ಭಾರತ ಈಗ ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಹೆಜ್ಜೆ ಇಡುತ್ತಿದೆ. 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳೇ ತುಂಬಿಕೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ GST(ತೆರಿಗೆ) ಕಡಿತಗೊಳಿಸಿದ ಬಳಿಕ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಹೀರೋ ಎಲೆಕ್ಟ್ರಿಕ್ 2 ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ, ವಿಶೇಷತೆ ಇಲ್ಲಿದೆ.
ಬೆಂಗಳೂರು(ಆ.20): ಭಾರತದಲ್ಲೀಗ ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಬೆಂಗಳೂರು ಮೂಲದ ಎದರ್ ಎನರ್ಜಿ, ಗುರುಗಾಂವ್ ಮೂಲದ ಒಕಿನಾವ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿವೆ. ಇದರ ಬೆನ್ನಲ್ಲೇ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬ್ರ್ಯಾಂಡ್ ಹೀರೋ ಎಲೆಕ್ಟ್ರಿಕ್ ಹೊಸ ಎರಡು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಆಪ್ಟಿಮಾ ER ಮತ್ತು NYX ER (ವಿಸ್ತರಿತ ಶ್ರೇಣಿ) ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೂಲಕ ಭಾರತದ ಮೊದಲ ಹೆವಿ ಡ್ಯೂಟಿ ಮತ್ತು ಹೆಚ್ಚು ವೇಗದ ಇ-ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಿದೆ. ಆಪ್ಟಿಮಾ ER ಮತ್ತು NYX ER ದೇಶದ ಎಲ್ಲಾ ಹೀರೋ ಎಲೆಕ್ಟ್ರಿಕ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿವೆ.
ಇದನ್ನೂ ಓದಿ: ಬರುತ್ತಿದೆ ಬೆಂಗಳೂರು ಮೂಲದ Emflux TWO ಎಲೆಕ್ಟ್ರಿಕ್ ಬೈಕ್ !
undefined
ನೂತನ ಆಪ್ಟಿಮಾ ER ಸ್ಕೂಟರ್ ಬೆಲೆ 68,721 ರೂಪಾಯಿ ಮತ್ತುNYX ER ಸ್ಕೂಚರ್ ಬೆಲೆ 69,754 ರೂಪಾಯಿಗಳಾಗಿವೆ(ಎಕ್ಸ್ ಶೋರೂಂ ಬೆಲೆ). ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಸ್ಕೂಟರ್ ಬ್ಯಾಟರಿಗೆ 5 ವರ್ಷ ಯಾವುದೇ ಅಂಜಿಕೆಯಿಲ್ಲದೆ ಬಳಸಬಹುದು ಎಂದಿದೆ.
ಇದನ್ನೂ ಓದಿ: ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!
ಎಲ್ಲಾ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳನ್ನು ನೀಡಲು ಬಯಸಿದ್ದೇವೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಬಾಳಿಕೆಯಂತಹ ಇ-ಸ್ಕೂಟರ್‌ಗಳ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಹಕರಿಂದ ಸಾಕಷ್ಟು ಬೇಡಿಕೆಗಳು ಬಂದಿದ್ದವು. ಇದೀಗ ಎನ್‍ವೈಎಕ್ಸ್ ಇಆರ್ ಮತ್ತು ಆಪ್ಟಿಮಾ ಇಆರ್‍ಗಳ ಮೂಲಕ ನಾವು ಗ್ರಾಹಕರ ಬಹುದಿನಗಳ ಬೇಡಿಕೆಯನ್ನು ಪೂರೈಸುತ್ತಿದ್ದೇವೆ. ಎಫ್‍ಎಎಂಇ II ನ ಪ್ರಯೋಜನಗಳೊಂದಿಗೆ ಬಿಡುಗಡೆ ಮಾಡಿರುವ ಈ ಹೊಸ ಇ-ಸ್ಕೂಟರ್‌ಗಳನ್ನು ಗ್ರಾಹಕರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೋಹಿಂದರ್ ಗಿಲ್ ತಿಳಿಸಿದರು.
ಇದನ್ನೂ ಓದಿ: ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!
ದಕ್ಷಿಣ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಕಂಪನಿಯು ಬೆಂಗಳೂರಿನಲ್ಲಿ ಹೊಸ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿತು. ದಕ್ಷಿಣ ಭಾರತದಲ್ಲಿ ತನ್ನ ಕಾರ್ಯಾಚರಣೆ ಮತ್ತು ಕಾರ್ಯತಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೊಸ ಗ್ರಾಹಕ ಟಚ್‍ಪಾಯಿಂಟ್‍ಗಳನ್ನು ಆರಂಭಿಸಲಿದೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯು ದೇಶದಲ್ಲಿ 615 ಟಚ್‍ಪಾಯಿಂಟ್‍ಗಳನ್ನು ಹೊಂದಿದ್ದು, 2020 ರ ವೇಳೆಗೆ ಇವುಗಳ ಸಂಖ್ಯೆಯನ್ನು 1000 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಈ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಬ್ರ್ಯಾಂಡ್ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ. ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿಯು ಇ-ಸ್ಕೂಟರ್ ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 5 ಲಕ್ಷ ಸ್ಕೂಟರ್ ಉತ್ಪಾದನೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಬಜಾಜ್ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶ!
ಎನ್‍ವೈಎಕ್ಸ್ ಇಆರ್ ಬಿಡುಗಡೆಯೊಂದಿಗೆ ಕಂಪನಿಯು ಬಿ2ಬಿ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸಲು ಬೇಕಾದ ಹೆವಿ ಡ್ಯೂಟಿ ಉತ್ಪನ್ನಗಳನ್ನು ಪರಿಚಯಿಸಲು ವಿಸ್ತಾರವಾದ ಯೋಜನೆಗಳನ್ನು ರೂಪಿಸುತ್ತಿರುವ ಕಂಪನಿಯು, ವಾಣಿಜ್ಯ ಕ್ಷೇತ್ರಕ್ಕೂ ವಿಸ್ತರಣೆ ಮಾಡಲಿದೆ. ಕಡಿಮೆ ಬಂಡವಾಳ ಅಗತ್ಯವಿರುವ ಈ ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳು ವಾಣಿಜ್ಯ ಬಳಕೆಗೆ ಸೂಕ್ತ ಎನಿಸಲಿವೆ. ಮತ್ತು ಶೂನ್ಯ ಕಾರ್ಬನ್ ಮಾಲಿನ್ಯ ಹೊಂದಿವೆ.
ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಹೀರೋ ಎಲೆಕ್ಟ್ರಿಕ್, ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ಉತ್ತೇಜಿಸುವುದು ಮತ್ತು ಅಳವಡಿಕೆಯತ್ತ ದೂರದೃಷ್ಟಿ ಹೊಂದಿರುವ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪೂರಕವಾದ ಸಂಶೋಧನೆ ನಡೆಸುವ ಸಂಬಂಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಂಡವಾಳ ಹೂಡುತ್ತಿದೆ. ಈ ಮೂಲಕ ಐಸ್ ವಾಹನಗಳಿಗೆ ಪರ್ಯಾಯ ವಾಹನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಹೀರೋ ಎಲೆಕ್ಟ್ರಿಕ್‍ನ ಈ ಹೈಸ್ಪೀಡ್ ವಾಹನಗಳು ಎಫ್‍ಎಎಂಇ II ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿವೆ ಮತ್ತು ಕಡಿಮೆ ಜಿಎಸ್‍ಟಿ ದರವನ್ನು ಹೊಂದಿವೆ. ಇದರಿಂದ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಆಕರ್ಷಕ ಮತ್ತು ಕೈಗೆಟುಕುವ ದರಲ್ಲಿ ಪಡೆಯಬಹುದಾಗಿದೆ.
ದ್ವಿಚಕ್ರ ವಾಹನಗಳನ್ನು ಖರೀದಿಸುವ ಆಕಾಂಕ್ಷೆ ಹೊಂದಿರುವವರಿಗೆ ಮತ್ತು ಪರಿಸರ ಕಾಳಜಿಯ ಸಾರಿಗೆಯನ್ನು ಬಯಸುವವರಿಗೆ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್‍ಗಳು ಸೂಕ್ತವೆನಿಸುತ್ತವೆ. ಹಗುರವಾದ ಮತ್ತು ಹೈಸ್ಪೀಡ್ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಸ್ಕೂಟರ್‍ಗಳನ್ನು ಅವರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.