ಮಂಜು ಮುಸುಕಿದ ದಾರಿಯಲ್ಲಿ ಡ್ರೈವಿಂಗ್; 5 ತಪ್ಪು ಮಾಡದಿರಿ!

By Suvarna News  |  First Published Jan 3, 2020, 12:25 PM IST

ಭಾರತದಲ್ಲಿ ಡ್ರೈವಿಂಗ್ ಹೆಚ್ಚು ಚಾಲೆಂಜಿಂಗ್. ಸರಿಯಾದ ಸಿಗ್ನಲ್ ನೀಡುವುದರ ಬದಲು ಕೈ ಕಾಲಿನಲ್ಲೇ ಸೂಚನೆ ಅಥವಾ ಯಾವುದೇ ಸಿಗ್ನಲ್ ನೀಡದೆ ಬಲಕ್ಕೆ ಎಡಕ್ಕೆ ತಿರುಗಿಸುವವರ ಸಂಖ್ಯೆ ಹೆಚ್ಚು. ಇನ್ನು ಮಂಜು ಮುಸುಕಿದ ದಾರಿಯಲ್ಲಿನ ಡ್ರೈವಿಂಗ್ ಕೂಡ ಚಾಲೆಂಜಿಂಗ್. ಕಾರಣ ಮಂಜಿನ ದಾರಿಯಲ್ಲಿ ಹೆಚ್ಚಿನ ಗಮನಕೇಂದ್ರಿಕರಿಸಬೇಕು. ಈ ವೇಳೆ ಈ 5 ತಪ್ಪುಗಳನ್ನು ಮಾಡಲೇಬಾರದು. ಮಂಜಿನ ದಾರಿ ಡ್ರೈವಿಂಗ್‌ಗೆ 5 ಟಿಪ್ಸ್ ಇಲ್ಲಿದೆ.


ಬೆಂಗಳೂರು(ಜ.03): ಡಿಸೆಂಬರ್‌ ತಿಂಗಳಿನಿಂದ ಆರಂಭವಾಗಿರುವ ಚಳಿಯಿಂದ ರಾಜ್ಯದ ಹಲೆವೆಡೆ ಬೆಳಗಾದರೂ ಮಂಜು ಸರಿಯುವುದಿಲ್ಲ. ಇನ್ನು ಸಂಜೆಯಾಗುತ್ತಲೆ ಮತ್ತೆ ಮಂಜು ಮುಸುಕಿದ ವಾತಾವರಣ ಮನಸ್ಸಿಗೆ ಹಿತ ನೀಡಿದರೂ, ಈ ದಾರಿಯಲ್ಲಿ ಡ್ರೈವಿಂಗ್ ತುಸು ಕಷ್ಟ. ಮಂಜಿನ ವಾತಾವರಣದಲ್ಲಿ ಡ್ರೈವಿಂಗ್ ಅಪಾಯಕಾರಿ ಕೂಡ ಹೌದು. ಹೀಗಾಗಿ ಎಚ್ಚರ ವಹಿಸಬೇಕು.

ಇದನ್ನೂ ಓದಿ: ಭಾರತದ ಡಿಎಲ್ ಇದ್ರೆ ಈ ದೇಶಗಳಲ್ಲಿ ಡ್ರೈವಿಂಗ್‌ಗೆ ಪರ್ಮಿಶನ್ ಬೇಕಾಗಿಲ್ಲ!...

Tap to resize

Latest Videos

undefined

ಮಂಜು ಕವಿದ ವಾತಾವರಣದಲ್ಲಿ ದಾರಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇಷ್ಟೇ ಅಲ್ಲ ದಾರಿಯಲ್ಲಿನ ಸೂಚನ ಫಲಕ, ದಾರಿಯಲ್ಲಿನ ವಾಹನಗಳು ಗೋಚರಿಸುವುದಿಲ್ಲ. ಹೀಗಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಮಂಜು ಕವಿದ ವಾತಾವರಣದಲ್ಲಿನ ಡ್ರೈವಿಂಗ್ ವೇಳೆ ಸಾಮಾನ್ಯವಾಗಿ ಮಾಡುವ ತಪ್ಪುಗಳಿಂದ ದೂರವಿದ್ದರೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತೆ.

1 ನಿಧಾನವಾಗಿ ಚಲಿಸಿ
ಮಂಜು ಕವಿದ ದಾರಿಯಲ್ಲಿ ಪ್ರಕೃತಿಯನ್ನು ಆಸ್ವಾದಿಸುತ್ತಾ ಡ್ರೈವಿಂಗ್ ಹೆಚ್ಚು ಖುಷಿ ನೀಡುತ್ತೆ. ಹೀಗಾಗಿ ಹೆಚ್ಚಿವರು ಮ್ಯೂಸಿಕ್ ಹಾಕಿ ಕೊಂಚ ವೇಗದಲ್ಲಿ ಚಲಿಸುತ್ತಾರೆ. ಇದು ಅಪಾಯಕಾರಿ. ಮಂದು ಮುಸುಕಿದ ದಾರಿಯಲ್ಲಿ ನಿಧಾನವೇ  ಪ್ರಧಾನ. ಜೊತೆಗೆ ದಾರಿ, ವಾಹನಗಳು ಸ್ಪಷ್ಟವಾಗಿ ಗೋಚರಿಸಿದ ಕಾರಣ, ವಾಹನದ ಹಾರ್ನ್ ಶಬ್ದಗಳನ್ನು ಕೇಳಿಸಿಕೊಳ್ಳಲೇಬೇಕು. ಹೀಗಾಗಿ ಮ್ಯೂಸಿಕ್ ಆಫ್ ಮಾಡಿದರೆ ಉತ್ತಮ. 

ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ ರೂಲ್ಸ್!

2 ಲೇನ್ ಬದಲಾಯಿಸಬೇಡಿ
ಚತುಷ್ಪತ ರಸ್ತೆಯೇ ಇರಲಿ, ಡಬಲ್ ರೋಡ್, ಸಿಂಗಲ್ ರೋಡ್ ಇರಲಿ, ಮಂಜು ಕವಿದ ದಾರಿಯಲ್ಲಿ ಲೇನ್ ಬದಲಾಯಿಸುವುದು ಅಪಾಯಕಾರಿ. ವಾಹನಗಳು ಸ್ಪಷ್ಟವಾಗಿ ಗೋಚರಿಸಿದ ಕಾರಣ ಲೇನ್ ಬದಲಾಯಿಸಿದರೆ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ. 

3 ಪಾರ್ಕಿಗ್ ಲೈಟ್ ಬಳಸಬೇಡಿ
ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಹೆಚ್ಚಿನ ಅಪಾಯವಿಲ್ಲ. ಕಾರಣ ಮಂಜು ಕವಿದ ವಾತಾವರಣದಲ್ಲಿ ಹೆಚ್ಚಿನವರು ಪಾರ್ಕಿಂಕ್ ಲೈಟ್ ಹಾಕುತ್ತಾರೆ. ಇದು ತಪ್ಪು. ಕಾರಣ ಪಾರ್ಕಿಂಗ್ ಲೈಟ್ ಬಳಕೆ ಕಾರು ಅಥವಾ ವಾಹನ ನಿಲ್ಲಿಸಿದಾಗ ಹಾಕಬೇಕು. ಚಲಿಸುತ್ತಿರುವ ವಾಹನ ಪಾರ್ಕಿಂಗ್ ಲೈಟ್ ಹಾಕುವುದರಿಂದ ಇತರ ವಾಹನಗಳಿಗೆ ತಪ್ಪು ಸೂಚನೆ ನೀಡಿದಂತೆ.

4 ಫಾಗ್ ಲ್ಯಾಂಪ್ಸ್ ಅಥವಾ ಲೋ ಬೀಮ್ ಹೆಡ್ ಲ್ಯಾಂಪ್ಸ್ ಬಳಸಿ
ಮಂಜಿನ ದಾರಿಯಲ್ಲಿ ವಾಹನ ಚಲಾಯಿಸುವಾಗ ಫಾಗ್ ಲ್ಯಾಂಪ್ಸ್ ಅಥವಾ ಬಳಸುವುದು ಉತ್ತಮ. ಇದರಿಂದ ಮುಂಭಾಗದಿಂದ ಬರುವ ವಾಹನಗಳಿಗೆ ನಿಮ್ಮ ವಾಹನ ಗೋಚರಿಸುತ್ತದೆ. 

ಡ್ರೈವಿಂಗ್ ಟಿಪ್ಸ್: ಅಪಘಾತಕ್ಕೆ ಕಾರಣವಾಗಬಹುದು ಈ 5 ವಸ್ತು!

5 ಮಂಜು ಸರಿಯುವವರೆಗೆ ಕಾಯಿರಿ
ಮುಂಜಿನ ದಾರಿ ದುರ್ಗಮವಾಗಿದ್ದರೆ, ಅಥವಾ ಹೆಚ್ಚಿನ ಪ್ರಮಾಣದಲ್ಲಿ ಮುಂಜು ಆವರಿಸಿಕೊಂಡು ಡ್ರೈವಿಂಗ್ ಅಸಾಧ್ಯ ಸಂದರ್ಭ ನಿರ್ಮಾಣವಾಗಿದ್ದರೆ, ಸೂಕ್ತ ಸ್ಥಳದಲ್ಲಿ ಕಾರು ನಿಲ್ಲಿಸಿ. ಮಂಜು ಸರಿಯುವ ವರೆಗೆ ಕಾಯಿರಿ. ರಾತ್ರಿಯಾಗಿದ್ದರೆ ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿ ಎದುರಾಗಬಹುದು. ಹಗಲಿನಲ್ಲಿ ಮುಂಜು ಕೆಲ ಹೊತ್ತಲ್ಲೇ ಸರಿಯುವ ಸಾಧ್ಯತೆಗಳಿರುತ್ತದೆ.

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!