ಕೊರೋನಾ ವೈರಸ್ ಕಾರಣ ಭಾರತದ ವ್ಯವಹಾರಗಳು ಬಂದ್ ಆಗಿವೆ. 2019ರಲ್ಲಿ ಮಾರಾಟ ಕುಸಿತದಿಂದ ಕಂಗೆಟ್ಟ ಆಟೋಮೊಬೈಲ್ ಕಂಪನಿಗಳು 2020ರಲ್ಲಿ ಕೊರೋನಾ ವೈರಸ್ ಹೊಡೆತಕ್ಕೆ ಜರ್ಝರಿತವಾಗಿದೆ. ಇದೀಗ ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಹಲವು ಕಾರುಗಳು ಬಿಡುಗಡೆಯಾಗಲಿದೆ. ಆರ್ಥಿಕ ನಷ್ಟದಿಂದ ಹೊರಬರಲು ಭರ್ಜರಿ ಆಫರ್ ನೀಡಲಿವೆ.
ನವದೆಹಲಿ(ಏ.12); ಕಳೆದ ವರ್ಷ ಆಟೋಮೊಬೈಲ್ ಕಂಪನಿಗಳ ಸಮಸ್ಯೆಗೆ ಕೇಂದ್ರ ಸರ್ಕಾರ ಹಲವು ಸುದ್ದಿಗೋಷ್ಠಿ ನಡೆಸಿ ಮುಲಾಮು ಹಚ್ಚುವ ಕೆಲಸ ಮಾಡಿತ್ತು. ಆದರೆ ಮಾರಾಟ ಚೇತರಿಕೆ ಕಾಣಲೇ ಇಲ್ಲ. ಇತ್ತ ಕಂಪನಿಗಳು ಇಟ್ಟ GST(ತೆರಿಗೆ) ಕಡಿತ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಮಾತುಕತೆ, ನಷ್ಟದಲ್ಲಿ 2019 ಮುಗಿದೇ ಹೋಗಿತ್ತು. ಇನ್ನು 2020ರಲ್ಲಿ ಮೆಲ್ಲನೆ ಚೇತರಿಕೆ ಕಾಣಲು ಆರಂಭಿಸಿದ ವಾಹನ ಇಂಡಸ್ಟ್ರಿ, ಇದೀಗ ಕೊರೋನಾ ವೈರಸ್ ಕಾರಣ ಹಿಂದೆಂದೂ ಕಾಣದ ಹೊಡೆತ ಅನುಭವಿಸಿದೆ.
ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ದುಬಾರಿ ಬೈಕ್; ಇಲ್ಲಿದೆ ಲಿಸ್ಟ್!
ಏಪ್ರಿಲ್ ತಿಂಗಳಲ್ಲಿ ಹಲವು ಕಾರುಗಳು ಬಿಡುಗಡೆಯಾಗಬೇಕಿತ್ತು. ಕಾರಣ BS6 ನಿಯಮ ಜಾರಿಯಾಗಿದೆ. ಆದರೆ ಕೊರೋನಾ ಹಾಗೂ ಲಾಕ್‌ಡೌನ್ ಕಾರಣ ಕಾರು ಲಾಂಚ್ ಮುಂದೂಲ್ಪಟ್ಟಿದೆ. ಇತ್ತ BS4 ವಾಹನ ಮಾರಾಟವಾಗದೇ ಹಾಗೇ ಬಿದ್ದಿದೆ. ಹೀಗಾಗಿ ಇತ್ತ ಸುಪ್ರೀಂ ಕೋರ್ಟ್ ಕೆಲ ದಿನಗಳಿಗೆ BS4 ವಾಹನ ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. ಇದೀಗ ಈ ಸಮಯ ಲಾಕ್‌ಡೌನ್‌ನಲ್ಲೇ ಮುಗಿಯಲಿದೆ. ಹೀಗಾಗಿ ಲಾಕ್‌ಡೌನ್ ತೆರವಾದ ಬಳಿಕ BS4 ವಾಹನ ಮಾರಾಟಕ್ಕೆ ಗರಿಷ್ಠ 10 ದಿನ ಅವಕಾಶ ಸಿಗಬಹುದು.
ಕಾರು ನಿಲ್ಲಿಸುವಾಗ ಕ್ಲಚ್ ಮೊದಲೋ, ಬ್ರೇಕ್ ಮೊದಲೋ? ಯಾವುದು ಉತ್ತಮ ವಿಧಾನ? ಇಲ್ಲಿದೆ ಟಿಪ್ಸ್!.
ಇತ್ತ ಬಿಡುಗಡೆ ಭಾಗ್ಯ ಕಾಣಬೇಕಿದ್ದ BS6 ವಾಹನಗಳು ಒಂದರ ಮೇಲೊಂದರಂತೆ ಲಾಂಚ್ ಆಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಕಾರುಗಳ ಮೇಳ ನಡೆಯಲಿದೆ. ಆದರೆ ಖರೀದಿ ಪ್ರಮಾಣ ಹಿಂದಿನಂತೆ ಇರುವುದಿಲ್ಲ ಅನ್ನೋ ಆತಂಕ ಆಟೋ ಕಂಪನಿಗಳಿಗೆ ಶುರುವಾಗಿದೆ. ಕಾರಣ ಲಾಕ್‌ಡೌನ್ ಸಮಯದಲ್ಲೇ ಹಲವು ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಇಷ್ಟೇ ಅಲ್ಲ ಲಾಕ್‌ಡೌನ್ ಜನರಿಗೆ ಐಷಾರಾಮಿ ಜೀವನವಲ್ಲ ಮುಖ್ಯ ಅನ್ನೋದನ್ನು ಅರಿವು ಮಾಡಿಕೊಟ್ಟಿದೆ.
ಲಾಕ್‌ಡೌನ್ ವೇಳೆ ನಿಮ್ಮ ಕಾರು ನಿರ್ವಹಣೆ ಹೇಗೆ? ಪಾಲಿಸಿ 5 ಸೂತ್ರ!
ನೆಮ್ಮದಿಯ ಜೀವನಕ್ಕೆ ಹಳ್ಳಿಯ ಹೊಲ-ಗದ್ದೆ ಲೇಸು ಅನ್ನೋ ಮೈಂಡ್ ಸೆಟ್ ಬಂದಿದೆ. ಕಾರು, ಬಂಗಲೇ ಎಲ್ಲವೂ ಸಂಕಷ್ಟದಲ್ಲಿ ಕೈಹಿಡಿಯುವುದಿಲ್ಲ. ಕೃಷಿಯೊಂದೇ ಬದುಕು ಅನ್ನೋ ಮಂದಿ ಹೆಚ್ಚಾಗಿದ್ದಾರೆ. ಹೀಗಾಗಿ ಲಾಕ್‌ಡೌನ್ ತೆರವಾದ ಬಳಿಕ ಬಹುತೇಕರು ಹಳ್ಳಿಯತ್ತ ಮುಖಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಕಾರು ಖರೀದಿ ಕುಂಠಿತವಾಗಲಿದೆ ಅನ್ನೋದು ಆಟೋ ಕಂಪನಿಗಳ ಲೆಕ್ಕಾಚಾರ.
ಇದಕ್ಕಾಗಿ ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್, ವಿಶೇಷ ಸೌಲಭ್ಯಗಳನ್ನು ಆಟೋ ಕಂಪನಿಗಳು ನೀಡಲಿದೆ. ಈ ಮೂಲಕ ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಲಿದೆ. ಇದರ ಜೊತೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಅಥವಾ ಜಿಎಸ್‌ಟಿ ಕಡಿತ ಮಾಡುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಇದೇ ಕಾರಣಕ್ಕೆ ಲಾಕ್‌ಡೌನ್ ತೆರವಾದ ಬಳಿಕ ಭಾರತದಲ್ಲಿ ಕಾರು-ಬಾರು ಜೋರಾಗಲಿದೆ.