ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

Published : Jul 22, 2019, 06:10 PM IST
ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

ಸಾರಾಂಶ

ಸಣ್ಣ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹ್ಯುಂಡೈ ಸ್ಯಾಂಟ್ರೋ ಇದೀಗ  ಕಾರಿನ ಬೆಲೆ ಪರಿಷ್ಕರಿಸಿದೆ.  ನೂತನ ಸ್ಯಾಂಟ್ರೋ ಕಾರಿನ ಬೆಲೆ ವಿವರ ಇಲ್ಲಿದೆ.

ನವದೆಹಲಿ(ಜು.22): ಹ್ಯುಂಡೈ ಕಂಪನಿ ಹೊಸ ಅವತಾರದಲ್ಲಿ ಸ್ಯಾಂಟ್ರೋ ಬಿಡುಗಡೆ ಮಾಡಿ ಸಂಚಲನ ಮೂಡಿಸಿತ್ತು. ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ, ಟಾಟಾ,  ರೆನಾಲ್ಟ್ ಸೇರಿದಂತೆ ಇತರ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಸ್ಯಾಂಟ್ರೋ ಇದೀಗ ಕಾರಿನ ಬೆಲೆ ಪರಿಷ್ಕರಿಸಿದೆ. 

ಇದನ್ನೂ ಓದಿ: ಹ್ಯುಂಡೈ ವೆನ್ಯೂ ಪೈಪೋಟಿ; ಮಾರುತಿ ಬ್ರೆಜಾ ಕಾರಿಗೆ ಭರ್ಜರಿ ಆಫರ್!

ಸ್ಯಾಂಟ್ರೋ ಕಾರಿನ ಬೆಲೆ 25,000 ರೂಪಾಯಿ ಹೆಚ್ಚಳವಾಗಿದೆ. ಸ್ಯಾಂಟ್ರೋ ಬೇಸ್ ಟ್ರಿಮ್ ಮಾಡೆಲ್ ಈ ಹಿಂದಿನ ಬೆಲೆ 3.90 ಲಕ್ಷ ರೂಪಾಯಿ. ನೂತನ ಬೆಲೆ 4.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸುಪ್ರೀಂ ಕೋರ್ಟ್ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋಮೊಬೈಲ್ ಕಂಪನಿಗಳು ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಬೇಕಾದ ಪರಿಸ್ಥಿತಿಯಲ್ಲಿದೆ.

ಇದನ್ನೂ ಓದಿ: ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!

2019ರ ಅಕ್ಟೋಬರ್‌ನಿಂದ ಕನಿಷ್ಠ ಸುರಕ್ಷತೆ ಇಲ್ಲದ  ಕಾರುಗಳನ್ನು ಮಾರಾಟ ಮಾಡುವಂತಿಲ್ಲ, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ರೈವರ್ ಹಾಗೂ ಪ್ಯಾಸೆಂಜರ್ ಏರ್‌ಬ್ಯಾಗ್, ಕ್ರಾಶ್ ಟೆಸ್ಟ್‌ನಲ್ಲಿ ಕನಿಷ್ಠ ಸೇಫ್ಟಿ ಸ್ಟಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಕಡ್ಡಾಯ. ಹೀಗಾಗಿ ಬೆಲೆ ಹೆಚ್ಚಳವಾಗಲಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ