ವಾಹನ ರಿಜಿಸ್ಟ್ರೇಶನ್ ದರ ಶೀಘ್ರದಲ್ಲೇ ಹೆಚ್ಚಳವಾಗಲಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 25 ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯದ ದರ ಹಾಗೂ ಪರಿಷ್ಕರಿಸಿದ ದರದ ಮಾಹಿತಿ ಇಲ್ಲಿದೆ.
ನವದೆಹಲಿ(ಜು. 27): ಎಲೆಕ್ಟ್ರಿಕ್ ವಾಹನ ಮೇಲಿನ GST ಕಡಿತಗೊಳಿಸಿದರೂ ಕಾರಿನ ಬೆಲೆ ಕಡಿಮೆಯಾಗಿಲ್ಲ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ತೀರಾ ಕಡಿಮೆ. ಎಲೆಕ್ಟ್ರಿಕ್ ವಾಹನದ ದುಬಾರಿ ಬೆಲೆ, ಸೂಕ್ತ ಚಾರ್ಜಿಂಗ್ ಸ್ಟೇಶನ್ ಸೇರಿದಂತೆ ಹಲವು ಸಮಸ್ಯೆಗಳಿಂದ ಎಲೆಕ್ಟ್ರಿಕ್ ವಾಹನ ಕೈಗೆಟುಕದ ವಸ್ತುವಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ಇಂಧನ ವಾಹನಗಳ ರಿಜಿಸ್ಟ್ರೇಶನ್ ದರ 25 ಪಟ್ಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಬೆಲೆ ಏರಿಕೆಯಾಗಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; GST ಇಳಿಕೆ, ಕೈಗೆಟುಕಲಿದೆ ಕಾರು!
ಗ್ರಾಹಕರು ಪೆಟ್ರೋಲ್, ಡೀಸೆಲ್ ವಾಹನ ಖರೀದಿಸಲು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಬೆಲೆ ದುಬಾರಿಯಾಗಲಿದೆ. 600 ರೂಪಾಯಿ ಇದ್ದ ಹೊಸ ಕಾರು ರಿಜಿಸ್ಟ್ರೇಶನ್ ಚಾರ್ಜ್ ನೂತನ ಬೆಲೆ ಪ್ರಕಾರ 5,000 ರೂಪಾಯಿ ಆಗಲಿದೆ. ಇನ್ನು ರಿಜಿಸ್ಟ್ರೇಶನ್ ನವೀಕರಣ ಬೆಲೆ 10,000 ರೂಪಾಯಿ ಆಗಲಿದೆ.
ಇದನ್ನೂ ಓದಿ: ವಾಹನ ಮಾರಾಟ ಕುಸಿತ; 10 ಲಕ್ಷ ಉದ್ಯೋಗ ಕಡಿತ!
ದ್ವಿಚಕ್ರ ವಾಹನದ ರಿಜಿಸ್ಟ್ರೇಶನ್ ಫೀ ಸದ್ಯ 50 ರೂಪಾಯಿ. ನೂತನ ದರ 1,000 ರೂಪಾಯಿ. ಇನ್ನು ದ್ವಿಚಕ್ರ ವಾಹನದ ರಿಜಿಸ್ಟ್ರೇಶನ್ ನವೀಕರಣ ಬೆಲೆ 50 ರೂಪಾಯಿ. ನೂತನ ದರ 2,000 ರೂಪಾಯಿ ಆಗಲಿದೆ. ಕ್ಯಾಬ್, ಟ್ಯಾಕ್ಸಿ ಕಾರುಗಳ ರಿಜಿಸ್ಟ್ರೇಶನ್ ಹಾಗೂ ನವೀಕರಣ ಬೆಲೆ ಸದ್ಯ 1,000 ರೂಪಾಯಿ. ಆದರೆ ನೂತನ ನೋದಂಣಿ ಬೆಲೆ 10,000 ರೂಪಾಯಿ ಹಾಗೂ ನವೀಕರಣ ಬೆಲೆ 20,000 ರೂಪಾಯಿ ಆಗಲಿದೆ.
ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಾರು ರಿಜಿಸ್ಟ್ರೇಶನ್ ಬೆಲೆ ಸದ್ಯ 5,000 ರೂಪಾಯಿ. ಇನ್ಮುಂದೆ 40,000 ರೂಪಾಯಿ ಆಗಲಿದೆ. ಆಮದು ಮಾಡಿಕೊಳ್ಳುವ ವಿದೇಶಿ ಬೈಕ್ ರಿಜಿಸ್ಟ್ರೇಶನ್ ಬೆಲೆ ಸದ್ಯ 2,500 ರೂಪಾಯಿ. ನೂತನ ಬೆಲೆ 25,000 ರೂಪಾಯಿ ಆಗಲಿದೆ. ಶೀಘ್ರದಲ್ಲೇ ಪರಿಷ್ಕರಿಸಿದ ಬೆಲೆ ಅನ್ವಯವಾಗಲಿದೆ. ಬೆಲೆ ಏರಿಕೆಯಿಂದ ವಾಹನದ ಆನ್‌ರೋಡ್ ಬೆಲೆಯೂ ಗಣನೀಯವಾಗಿ ಏರಿಕೆಯಾಗಲಿದೆ.