ಹುಂಡೈ ಗ್ರ್ಯಾಂಡ್ i10 NIOSಕಾರು ಬಿಡುಗಡೆ: ಬೆಲೆ 4.99 ಲಕ್ಷ ರೂಪಾಯಿ!

By Web DeskFirst Published Aug 20, 2019, 6:46 PM IST
Highlights

ಆಕರ್ಷ ಲುಕ್, ಹೆಚ್ಚುವರಿ ಫೀಚರ್ಸ್ ಹೊಂದಿರುವ ಹುಂಡೈ ಗ್ರ್ಯಾಂಡ್ i10 NIOSಕಾರು ಬಿಡುಗಡೆಯಾಗಿದೆ. ನೂತನ ಕಾರು ಬೋಲ್ಡ್ ಹಾಗೂ ಸ್ಟೈಲೀಶ್ ಲುಕ್ ಹೊಂದಿದೆ. ಕಡಿಮೆ ಬೆಲೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಕಾರು ಇದೀಗ ಸಣ್ಣ ಕಾರು ವಿಭಾಗದಲ್ಲಿ ಸಂಚಲನ ಮೂಡಿಸಲಿದೆ. 

ಬೆಂಗಳೂರು(ಆ.20):  ಭಾರತದ 2ನೇ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿ ಹ್ಯುಂಡೈ ನೂತನ  ಹುಂಡೈ ಗ್ರ್ಯಾಂಡ್ i10 NIOS ಕಾರು ಬಿಡುಗಡೆ ಮಾಡಿದೆ. ಸಣ್ಣ ಕಾರಿನಲ್ಲಿ ಕ್ರಾಂತಿ ಮಾಡಿರುವ ಹ್ಯುಂಡೈ i10 ಇದೀಗ ಹೆಚ್ಚು ಸ್ಟೈಲೀಶ್, ಬೋಲ್ಡ್, ಆಕರ್ಷಕ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ  ಹುಂಡೈ ಗ್ರ್ಯಾಂಡ್ i10 NIOS ಮಾರುಕಟ್ಟೆ ಪ್ರವೇಶಿಸಿದೆ. ಈ ವರ್ಷ ಹ್ಯುಂಡೈ ಬಿಡುಗಡೆ ಮಾಡುತ್ತಿರು 3ನೇ ಕಾರಿದು. ಇದಕ್ಕೂ ಮೊದಲು ವೆನ್ಯು ಹಾಗೂ ಎಲೆಕ್ಟ್ರಿಕ್ ಕೋನಾ Suv ಬಿಡುಗಡೆ ಮಾಡಿದೆ.   

ಇದನ್ನೂ ಓದಿ: 2 ತಿಂಗಳಲ್ಲಿ ಹ್ಯುಂಡೈ ವೆನ್ಯೂ ಕಾರು ದಾಖಲೆ; ಆತಂಕದಲ್ಲಿ ಮಾರುತಿ!

ನೂತನ ಕಾರಿನ ಬೆಲೆ 4.99 ಲಕ್ಷ ರೂಪಾಯಿಯಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ 7.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಹೊಚ್ಚ ಹೊಸ Hyundai GRAND i10 NIOS ಭಾರತೀಯ ನಗರ ಪ್ರದೇಶದ ಯುವ ಪೀಳಿಗೆಗೆ ಬೋಲ್ಡ್ & ಸ್ಟೈಲಿಶ್ ವಿನ್ಯಾಸ, ಪ್ರೀಮಿಯಂ & ವಿಶಾಲವಾದ ಕ್ಯಾಬಿನ್, ಅತ್ಯಾಧುನಿಕ ಪವರ್‍ಟ್ರೇನ್ ಆಯ್ಕೆಗಳು, ಸ್ಮಾರ್ಟ್ ಹಾಗೂ ನವೀನ ತಂತ್ರಜ್ಞಾನ ಮತ್ತು ಪರಿಪೂರ್ಣವಾದ ಕಾರಾಗಿ ಹ್ಯುಂಡೈ GRAND i10 NIOS ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 1.2 ಲೀಟರ್ ಪೆಟ್ರೋಲ್ & 1.2 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತ; ಕೋನಾ ಕಾರಿನ ಬೆಲೆ ಇಳಿಕೆ!

ಹುಂಡೈ ಸಿಗ್ನೇಚರ್ ಡೈನಾಮಿಕ್ ಲುಕ್ ಹೊಂದಿದೆ. ಇದು ಕ್ಯಾಸ್ಕೇಡಿಂಗ್ ಗ್ರಿಲ್‍ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚು ಆಕರ್ಷಣೀಯವಾಗಿದೆ.  ಹೆಚ್ಚು ಮೌಲ್ಯ, ಹೆಚ್ಚು ವೈಶಿಷ್ಟ್ಯತೆಗಳು, ಹೆಚ್ಚು ಸ್ಥಳಾವಕಾಶ, ಹೆಚ್ಚು ಆರಾಮದಾಯಕತೆ ಮತ್ತು ಹೆಚ್ಚು ಕುತೂಹಲ ಮೂಡಿಸುವ ಹಾಗೂ ಗ್ರಾಹಕರ ನೆಚ್ಚಿನ ಕಾರಾಗಲಿದೆ ಅನ್ನೋದು ಕಂಪನಿ ನಂಬಿಕೆ. 

ಇದನ್ನೂ ಓದಿ: ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

ಹೊಸದಾದ Hyundai GRAND i10 NIOS ಕಾರು ಭಾರತದಲ್ಲೇ ತಯಾರಾಗಿದ್ದು, ವಿಶ್ವದ ಉತ್ಪನ್ನವಾಗಿ ತಯಾರಿಸಲಾಗಿದೆ. ಹುಂಡೈನ ಜಾಗತಿಕ ಮಾರುಕಟ್ಟೆ ಪ್ರಗತಿಯ ಯೋಜನೆಯಲ್ಲಿ ಭಾರತೀಯ ಮಾರುಕಟ್ಟೆ ಪ್ರಮುಖವಾಗಿದೆ. ನಾವು ಇದೀಗ ಹೊಚ್ಚ ಹೊಸದಾದ 3 ನೇ ತಲೆಮಾರಿನ GRAND i10 NIOS ಕಾರನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದ್ದು, ಇದು ಭಾರತದಲ್ಲಿ ಐ10 ಬ್ರ್ಯಾಂಡ್‍ನ ಸತತ ಮೂರನೇ ಕಾರು ಆಗಿದೆ. ನಮ್ಮ ಗ್ರಾಹಕರನ್ನು ಸಂತುಷ್ಟರನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಈ ಹೊಸ ಕಾರು ಬಿಡುಗಡೆಯೊಂದಿಗೆ ಪೂರೈಸುತ್ತಿದ್ದೇವೆ ಎಂದು  ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ & ಸಿಇಒ ಎಸ್‍ಎಸ್ ಕಿಮ್ ಹೇಳಿದರು.

click me!