‘ಫಾಸ್ಟ್ಯಾಗ್ ಹೊಂದಿದ ವಾಹನವು ಟೋಲ್‌ಪ್ಲಾಜಾಗಳ ಮೂಲಕ ಸಂಚರಿಸುವ ಸಂದರ್ಭದಲ್ಲಿ ಫಾಸ್ಟ್ಯಾಗ್ ಸ್ಕಾನರ್ ಯಂತ್ರ ಕೆಟ್ಟು ಹೋಗಿದ್ದರೆ ಅಥವಾ ಅಲ್ಲಿಯ ಸ್ಕಾ್ಯನರ್ ಇಲ್ಲದೇ ಹೋದರೆ ಅಂತಹ ಟೋಲ್‌ಗೇಟ್‌ಗಳ ಮೂಲಕ ವಾಹನಗಳು ಉಚಿತವಾಗಿ ಸಂಚರಿಸಬಹುದು.
ನವದೆಹಲಿ (ಜ. 03): ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗುತ್ತಿದ್ದಂತೆಯೇ ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಆದರೆ ಇದೇ ವೇಳೆ, ಟೋಲ್‌ಪ್ಲಾಜಾಗಳಲ್ಲಿನ ಫಾಸ್ಟ್ಯಾಗ್ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ.
ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಸಂಗ್ರಹ ನಿಯಮದಲ್ಲಿ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗಿದ್ದು, ‘ಟೋಲ್ ಪ್ಲಾಜಾಗಳಲ್ಲಿನ ಫಾಸ್ಟ್ಯಾಗ್ ಸ್ಕಾ್ಯನರ್ ಕೆಟ್ಟಿದ್ದರೆ ಟೋಲ್ ಕಟ್ಟದೇ ಉಚಿತವಾಗಿ ಸಂಚರಿಸಬಹುದು’ ಎಂದು ತಿಳಿಸಲಾಗಿದೆ.
undefined
‘ಫಾಸ್ಟ್ಯಾಗ್ ಹೊಂದಿದ ವಾಹನವು ಟೋಲ್ ಪ್ಲಾಜಾಗಳ ಮೂಲಕ ಸಂಚರಿಸುವ ಸಂದರ್ಭದಲ್ಲಿ ಫಾಸ್ಟ್ಯಾಗ್ ಸ್ಕಾ್ಯನರ್ ಯಂತ್ರ ಕೆಟ್ಟು ಹೋಗಿದ್ದರೆ ಅಥವಾ ಅಲ್ಲಿಯ ಸ್ಕಾ್ಯನರ್ ಇಲ್ಲದೇ ಹೋದರೆ ಅಂತಹ ಟೋಲ್‌ಗೇಟ್‌ಗಳ ಮೂಲಕ ವಾಹನಗಳು ಉಚಿತವಾಗಿ ಸಂಚರಿಸಬಹುದು. ಈ ಸಂದರ್ಭದಲ್ಲಿ ‘ಶೂನ್ಯ ವಹಿವಾಟು ರಸೀದಿ’ಯನ್ನು (ಜೀರೋ ಟ್ರಾನ್ಸಾಕ್ಷನ್ ರಿಸೀಪ್ಟ್) ಕಡ್ಡಾಯವಾಗಿ ನೀಡಲಾಗುತ್ತದೆ’ ಎಂದು ನಿಯಮದಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಪರಿಷ್ಕೃತ ಆದೇಶದ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಜನವರಿ 15ರಿಂದ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ.
ಫಾಸ್ಟ್ಯಾಗ್ ಬಳಕೆದಾರರು, ಟೋಲ್ ಸಂಗ್ರಹ ದ್ವಿಗುಣ
ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಮೂಲಕ ಸಂಗ್ರಹವಾಗುತ್ತಿರುವ ಟೋಲ್ ಸುಂಕದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದು ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಬಳಿಕ ಅದರ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಸಂಕೇತವಾಗಿದೆ.
ಡಿಸೆಂಬರ್‌ನಲ್ಲಿ 6.4 ಕೋಟಿ ಫಾಸ್ಟ್ಯಾಗ್ ವಹಿವಾಟು ನಡೆದಿದ್ದು, 1256 ಕೋಟಿ ರು. ಟೋಲ್ ಈ ಮೂಲಕ ಸಂಗ್ರಹವಾಗಿದೆ. ನವೆಂಬರ್‌ನಲ್ಲಿ 3.4 ಕೋಟಿ ವಹಿವಾಟಿನ ಮೂಲಕ 774 ಕೋಟಿ ರು. ಟೋಲ್ ಸಂಗ್ರಹಿಸಲಾಗಿತ್ತು. ಅಕ್ಟೋಬರ್‌ನಲ್ಲಿ 3.1 ಕೋಟಿ ವಹಿವಾಟಿನ ಮೂಲಕ 703 ಕೋಟಿ ರು. ಟೋಲ್ ಸಂಗ್ರಹ ಮಾಡಲಾಗಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕೃತ ಅಂಕಿ-ಅಂಶಗಳು ಹೇಳಿವೆ.