ಲಕ್ಕಿ ಕೂಪನ್, ಲಕ್ಕಿ ಡ್ರಾ ಭಾರತೀಯರಿಗೆ ಹೊಸದಲ್ಲ. ಪ್ರತಿ ಕ್ಷೇತ್ರದಲ್ಲೂ ಹಲವು ಲಕ್ಕಿ ಡ್ರಾಗಳು ನಡೆಯುತ್ತಿರುತ್ತವೆ. ಕಾರು, ಬೈಕ್ ಸೇರಿದಂತೆ ದುಬಾರಿ ಉಡುಗೊರೆಗಳು ನೀಡಲಾಗುತ್ತೆ. ಇದೇ ರೀತಿ ಲಕ್ಕಿ ಡ್ರಾ ಮಾಡಿದ ರೆನಾಲ್ಟ್ ಡೀಲರ್ ಕೊನೆಗೆ ಕಾರು ಮಾಲೀಕನಿಗೆ 2 ಲಕ್ಷ ರೂಪಾಯಿ ನೀಡಬೇಕಾದ ಪರಿಸ್ಥಿತಿ ಬಂದಿದೆ.
ಕೊಲ್ಲಂ(ಜ.10): ಕೇರಳದಲ್ಲಿ ಓಣಂ ಅತೀ ದೊಡ್ಡ ಹಬ್ಬ. ಈ ಹಬ್ಬದಲ್ಲಿ ಎಲ್ಲಾ ಕಂಪನಿಗಳು ಡಿಸ್ಕೌಂಟ್, ಒಂದು ಕೊಂಡರೆ ಇನ್ನೊಂದು ಉಚಿತ ಸೇರಿದಂತೆ ಹಲವು ಆಫರ್ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಹೀಗೆ ರೆನಾಲ್ಟ್ ಕಾರು ಡೀಲರ್ ಕೂಡ ಭರ್ಜರಿ ಆಫರ್ ಘೋಷಿಸಿದ್ದರು. ಲಕ್ಕಿ ಡ್ರಾ ಆಫರ್ ನೀಡಿದ ಡೀಲರ್ ಕೊನೆಗೆ ಸಂಕಷ್ಟ ಅನುಭವಿಸಬೇಕಾಯಿತು.
ಇದನ್ನೂ ಓದಿ: ಮಗಳ ಮದುವೆಗೆ ಸಗಣಿ ಪೈಂಟ್ ಕಾರು; ಸಮಾರಂಭದಲ್ಲಿ ಅಪ್ಪ ರಾಕಿಂಗ್!
undefined
2014ರಲ್ಲಿ ಕೊಲ್ಲಂ ರೆನಾಲ್ಟ್ ಡೀಲರ್ ಓಣಂ ಹಬ್ಬಕ್ಕೆ ರೆನಾಲ್ಟ್ ಡಸ್ಟರ್ ಕಾರು ಖರೀದಿಸುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತೆ ಎಂದು ಜಾಹೀರಾತು ನೀಡಿತ್ತು. ಹೀಗೆ ಐವರು ರೆನಾಲ್ಟ್ ಡಸ್ಟರ್ ಕಾರು ಖರೀದಿಸುವ ಗ್ರಾಹಕರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ರೆನಾಲ್ಟ್ ಡಸ್ಟರ್ ಕಾರು ಉಡುಗೊರೆಯಾಗಿ ನೀಡಲಾಗುವುದು ಎಂದಿತ್ತು.
ಇದನ್ನೂ ಓದಿ: ಫಾಸ್ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್ ಕಟ್ಟಬೇಕಿಲ್ಲ
ಈ ಜಾಹೀರಾತು ನೋಡಿ ವಕೀಲರೊಬ್ಬರು ರೆನಾಲ್ಟ್ ಡಸ್ಟರ್ ಕಾರು ಬುಕ್ ಮಾಡಿದ್ದಾರೆ. ಈ ವೇಳೆ ಲಕ್ಕಿ ಡ್ರಾ ಕೂಪನ್ ಕೂಡ ನೀಡಲಾಗಿದೆ. ಲಕ್ಕಿ ಡ್ರಾ ಕುರಿತು ಮೊಬೈಲ್ ಮೆಸೆಜ್ ಹಾಗೂ ಪ್ರಕಟಣೆ ಮೂಲಕ ತಿಳಿಸಲಾಗುವುದು ಎಂದಿದ್ದಾರೆ.
ತಿಂಗಳು ಕಳೆದು ವರ್ಷ ಉರುಳಿದರೂ ಲಕ್ಕಿ ಡ್ರಾ ಕುರಿತು ಯಾವುದೇ ಸುಳಿವು ಸಿಗಲಿಲ್ಲ. ಈ ಕುರಿತು ವಕೀಲರು ಡೀಲರ್ ಸಂಪರ್ಕಿಸಿದ್ದಾರೆ. ಆದರೆ ಯಾವುದೇ ಉತ್ತರ ಬಂದಿಲ್ಲ. ಡೀಲರ್ ಪ್ರಕಟಣೆ, ಮೆಸೆಜ್ ಬರದೇ ಇದ್ದಾಗ ವಕೀಲರು ಗ್ರಾಹಕರ ವೇದಿಕೆಗೆ ದೂರು ನೀಡಿದ್ದಾರೆ. ಲಕ್ಕಿ ಡ್ರಾನಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಗ್ರಾಹಕರನ್ನು ಸೆಳೆಯಲು ಡೀಲರ್ ಸುಳ್ಳು ಕೊಡುಗೆ ಘೋಷಿಸಿದ್ದಾರೆ ಎಂದು ದೂರು ನೀಡಿದರು.
ವಕೀರಲ ದೂರ ಆಧರಿಸಿ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಡೀಲರ್ ತಪ್ಪು ಮಾಡಿರುವುದು ಪತ್ತೆ ಹಚ್ಚಿದೆ. ಇಷ್ಟೇ ಅಲ್ಲ ದೂರುದಾರ ವಕೀಲರಿಗೆ ಲಕ್ಕಿ ಡ್ರಾ ಆಮಿಷ ಒಡ್ಡಿ ಕಾರು ಮಾರಾಟ ಮಾಡಿದ ಕಾರಣಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.