ನವದೆಹಲಿ(ಜ.01): ಕೇಂದ್ರ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯ ಅಟೋಮೊಬೈಲ್ ಕ್ಷೇತ್ರಕ್ಕೆ ನಿರಾಸೆಯಾಗಿದೆ. ಎಲೆಕ್ಟ್ರಿಕ್ ವಾಹನ ಬಳಕೆಗೆ ಕೇಂದ್ರ ಸರ್ಕಾರ ಚಿತ್ತ ಹರಿಸಿದರೆ, ಪಾತಾಳಕ್ಕೆ ಕುಸಿದಿರುವ ಆಟೋಮೊಬೈಲ್ ಕ್ಷೇತ್ರದತ್ತ ಕಣ್ಣೆತ್ತಿ ನೋಡಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?

ಎಲೆಕ್ಟ್ರಿಕ್ ವಾಹನದ ಬ್ಯಾಟರಿ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಮುಂದಾಗಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ಆಮದು ಸುಂಕ ಕಡಿತಗೊಳಸಲು ನಿರ್ಧರಿಸಿದೆ. ಇದರಿಂದ ದುಬಾರಿಯಾಗಿರುವ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಲಿದೆ. 

ಇದನ್ನೂ ನೋಡಿ: ಬಜೆಟ್ ಸಾರಾಂಶ

"

ಕಳೆದ ವರ್ಷ ವಾಹನ ಮಾರಾಟ ಕುಸಿತಕ್ಕೆ  GST(ತೆರಿಗೆ) ಕಾರಣ ಅನ್ನೋ ಮಾತುಗಳು ಕೇಳಿ ಬಂದಿತ್ತು. ಹಲವು ದಿಗ್ಗಜರು GST(ತೆರಿಗೆ)  ಕಡಿತಕ್ಕೆ ಆಗ್ರಹಿಸಿದ್ದರು.  ಆಟೋಮೊಬೈಲ್ ಕ್ಷೇತ್ರದ ಮೇಲಿನ GST(ತೆರಿಗೆ) 28% ರಿಂದ 18%ಕ್ಕೆ ಇಳಿಸುವ ನಿರೀಕ್ಷಗಳಿತ್ತು. ಆದರೆ ಕೇಂದ್ರ ಯತಾಸ್ಥಿತಿ ಮುಂದುವರಿಸಿದೆ. ಜೊತೆಗೆ ಆಮದು ಸುಂಕ ಹೆಚ್ಚಿಸಿದೆ. ಹೀಗಾಗಿ ಕಾರು ಬೈಕ್ ಸೇರಿಂತೆ ಇಂದನ ವಾಹನಗಳು ದುಬಾರಿಯಾಗಲಿದೆ.

ಇದನ್ನೂ ಓದಿ: ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!

ಭಾರತದ ವಾಹನಗಳು BS6 ಎಂಜಿನ್‌ಗೆ ಪರಿವರ್ತನೆಯಾಗುತ್ತಿದೆ. ಹೀಗಾಗಿ ವಾಹನ ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ GST(ತೆರಿಗೆ) ಕಡಿತಗೊಳಿಸಿದ್ದರೆ, ವಾಹನ ಬೆಲೆ ಕೊಂಚ ಕಡಿಮೆಯಾಗುತ್ತಿತ್ತು. ಆದರೆ GST(ತೆರಿಗೆ)  ಕಡಿತದ ನಿರೀಕ್ಷೆ ಉಲ್ಟಾ ಆಗಿದೆ.

ಭಾರತದಲ್ಲಿ ಎಲಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕುರಿತು ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಹೀಗಾಗಿ ಎಲೆಕ್ಟ್ರಿಕ್ ವಾಹನ ಮಾರಾಟ ನಿರೀಕ್ಷಿತ ವೇಗ ಪಡೆದುಕೊಳ್ಳುವುದು ಅನುಮಾನವಾಗಿದೆ.