ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಿದೆ. ಪಿಯಾಜಿಯೋ ಆಪೆ ರಿಕ್ಷಾ ಇದೀಗ ಎಲೆಕ್ಟ್ರಿಕ್ ವಾಹನವಾಗಿ ಬಿಡುಗಡೆಯಾಗಿದೆ. ಕಡಿಮೆ ದರ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆ ಈ ರಿಕ್ಷಾದಲ್ಲಿದೆ.
ನವದೆಹಲಿ(ಡಿಯ18): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದ ಬೆನ್ನಲ್ಲೇ ಹಲವು ಕಾರು, ಸ್ಕೂಟರ್ ಹಾಗೂ ಬೈಕ್ ಬಿಡುಗಡೆಯಾಗಿದೆ. ಇದೀಗ ಪಿಯಾಜಿಯೋ ಆಪೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಪ್ಯಾಸೆಂಜರ್ ಆಟೋ ರಿಕ್ಷಾ ಹಾಗೂ ಗೂಡ್ಸ್ ರಿಕ್ಷಾ ಎಲೆಕ್ಟ್ರಿಕ್ ಲಭ್ಯವಿದೆ.
ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!
ನೂತನ ಪಿಯಾಜಿಯೋ ಎಲೆಕ್ಟ್ರಿಕ್ ರಿಕ್ಷಾ ಬೆಲೆ 1.97 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 36 ತಿಂಗಳು ಅಥವಾ 1 ಲಕ್ಷ ಕಿ.ಮೀಗೆ ಸೂಪರ್ ವ್ಯಾರೆಂಟಿ ಸಿಗಲಿದೆ. ಇಷ್ಟೇ ಅಲ್ಲ ಆರಂಭಿಕ 3 ವರ್ಷ ಉಚಿತ ಸರ್ವೀಸ್ ಸಿಗಲಿದೆ. 3000 ರೂಪಾಯಿ ನಿರ್ವಣಹಣಾ ವೆಚ್ಚದ ಮೂಲಕ ಅತೀ ಕಡಿಮೆ ದರದಲ್ಲಿ ಪಿಯಾಜಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ ನಿರ್ವಹಣೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಪೊರ್ಶೆ ಕಯಾನೆ ಕಾರು ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!
4.7 kWh ಲಿಥಿಯಂ ಐಯಾನ್ ಬ್ಯಾಟರಿ ಚಾಲಿತ ಪಿಯಾಜಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ ಭಾರತದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಇತರ ಎಲೆಕ್ಟ್ರಿಕ್ ಆಟೋ ರಿಕ್ಷಾಗೆ ಹೋಲಿಸಿದರೆ ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ, ವಾರೆಂಟಿ ಹಾಗೂ ಉಟಿತ ಸರ್ವೀಸ್ ಕೊಡುಗೆಗಳು ಪಿಯಾಜಿಯೋ ಕಂಪನಿಯಲ್ಲಿ ಮಾತ್ರ ಎಂದು ಪಿಯಾಜಿಯೋ MD & CEO ಡಿಯಾಗೋ ಗ್ರಾಫಿ ಹೇಳಿದರು.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ನೂತನ ಪಿಯಾಜಿಯೋ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದರು.
Launched 'Piaggio Ape' electric vehicle. It is incredible that sustainable transport is being encouraged by the automobile sector. pic.twitter.com/lfUXn1D5Dh
— Nitin Gadkari (@nitin_gadkari)