ಜೂನ್‌ನಲ್ಲಿ ನೂತನ ಹ್ಯುಂಡೈ i20 ಬಿಡುಗಡೆ; ಕಾರಿನಲ್ಲಿದೆ ಹಲವು ವಿಶೇಷತೆ!

By Suvarna News  |  First Published Jan 11, 2020, 3:14 PM IST

ಹೊಸ ವರ್ಷದಲ್ಲಿ ಹ್ಯುಂಡೈ ತನ್ನ ಹಲವು ಕಾರಗುಳನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡುತ್ತಿದೆ. ಇದೀಗ ಜೂನ್ ತಿಂಗಳಲ್ಲಿ ಹ್ಯುಂಡೈ ಕಂಪನಿಯ ಜನಪ್ರಿಯ i20 ಕಾರು ಬಿಡುಗಡೆಯಾಗುತ್ತಿದೆ. Next generation ಹ್ಯುಂಡೈ i20 ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಜ.11): ಹ್ಯುಂಡೈ ಕಂಪನಿ ಫೆಬ್ರವರಿಯಲ್ಲಿ ನೋಯ್ಡಾದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ ಮೋಟಾರು ಶೋನಲ್ಲಿ ನೂತನ ಕ್ರೆಟಾ ಪರಿಚಯಿಸುತ್ತಿದೆ. ಇದರ ಬೆನ್ನಲ್ಲೇ ಈಗಾಗಲೇ ರೋಡ್ ಟೆಸ್ಟ್ ನಡೆಸಿ ಯಶಸ್ವಿಯಾಗಿರುವ ನೂತನ ಐ20 ಕಾರು ಬಿಡುಗಡೆ ಮಾಡಲು ಮುಂದಾಗಿದೆ.

Latest Videos

undefined

ಇದನ್ನೂ ಓದಿ: ಬರೋಬ್ಬರಿ 26 ವಾಹನ ಪರಿಚಯಿಸಲು ಸಜ್ಜಾದ ಟಾಟಾ ಮೋಟಾರ್ಸ್!...

ಹೊಸ ಐ20 ಕಾರು ವಿನ್ಯಾದಲಲ್ಲಿ ಭಾರಿ ಬದಲಾವಣೆ ಇಲ್ಲ. ಹೆಚ್ಚು ಕಡಿಮೆ ಸದ್ಯ ಮಾರುಕಟ್ಟೆಯಲ್ಲಿರುವ ಕಾರಿಗಿಂತೆ ಕೊಚ್ಚ ಭಿನ್ನವಾಗಿರಲಿದೆ. ಆದರೆ ಇಂಟಿರೀಯರ್, ಫೀಚರ್ಸ್‌ಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಮುಂಭಾಗದ ಗ್ರಿಲ್ ವಿನ್ಯಾಸ ಹಾಗೂ ಗಾತ್ರದಲ್ಲಿ ಬದಲಾವಣೆ ಮಾಡಲಾಗಿದ್ದು, ಹೆಡ್‌ಲ್ಯಾಂಪ್ಸ್ ಜೊತೆ ಸೇರಿಕೊಂಡಿದೆ.

ಇದನ್ನೂ ಓದಿ: BS6 ಎಂಜಿನ್ ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭ!

ತನ ಐ20 ಕಾರು BS6 ಎಮಿಶನ್ ಎಂಜಿನ್ ಹೊಂದಿರಲಿದೆ. ಎಪ್ರಿಲ್ 1 ರಿಂದ ಮಾರಾಟವಾಗೋ ನೂತನ ವಾಹನಗಳು ಕಡ್ಡಾಯವಾಗಿ BS6 ಎಮಿಶನ್ ಎಂಜಿನ್ ಹೊಂದಿರಬೇಕು. ಮೂರು ವೇರಿಯೆಂಟ್‌ಗಳಲ್ಲಿ ಐ20 ಕಾರು ಬಿಡುಗಡೆ ಮಾಡಲಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೋ ಹಾಗ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಇದೆ.

1,2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 83hp ಪವರ್ ಹಾಗೂ 114Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಹ್ಯುಂಡೈ ವೆನ್ಯೂ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ ನೂತನ ಐಟಿ20 ಕಾರಿಗೂ ಬಳಸಲು ನಿರ್ಧರಿಸಲಾಗಿದೆ. ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ 90hp ಪವರ್ ಹೊಂದಿದೆ. 

click me!