ಕೊರೊನಾ ವೈರಸ್ ತಡೆಯಬಲ್ಲ ಗೀಲೆ ಐಕಾನ್ ಕಾರು ಬಿಡುಗಡೆ!

Suvarna News   | Asianet News
Published : Mar 04, 2020, 06:28 PM IST
ಕೊರೊನಾ ವೈರಸ್ ತಡೆಯಬಲ್ಲ ಗೀಲೆ ಐಕಾನ್ ಕಾರು ಬಿಡುಗಡೆ!

ಸಾರಾಂಶ

ಚೀನಾದಲ್ಲಿ ಆರಂಭವಾದ ಕೊರೊನಾ ವೈರಸ್ ಇದೀಗ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದೆ. ಸಾವಿನ ಸಂಖ್ಯೆ ಏರುತ್ತಿದೆ.  ಸೂಕ್ತ ಚಿಕಿತ್ಸೆಗೆ ವಿಶ್ವವೇ ಪರದಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಕೀಲೆ ನೂತನ ಕಾರು ಬಿಡುಗಡೆ ಮಾಡಿದ್ದು, ಕೊರೊನಾ ಸೋಂಕು ತಡೆಯಬಲ್ಲ ಶಕ್ತಿ ಈಕಾರಿಗಿದೆ ಅನ್ನೋದೆ ವಿಶೇಷ. ಕುರಿತು ಮಾಹಿತಿ ಇಲ್ಲಿದೆ. 

ಬೀಜಿಂಗ್(ಮಾ.04): ಕೊರೊನಾ ವೈರಸ್ ಇದೀಗ ಭಾರತದಲ್ಲೂ ಪತ್ತೆಯಾಗಿದೆ. 28 ಮಂದಿಗೆ ಸೋಂಕು ಇರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ಸೋಂಕು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಆದರೆ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಗೀಲೆ ಆಟೋಮೋಟರ್ ನೂತನ ಕಾರು ಬಿಡುಗಡೆ ಮಾಡಿದ್ದು, ಕೊರೊನಾ ಸೋಂಕು ತಡೆಬಲ್ಲ ಕಾರನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!

ಚೀನಾದ ಆಟೋಮೊಬೈಲ್ ಕಂಪನಿ ಗೀಲೆ ನೂತನ ಕಾರನ್ನು ಬಿಡುಗಡೆ ಮಾಡಿದೆ. ನೂತನ ಐಕಾನ್ SUV ಕಾರು ವಿಶೇಷ ಏರ್‌ಪ್ಯೂರಿಫೈಯರ್ ಹೊಂದಿದೆ. ಆಧುನಿಕ ತಂತ್ರಜ್ಞಾನದ ಏರ್‌ಪ್ಯೂರಿಫೈಯರ್ ವೈರಸ್, ಬ್ಯಾಕ್ಟೀರಿಯಾ ತಡೆಯುವ ಶಕ್ತಿ ಇದೆ ಎಂದು ಕಂಪನಿ ಹೇಳಿದೆ. 

ಇದನ್ನೂ ಓದಿ: ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!.

ಗೀಲೆ ಐಕಾನ್ ಕಾರಿನಲ್ಲಿರುವ ಏರ್‌ಪ್ಯೂರಿಫೈಯರ್ intelligent air purification system (IAPS) ಹೊಂದಿದೆ. ಇದು  N95 ನೀಡುವ ಅಧೀಕೃತ ಸರ್ಟಿಫಿಕೇಶನ್ ಕೂಡ ಪಡೆದಿದೆ. ಹೀಗಾಗಿ ಹೊರಗಿನ ಕಲುಷಿತ, ವೈರಸ್, ಬ್ಯಾಕ್ಟಿರಿಯಾ ಮಿಶ್ರಿತ ಗಾಳಿ ಕಾರಿನೊಳಗೆ ಪ್ಯೂರಿಫೈಯರ್ ಮೂಲಕ ಅತ್ಯಂತ ಶುದ್ದಗಾಳಿಯಾಗಿ ಪ್ರವೇಶಿಸಲಿದೆ ಎಂದು ಕಂಪನಿ ಹೇಳಿದೆ.

ಇದು ಕೊರೊನಾ ಸೋಂಕು ತಡೆಯಲಿದೆಯಾ ಅನ್ನೋದು ಸಾಬೀತಾಗಿಲ್ಲ. ಆದರೆ ವೈರಸ್ ಹಾಗೂ ಬ್ಯಾಕ್ಟೀರಿಯಾ ತಡೆಯಬಲ್ಲ ಶಕ್ತಿ ಈ ಕಾರಿನ  ಏರ್‌ಪ್ಯೂರಿಫೈಯರ್‌ಗೆ ಇದೆ ಅನ್ನೋದು ದೃಢಪಟ್ಟಿದೆ. 

ಗೀಲೆ ಐಕಾನ್ ಕಾರು 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಹೊಂದಿದೆ. 1.5 ಲೀಟರ್ ಚರ್ಬೋ ಚಾರ್ಜ್ ಎಂಜಿನ್, 184 bhp ಪವರ್  ಹಾಗೂ 255 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ