ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತ; ಕೋನಾ ಕಾರಿನ ಬೆಲೆ ಇಳಿಕೆ!

Published : Jul 27, 2019, 09:48 PM IST
ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತ; ಕೋನಾ ಕಾರಿನ ಬೆಲೆ ಇಳಿಕೆ!

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಹೇಳಿದಂತೆ  ಎಲೆಕ್ಟ್ರಿಕ್ ವಾಹನದ ಮೇಲಿನ GST ಕಡಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ ಕೂಡ ಇಳಿಕೆಯಾಗಲಿದೆ. ನೂತನ ಬೆಲೆ ಎಷ್ಟಾಗಲಿದೆ? ಇಲ್ಲಿದೆ ವಿವರ.

ನವದೆಹಲಿ(ಜು.27): ಎಲೆಕ್ಟ್ರಿಕ್ ವಾಹನದ ಮೇಲಿನ GST(ತೆರಿಗೆ) 12% ರಿಂದ 5%ಕ್ಕೆ ಇಳಿಸಲಾಗಿದೆ. GST ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಿಕ್ ವಾಹನ ಮೇಲಿನ ಬೆಲೆ ಕೂಡ  ಕಡಿತಗೊಳ್ಳುತ್ತಿದೆ. ಇದೀಗ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ ಇಳಿಸಲು ಕಂಪನಿ ನಿರ್ಧರಿಸಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; GST ಇಳಿಕೆ, ಕೈಗೆಟುಕಲಿದೆ ಕಾರು!

GST ಇಳಿಕೆಯಿಂದ ನೂತನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ 1.5 ಲಕ್ಷ ರೂಪಾಯಿ ಕಡಿತಗೊಳಿಸಲು ಮುಂದಾಗಿದೆ. ನೂತನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ  25.3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೆಲೆ ಕಡಿತ ಬಳಿಕ ಕೋನಾ ಕಾರಿನ ಬೆಲೆ 23.8 ಲಕ್ಷ ರೂಪಾಯಿ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!

ಕೋನಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.  ಕೋನಾ ಮಾತ್ರವಲ್ಲ, ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಕಾರು ಹಾಗೂ ಸ್ಕೂಟರ್ ಬೆಲೆ ಕಡಿತವಾಗಲಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 

PREV
click me!

Recommended Stories

ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿ
Pulsar vs Apache: ಬೈಕ್ ರೇಸ್‌ನಲ್ಲಿ ಪಲ್ಸರ್ ಪರಾಕ್ರಮ! ಭಾರತದ ಬೈಕ್ ಸೇಲ್ಸ್‌ ಮಾರುಕಟ್ಟೆಯಲ್ಲಿ ಯಾರಿಗೆ ಅಗ್ರಸ್ಥಾನ?