಮಾಡಲು ಎಲ್ಲಾ ತಯಾರಿ ಮಾಡಿಕೊಂಡು ಪರ್ಮಿಶನ್‌ಗಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಆದರೆ 1975ರಲ್ಲಿ ಮಾರುತಿ ಕಾರು ಭಾರತಕ್ಕೆ ಕಾಲಿಡಲು ಸಜ್ಜಾಗಿತ್ತು. ಹೀಗಾಗಿ ಸರ್ಕಾರ ಶಂಕರ್ ರಾವ್ ಮನವಿಯನ್ನ ತರಿಸ್ಕರಿಸಿ ಜಪಾನ್ ಮೂಲದ ಸುಜುಕಿ ಸಂಸ್ಥೆಗೆ ಅನುವು ಮಾಡಿಕೊಟ್ಟಿತು.

ಶಂಕರ್ ರಾವ್ ಆಗಲೇ 50 ಲಕ್ಷ ಖರ್ಚು ಮಾಡಿ 5 ಕಾರು ನಿರ್ಮಿಸಿದ್ದರು. ಆದರೆ ಈ ಕಾರು ರಸ್ತೆಗಿಳಿಯಲು ಪರವಾನಗಿ ಇರಲಿಲ್ಲ. ಇಷ್ಟೇ ಅಲ್ಲ ಈ ಕಾರಿನ ಮೇಲಿನ ತೆರಿಗೆ ಕೂಡ ಪಾವತಿಸಿರಲಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಿಂದ ಶಂಕರ್ ರಾವ್ ಕುಲಕರ್ಣಿ ತಮ್ನ ಕನಸನ್ನ ನನಸು ಮಾಡಲು ಸಾಧ್ಯವಾಗಲಿಲ್ಲ. ಆದರೆ ಇದೇ ಕನಸನ್ನ ಟಾಟಾ ನನಸು ಮಾಡಿತು.  ನ್ಯಾನೋ ಕಾರು ಬಿಡುಗಡೆ ಮಾಡಿತು.  
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!