ಭಾರತದ ಟಾಪ್ ಸೆಲ್ಲಿಂಗ್ ಸಬ್ ಕಾಪಾಕ್ಟ್ SUV ಕಾರುಗಳ ಪೈಕಿ ಹ್ಯುಂಡೈ ವೆನ್ಯೂ ಹೊಸ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ. ಮಾರಾಟದಲ್ಲಿ ದಾಖಲೆ ಬರೆದಿರುವ ವೆನ್ಯೂ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ.
ನವದೆಹಲಿ(ಡಿ.20): ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಹ್ಯುಂಡೈ ವೆನ್ಯು ಕಾರು ಹಲವು ದಾಖಲೆ ಬರೆದಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300 ಸೇರಿದಂತೆ SUV ಕಾರುಗಳಿಗೆ ಪೈಪೋಟಿ ನೀಡುತ್ತಿರುವ ವೆನ್ಯು ಇದೀಗ ಸುರಕ್ಷಾ ಪರೀಕ್ಷೆಯಲ್ಲಿ ಪಾಸಾಗಿದೆ. NCAP ನಡೆಸಿದ ಕ್ರಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ವೆನ್ಯೂ 4 ಸ್ಟಾರ್ ರೇಟಿಂಗ್ ಪಡೆದಿದೆ.
ಇದನ್ನೂ ಓದಿ: 2019ರಲ್ಲಿ ಮಿಂಚಿದ SUV ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್!
2019ರ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯು ಕಾರು, ಸದ್ಯ ಗರಿಷ್ಠ ಮಾರಾಟ ಕಾಣುತ್ತಿರುವ SUV ಕಾರುಗಳಲ್ಲೊಂದು. ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಬ್ರೆಜಾ ಕಾರನ್ನೇ ಹಿಂದಿಕ್ಕಿದ ಹೆಗ್ಗಳಿಕೆ ವೆನ್ಯುಗಿದೆ. ಈ ಕಾರು ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಪಡೆಯೋ ಮೂಲಕ ಸುರಕ್ಷತೆಯ ಕಾರು ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!
ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವೆನ್ಯೂ 91% ರೇಟಿಂಗ್ ಪಡೆದಿದ್ದರ, ಮಕ್ಕಳ ಸುರಕ್ಷತೆಯಲ್ಲಿ 81% ಹಾಗೂ ಕಾರಿನ ಸುರಕ್ಷತಾ ಫೀಚರ್ಸ್‌ನಿಂದ 62% ರೇಟಿಂಗ್ ಪಡೆಯೋ ಮೂಲಕ ಒಟ್ಟು 4 ಸ್ಟಾರ್ ರೇಟಿಂಗ್ ಪಡದಿದೆ. ಸುರಕ್ಷತಾ ಫಲಿತಾಂಶಗದಲ್ಲಿ ಗರಿಷ್ಠ ರೇಟಿಂಗ್ 5.
ಇದನ್ನೂ ಓದಿ: ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!
ವೆನ್ಯು ಪ್ರತಿಸ್ಪರ್ಧಿ ಮಾರುತಿ ಬ್ರೆಜಾ 4, ಫೋರ್ಡ್ ಇಕೋಸ್ಪೋರ್ಟ್ 4, ಮಹೀಂದ್ರ XUV300 4 ಸ್ಟಾರ್ ಪಡೆದಿದೆ. ಇದೇ ವಿಭಾಗದ ಟಾಟಾ ನೆಕ್ಸಾನ್ 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.