ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

By Web Desk  |  First Published Aug 18, 2019, 5:07 PM IST

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್  ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಸ್ಕೂಟರ್ ಬೆಲೆಯಲ್ಲಿ ಡಿಸ್ಕೌಂಟ್ ಹಾಗೂ ಉಚಿತ ವಿದೇಶಿ ಪ್ರವಾಸದ ಆಫರ್ ಘೋಷಿಸಲಾಗಿದೆ. ಈ ಕೊಡುಗೆ ಆಕ್ಟೋಬರ್ ಅಂತ್ಯದವರೆಗೆ ಇರಲಿದೆ.


ದೆಹಲಿ(ಆ.18): ಗುರುಗಾಂವ್ ಮೂಲದ  ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಕಳೆದ ವರ್ಷ ಸ್ಕೂಟರ್ ಬಿಡುಗಡೆ ಮಾಡಿ ದೇಶದ ಗಮನಸೆಳೆದಿತ್ತು. ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನದ ಮೇಲಿನ ಜಿಎಸ್‌ಟಿ(ತೆರಿಗೆ) ಕಡಿತಗೊಳಿಸಿದ ಬೆನ್ನಲ್ಲೇ ಎಲ್ಲಾ ಎಲೆಕ್ಟ್ರಿಕ್ ವಾಹನ ಬೆಲೆ ಕಡಿಮೆಯಾಗಿದೆ. ಇದೀಗ ಒಕಿನಾವ ಸ್ಕೂಟರ್ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ನೀಡಿದೆ. ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕನಿಗೆ ದರ ಕಡಿತ ಹಾಗೂ ಉಚಿತ ವಿದೇಶಿ ಪ್ರವಾಸ ಆಫರ್ ನೀಡಲಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಬರುತ್ತಿದೆ ಬೆಂಗಳೂರು ಮೂಲದ Emflux TWO ಎಲೆಕ್ಟ್ರಿಕ್ ಬೈಕ್ !

ಒಕಿನಾವ ಎಲೆಕ್ಟ್ರಿಕ್ ಯಾವುದೇ ವೇರಿಯೆಂಟ್ ಸ್ಕೂಟರ್ ಖರೀದಿಸಿದರು 1000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇಷ್ಟೇ ಸ್ಕೂಟರ್ ಖರೀದಿಸುವ 20 ಅದೃಷ್ಟ ಗ್ರಾಹಕರಿಗೆ ವಿದೇಶಿ ಪ್ರವಾಸ ಉಚಿತವಾಗಿ ನೀಡಲು ಒಕಿನಾವ ನಿರ್ಧರಿಸಿದೆ. ಅಕ್ಟೋಬರ್ 31 ವರೆಗೆ ಈ ಆಫರ್ ವಿಸ್ತರಿಲಾಗಿದೆ. 

ಇದನ್ನೂ ಓದಿ: ಕಾರು ಗಿಫ್ಟ್ ಕೇಳಿದ ಅಭಿಮಾನಿ; ಮಾಲೀಕ ಮಹೀಂದ್ರ ಉತ್ತರಕ್ಕೆ ಕಕ್ಕಾಬಿಕ್ಕಿ!

 ಒಕಿನಾವಾ ಸ್ಕೂಟರ್‌ನಲ್ಲಿ i-ಪ್ರೈಸ್+, ರಿಡ್ಜ್+, ರಿಡ್ಜ್, ಪ್ರೈಸ್, ರೈಸ್ ವೇರಿಯೆಂಟ್ ಲಭ್ಯವಿದೆ. ಎರಡೂ ವೇರಿಯೆಂಟ್ ಕೂಡ ಆ್ಯಸಿಡ್ ಹಾಗೂ ಲೀಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಆರಾಮದಾಯಕ ರೈಡ್ ನೀಡಲಿದೆ. ಸಂಪೂರ್ಣ ಚಾರ್ಜ್ ಮಾಡಲು 3 ಗಂಟೆ ಸಮಯ ತೆಗೆದುಕೊಳ್ಳುತ್ತೆ. ಸಂಪೂರ್ಣ ಚಾರ್ಜ್‌ಗೆ 160 ಕಿ.ಮೀ ಮೈಲೇಜ್ ನೀಡಲಿದೆ.  ಒಕಿನಾವ ಐ ಪ್ರೈಸ್ ಬೆಲೆ(ಹಳೇ ಬೆಲೆ) 1.15 ಲಕ್ಷ ರೂಪಾಯಿ. 

click me!