ಫ್ರೀಡಂ ಡ್ರೈವ್; ಸ್ವಾತಂತ್ರ್ಯ ದಿನಾಚರಣೆಗೆ ಹ್ಯುಂಡೈ ವಿಶೇಷ ಆಫರ್!

Published : Aug 14, 2020, 05:34 PM ISTUpdated : Aug 14, 2020, 05:36 PM IST
ಫ್ರೀಡಂ ಡ್ರೈವ್; ಸ್ವಾತಂತ್ರ್ಯ ದಿನಾಚರಣೆಗೆ ಹ್ಯುಂಡೈ ವಿಶೇಷ ಆಫರ್!

ಸಾರಾಂಶ

ದೇಶದಲ್ಲೀಗ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಹ್ಯುಂಡೈ ಫ್ರೀಡಂ ಡ್ರೈವ್ ಅನ್ನೋ ವಿಶೇಷ ಆಫರ್ ಯೋಜನೆ ಜಾರಿಗೆ ತಂದಿದೆ. 7 ದಿನದ ಈ ಆಫರ್ ಮೂಲಕ ಹ್ಯುಂಡೈ ಗ್ರಾಹಕರು ಸೇವೆಯನ್ನು ಪಡೆದುಕೊಳ್ಳಬುಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಆ.14): ಕೊರೋನಾ ವೈರಸ್ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಸರ್ಕಾದ ಮಾರ್ಗಸೂಚಿಗಳನ್ನು ಪಾಲಿಸಬೇಕು.  ಅದ್ಧೂರಿ ಹಾಗೂ ಜನರು ಒಟ್ಟಾಗಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತು ಹ್ಯುಂಡೈ ಇಂಡಿಯಾ ವಿಶೇಷ ಫ್ರೀಡಂ ಡ್ರೈವ್ ಪ್ಯಾಕೇಜ್ ಘೋಷಿಸಿದೆ.

ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ.

ಹ್ಯುಂಡೈ ಘೋಷಣೆ ಮಾಡಿರುವ ಫ್ರೀಡಂ ಡ್ರೈವ್ ಆಫರ್ ದೇಶಾದ್ಯಂತ ಲಭ್ಯವಿದೆ. ಫ್ರೀಡಂ ಡ್ರೈವ್ ಪ್ಯಾಕೇಜ್ ಮೂಲಕ ಹ್ಯುಂಡೈ ಗ್ರಾಹಕರು ತಮ್ಮ ಕಾರುಗಳನ್ನು ತಪಾಸಣೆ ನೀಡಬುಹುದು. ವಿಶೇಷವಾಗಿ ಕಾರಿನ ಒಳಭಾಗ ಸ್ಯಾನಿಟೈಸೇಶನ್, ಸರ್ವೀಸ್ ಸೇರಿದಂತೆ ಹಲವು ಸೌಲಭ್ಯಗಳು ಈ ಪ್ಯಾಕೇಜ್‌ನಲ್ಲಿವೆ. ಆಗಸ್ಟ್ 14 ರಿಂದ ಆಗಸ್ಟ್ 21ರ ವರೆಗೆ ಈ ಆಫರ್ ಲಭ್ಯವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!

ಫ್ರೀಡಂ ಡ್ರೈವ್ ಆಫರ್ ಮೂಲಕ ಶೇಕಡಾ 15 ರಷ್ಟು ಲೇಬರ್ ಚಾರ್ಜ್ ರಿಯಾಯಾತಿ ಹಾಗೂ ಶೇಕಡಾ 15 ರಷ್ಟು ಅಂಡರ್ ಬಾಡಿ ಕೋಟಿಂಗ್ ರಿಯಾಯಿತಿ ಸಿಗಲಿದೆ. ಸ್ಯಾನಿಟೈಸೇಶನ್ ಸೇರಿದಂತೆ ಇತರ ಸೇವೆಗಳ ಬೆಲೆ ಕೇವಲ 599 ರೂಪಾಯಿಯಿಂದ ಆರಂಭಗೊಳ್ಳಲಿದೆ,

ಹ್ಯುಂಡೈ ಗ್ರಾಹಕರಿಗೆ ನೆರವಾಗಲು ಈ ಸೇವೆ ಆರಂಭಿಸಲಾಗಿದೆ. ಕೊರೋನಾ ವೈರಸ್ ಹಾಗೂ ಅತಿಯಾದ ಮಳೆಯಿಂದ ತಮ್ಮ ಕಾರುಗಳನ್ನು ಸುರಕ್ಷಿತವಾಗಿಡಲು ಈ ಸರ್ವೀಸ್ ಸೇವೆ ಸಹಕಾರಿಯಾಗಲಿದೆ ಎಂದು ಹ್ಯುಂಡೈ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕರಾದ ತರುಣ್ ಗರ್ಗ್ ಹೇಳಿದ್ದಾರೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ