KTM ಬೈಕ್ ಬೆಲೆ ಹೆಚ್ಚಳವಾಗಿದೆ. 2500 ರೂಪಾಯಿಂದ ಗರಿಷ್ಠ 6500 ರೂಪಾಯಿ ವರೆಗೆ ಬೈಕ್ ಬೆಲೆ ಹೆಚ್ಚಳವಾಗಿದೆ. ನೂತನ ಬೆಲೆ ಪಟ್ಟಿ ಇಲ್ಲಿದೆ.
ನವದೆಹಲಿ(ಏ.14): ಫರ್ಪಾಮೆನ್ಸ್ ಬೈಕ್‌ಗಳಲ್ಲಿ KTM ಡ್ಯೂಕ್ ಹಾಗೂ RC ಬೈಕ್ ಅಗ್ರಸ್ಥಾನದಲ್ಲಿದೆ. ಆಸ್ಟ್ರಿಯಾ ಮೂಲದ KTM ಬೈಕ್‍ಗೆ ಭಾರತದಲ್ಲಿ ಬಹು ಬೇಡಿಕೆ ಇದೆ. ಇದೀಗ KTM ಡ್ಯೂಕ್ ಹಾಗೂ RC ಬೈಕ್ ಬೆಲೆ ಹೆಚ್ಚಳವಾಗಿದೆ.ಗರಿಷ್ಠ 6,500 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಬಜಾಜ್- KTM ಬಿಡುಗಡೆ ಮಾಡುತ್ತಿದೆ 500cc ಬೈಕ್!
undefined
KTM ಡ್ಯೂಕ್ ಬೈಕ್‌ಗಳಲ್ಲಿ 125 ಕಡಿಮೆ ಬೆಲೆಯ ಬೈಕ್. ಆದರೆ ಈ ಬೈಕ್ ಗರಿಷ್ಠ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. KTM ಡ್ಯೂಕ್ 125 ಬೈಕ್‌ಗೆ 6416 ರೂಪಾಯಿ ಹೆಚ್ಚಳವಾಗಿದೆ. KTM RC ಕಡಿಮೆ ಬೆಲೆ ಹೆಚ್ಚಳವಾದ ಬೈಕ್ . ಈ ಬೈಕ್ ಮೇಲೆ 2252 ರೂಪಾಯಿ ಹೆಚ್ಚಳವಾಗಿದೆ.
ಬೈಕ್ | ನೂತನ ಬೆಲೆ | ಹಳೇ ಬೆಲೆ |
KTM 125 | 1,24,416 ರೂ | 1,18,00 ರೂ |
KTM 200 | 1,61,421 ರೂ | 1,59,168 ರೂ |
KTM 350 | 1,96,672 ರೂ | 1,93,421 ರೂ |
KTM 390 | 2,48,819 ರೂ | 2,43,562 ರೂ |
RC 200 | 1,89,990 ರೂ | 1,87,738 ರೂ |
RC 390 | 2,43,490 ರೂ | 2,40,234 ರೂ |