ಮತದಾನ ಮಾಡುವ ಗ್ರಾಹಕರಿಗೆ ಹೀರೋ ಮೋಟಾರ್‌ನಿಂದ ಭರ್ಜರಿ ಗಿಫ್ಟ್!

By Web Desk  |  First Published Apr 16, 2019, 3:34 PM IST

ಮತದಾನ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹರಸಾಹಸ ಪಡುತ್ತಿದೆ. ಇದರ ಬೆನ್ನಲ್ಲೇ ಹೀರೋ ಮೋಟಾರ್ ಕಂಪನಿ ಮತದಾನ ಮಾಡೋ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಮತದಾನ ಮಾಡುವ ಗ್ರಾಹಕರಿಗೆ ಹೀರೋ ಘೋಷಿಸಿರುವ ಗಿಫ್ಟ್ ಏನು? ಇಲ್ಲಿದೆ.


ನವದೆಹಲಿ(ಏ.16): ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಇದರ ಬೆನ್ನಲ್ಲೇ ಚುನವಣಾ ಆಯೋಗ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ. ಸೆಲೆಬ್ರೆಟಿಗಳು, ಕ್ರೆಕಿಟಿಗರು ಸೇರಿದಂತೆ ಹಲವು ದಿಗ್ಗಜರು ಎಲ್ಲರೂ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇದೀಗ ಹೀರೋ ಮೋಟಾರ್ ಕಾರ್ಪ್ ಸಂಸ್ಥೆ ಕೂಡ ಮತನದಾನ ಜಾಗೃತಿ ಮೂಡಿಸಲು ಹೊಸ ಅಭಿಯಾನ ಆರಂಭಿಸಿದೆ.

ಇದನ್ನೂ ಓದಿ: KTM ಡ್ಯೂಕ್ -RC ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ ಪಟ್ಟಿ!

Tap to resize

Latest Videos

undefined

ಮತದಾನ ಮಾಡುವ ಗ್ರಾಹಕರಿಗೆ ಹೀರೋ ಮೋಟಾರ್ ಕಾರ್ಪ್ ಭರ್ಜರಿ ಉಡುಗೊರೆ ನೀಡಿದೆ. ಈ ಆಫರ್ ದೇಶದೆಲ್ಲಡೆ ಗ್ರಾಹಕರಿಗೆ ಸಿಗಲಿದೆ. ವೋಟ್ ಮಾಡೋ ಹೀರೋ ಮೋಟಾರ್ ಗ್ರಾಹಕರಿಗೆ ಕೇವಲ 199 ರೂಪಾಯಿಗೆ ದ್ವಿಚಕ್ರ ವಾಹನ ಸರ್ವೀಸ್ ಹಾಗೂ ಉಚಿತ ವಾಶಿಂಗ್ ಉಡುಗೊರೆ ನೀಡಲಾಗಿದೆ. ಆಯಾ ಕ್ಷೇತ್ರದ ಮತದಾನದ ದಿನದ ಬಳಿಕ 2 ದಿನ  ಈ ಆಫರ್ ಚಾಲ್ತಿಯಲ್ಲಿದೆ. 

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಬ್ರಿಟೀಷ್ ಬೈಕ್- ಬೆಲೆ ಎಷ್ಟು?

ಗ್ರಾಹಕರು ಹೀರೋ ಮೋಟಾರ್ ಶೋ ರೂಂ ತೆರಳಿ ಈ ಸೌಲಭ್ಯವನ್ನು ಉಪಯೋಗಿಸಬಹುದು. ಮೊದಲೇ ಪ್ರೀ ಬುಕಿಂಗ್ ಅವಕಾಶವಿದೆ. ಗ್ರಾಹಕರು ಮತದಾನ ಮಾಡಿದ ಶಾಯಿ(INK) ಗುರುತು ತೋರಿಸಿ ನಿಮ್ಮ ಹೀರೋ ಮೋಟಾರ್ ದ್ವಿಚಕ್ರ ವಾಹನವನ್ನು ಸರ್ವೀಸ್ ಮಾಡಿಸಿಕೊಳ್ಳಬಹುದು.
 

click me!