ನೂತನ ಬಜಾಜ್ CT100 ಬೈಕ್ ಬಿಡುಗಡೆಯಾಗಿದೆ. ಹೊಸ ಫೀಚರ್ಸ್, ಹೊಸ ಕಲರ್ ಸೇರಿದಂತೆ ಹಲವು ವಿಶೇಷ ಫೀಚರ್ಸ್‌ನೊಂದಿಗೆ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮುಂಬೈ(ಜು.22): ಪುಣೆ ಮೂಲದ ಬಜಾಜ್ ಮೋಟರ್ ಸೈಕಲ್ ಕಂಪನಿ ಕಡಿಮೆ ಬೆಲೆಯ ಬಜಾಜ್ CT100 ಬೈಕ್ ಬಿಡುಗಡೆ ಮಾಡಿದೆ. ಅಪ್‌ಡೇಟ್ ಫೀಚರ್ಸ್‌ನೊಂದಿಗೆ ನೂತನ ಬೈಕ್ ಬಿಡುಗಡೆ ಮಾಡಲಾಗಿದೆ. ಕಿಕ್ ಸ್ಟಾರ್ಟ್ ಹೊಂದಿರು ನೂತನ ಬಜಾಜ್ CT100 ಬೈಕ್ ಬೆಲೆ 37,997 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಎಲೆಕ್ಟ್ರಿಕ್ ಸ್ಟಾರ್ಟ್ ಬಜಾಜ್ CT100 ಬೈಕ್ ಬೆಲೆ 44,480 ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ!
undefined
ಸೆಮಿ ನಾಬಿ ಟೈಯರ್ಸ್, ಗರಿಷ್ಠ ಗ್ರೌಂಡ್ ಕ್ಲಿಯರೆನ್ಸ್, ಬಲಿಷ್ಠ ಕ್ರಾಶ್ ಗಾರ್ಡ್, ಟ್ವೀಕ್ಡ್ ಸಸ್ಪೆನ್ಶನ್ ಸೇರಿದಂತೆ ಹಲವು ವಿಶೇಷತೆಗಳು ಈ ನೂತನ ಬೈಕ್‌ನಲ್ಲಿದೆ. 115 cc DTS-i ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.4 bhp ಪವರ್ ಹಾಗೂ 9.81 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!
ನೂತನ ಬಜಾಜ್ CT100 ಬೈಕ್ ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(CBS) ಹಾಗೂ 130mm ಡ್ರಂ ಬ್ರೇಕ್ ಹೊಂದಿದೆ. ಹೀರೋ HF ಡಾನ್ ಹಾಗೂ ಟಿವಿಎಸ್ ಸ್ಟಾರ್ ಸಿಟಿ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ನೂತನ ಬಜಾಜ್ CT100 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.