ಮಹತ್ತರ ಬದಲಾವಣೆ, ಹೊಸ ಫೀಚರ್ಸ್‌ಗಳೊಂದಿಗೆ ಹ್ಯುಂಡೈ ಕ್ರೆಟಾ ಮಾರ್ಚ್ 17ಕ್ಕೆ ಬಿಡುಗಡೆಯಾಗಲಿದೆ. 25,000 ರೂಪಾಯಿ ನೀಡಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.
ನವದೆಹಲಿ(ಮಾ.04): ಹ್ಯುಂಡೈ ಮೋಟಾರ್ಸ್ ಬಹುನಿರೀಕ್ಷಿತ ನೂತನ ಕ್ರೆಟಾ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದೀಗ ಗ್ರಾಹಕರು ಕಾರನ್ನು ಡೀಲರ್ ಬಳಿ ಅಥವಾ ಹ್ಯುಂಡೈ ಅಧೀಕೃತ ವೆಬ್‌ಸೈಟ್ ಮೂಲಕವೂ ಬುಕ್ ಮಾಡಿಕೊಳ್ಳಬಹುದು. 25,000 ರೂಪಾಯಿ ಪಾವತಿಸಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಕೊರೊನಾ ವೈರಸ್ ತಡೆಯಬಲ್ಲ ಗೀಲೆ ಐಕಾನ್ ಕಾರು ಬಿಡುಗಡೆ!
undefined
ಹ್ಯುಂಡೈ ಕ್ರೆಟಾ ಭಾರತದಲ್ಲಿ ಅತ್ಯಂತ ಯಶಸ್ವಿ SUV ಕಾರು. ದೇಶದಲ್ಲಿ 4.6 ಲಕ್ಷ ಗ್ರಾಹಕರನ್ನು ಹೊಂದಿರುವ ಕ್ರೆಟಾ ಇದೀಗ ಮತ್ತಷ್ಟು ವಿಸ್ತರಿಸಲಿದೆ. ನೂತನ ಕ್ರೆಟಾ ಕಾರು 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.4 ಲೀಟರ್ ಟರ್ಬೋ ಎಂಜಿನ್ ಆಯ್ಕೆ ಲಭ್ಯವಿದೆ.
ಇದನ್ನೂ ಓದಿ: ಹೊಸ ನಿಯಮದ ಪರಿಣಾಮ; 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ
bs6 ಎಂಜಿನ್ ಹೊಂದಿರುವ ನೂತನ ಕ್ರೆಟಾ ಕಾರಿನ ಆರಂಭಿಕ ಬೆಲೆ 11.42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 50 ಕೆನೆಕ್ಟಿವಿಟಿ ಫೀಚರ್ಸ್, ಸ್ಮಾರ್ಟ್ ಇಂಟಿಗ್ರೆಟೆಡ್ ಬ್ಲೂ ಲಿಂಕ್ ತಂತ್ರಜ್ಞಾನವೂ ನೂತನ ಕಾರಿನಲ್ಲಿ ಲಭ್ಯವಿದೆ.
ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್