ಭಾರತದಲ್ಲಿ ಎಪ್ರಿಲ್ 1, 2020ರಿಂದ BS6 ವಾಹನ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಾರ್ಚ್ 25 ರಿಂದಲೇ BS4 ವಾಹನ ಮಾರಟಕ್ಕೆ ಬ್ರೇಕ್ ಬಿದ್ದಿತ್ತು. ಲಾಕ್‌ಡೌನ್ ಬಳಿಕ ಕೆಲ BS4 ವಾಹನ ಮಾರಾಟ ಮಾಡಲಾಗಿತ್ತು. ಆದರೆ ರಿಜಿಸ್ಟ್ರೇಶನ್‌ಗೆ ಸುಪ್ರೀಂ ಕೋರ್ಟ್ ಅವಕಾಶ ನೀಡರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪರಿಷ್ಕರಿಸಿದೆ.
ನವದೆಹಲಿ(ಆ.14): BS4 ವಾಹನ ಮಾರಾಟ ಹಾಗೂ ರಿಜಿಸ್ಟ್ರೇಶನ್ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪರಿಷ್ಕರಿಸಿದೆ. ಸದ್ಯ ಮಾರ್ಚ್ 31ರ ವರೆಗೆ ಮಾರಾಟ ಮಾಡಲಾಗಿರುವ BS4 ವಾಹನ ನೋಂದಣಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದರಿಂದ ಆಟೋಮೊಬೈಲ್ ಕಂಪನಿಗಳು ಕೊಂಚ ನಿಟ್ಟುಸಿರುಬಟ್ಟಿದೆ.
ಮಾರಾಟವಾಗದೇ ಉಳಿದುಕೊಂಡಿದೆ 125 ಕೋಟಿ ರೂ ಮೌಲ್ಯದ BS4 ಮಾರುತಿ ಸುಜುಕಿ ಕಾರು!...
ಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ BS4 ವಾಹನ ಮಾರಾಟಕ್ಕೆ ಬ್ರೇಕ್ ಹಾಕಿ BS6 ವಾಹನ ಮಾರಾಟ ಮಾಡುವಂತೆ ಸೂಚಿಸಿದೆ. ಎಪ್ರಿಲ್ 1, 2020ರಿಂದ ಭಾರತದಲ್ಲಿ ಹೊಸ ವಾಹನಗಳೆಲ್ಲಾ BS6 ವಾಹನವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಮಾರ್ಚ್ ಅಂತ್ಯದಲ್ಲಿ ಭರ್ಜರಿ ಆಫರ್ ಮೂಲಕ ಸ್ಟಾಕ್ ಇರುವ BS4 ವಾಹನ ಮಾರಾಟ ಮಾಡಲು ಆಟೋಮೊಬೈಲ್ ಕಂಪನಿಗಳು ನಿರ್ಧರಿಸಿತ್ತು. ಆದರೆ ಲಾಕ್‌ಡೌನ್ ಕಾರಣ ಕಂಪನಿಗಳ ಪ್ಲಾನ್ ಉಲ್ಟಾ ಹೊಡೆಯಿತು.
ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!
ಲಾಕ್‌ಡೌನ್ ಕಾರಣ BS4 ವಾಹನ ಮಾರಾಟ ಸಾಧ್ಯವಾಗಿಲ್ಲ. ಹೀಗಾಗಿ BS4 ವಾಹನ ಮಾರಾಟ ಅವಧಿ ವಿಸ್ತರಿಸಬೇಕು ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ ಆಸೋಸಿಯೇಶನ್ (FADA)ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. 15 ದಿನದ ಅವಕಾಶ ನೀಡಿದ್ದರು. ಲಾಕ್‌ಡೌನ್ ಬರೋಬ್ಬರಿ 2 ತಿಂಗಳ ವಿಸ್ತರಣೆಯಾದ ಕಾರಣ ಮತ್ತೆ ಹಿನ್ನಡೆಯಾಗಿತ್ತು. ಇದರ ನಡುವೆ ಕೆಲ ಡೀಲರ್‌ಗಳು BS4 ವಾಹನ ಮಾರಾಟ ಮಾಡಿತ್ತು. ಆದರೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೇ, ಅತ್ತ ಗ್ರಾಹಕರಿಂದ ತೀವ್ರ ಆಕ್ರೋಶ ಎದುರಿಸಬೇಕಾಯಿತು.
ಇದೀಗ ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ. ಮಾರ್ಚ್ 31ರವರೆಗೆ ಮಾರಾಟ ಮಾಡಲಾಗಿರುವ BS4 ವಾಹನಗಳ ರಿಜಿಸ್ಟ್ರೇಶನ್‌ಗೆ ಅವಕಾಶ ನೀಡಲಾಗಿದೆ. ಆದರೆ ಈ ನಿಯಮ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಅನ್ವಯವಾಗುವುದಿಲ್ಲ. ಆದರೆ ಇತರೆಡೆ ಅನ್ವಯವಾಗಲಿದೆ. ಹೀಗಾಗಿ ದೆಹಲಿ ಹಾಗೂ NCR ಪ್ರದೇಶದಲ್ಲಿನ ಗ್ರಾಹಕರು ಹಾಗೂ ಡೀಲರ್ ಪರ್ಯಾಯವ ವ್ಯವಸ್ಥೆ ಹುಡುಕಬೇಕಿದೆ.