ತುಂಬಿ ಹರಿಯುವ ನದಿ ದಾಟಿದ ಮಹೀಂದ್ರ ಥಾರ್- ವೀಡಿಯೋ ವೈರಲ್!

By Web Desk  |  First Published Apr 14, 2019, 7:04 PM IST

ಮಹೀಂದ್ರ ಥಾರ್ ಜೀಪ್ ಬಲಿಷ್ಠ ಎಂಜಿನ್ ಹೊಂದಿದೆ. ಹೀಗಾಗಿ ಭಾರತದ ಯಾವುದೇ ರಸ್ತೆಗಳಲ್ಲಿ ಇದು ಸಲೀಸಾಗಿ ಚಲಿಸುತ್ತದೆ. ಇದೀಗ ತುಂಬಿ ಹರಿಯುತ್ತಿದ್ದ ನದಿ ದಾಟಿರುವ ಮಹೀಂದ್ರ ಥಾರ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 


ಬೆಂಗಳೂರು(ಏ.14): ಮಹೀಂದ್ರ ಥಾರ್ ಜೀಪ್ ಭಾರತದ ಯಾವುದೇ ರಸ್ತೆಗಳಿಗೆ ಹೇಳಿ ಮಾಡಿಸಿದ ವಾಹನ. ಬೆಟ್ಟ ಗುಡ್ಡ, ಯಾವ ರಸ್ತೆಯಾದರೂ ಮಹೀಂದ್ರ ಥಾರ್ ಸಲೀಸಾಗಿ ಚಲಿಸುತ್ತದೆ. ರಸ್ತೆಯಲ್ಲಿ ಮಾತ್ರವಲ್ಲ ತುಂಬಿ ಹರಿಯುತ್ತಿರುವ ನದಿಯಲ್ಲೂ ಥಾರ್ ಚಲಿಸಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಲ್ಲಿನಾನ್ ವಿಶ್ವದ ಅತ್ಯಂತ ದುಬಾರಿ SUV ಕಾರು!

Latest Videos

undefined

ತುಂಬಿ ಹರಿಯುತ್ತಿದ್ದ ನದಿ ಒಂದ ಬದಿಯಿಂದ ಮತ್ತೊಂದು ಬದಿಗೆ ಥಾರ್ ಜೀಪ್ ಯಾವುದೇ ಸಹಾಯವಿಲ್ಲದೆ, ಸಲೀಸಾಗಿ ಚಲಿಸಿದೆ. ನದಿಯಲ್ಲಿ, ಸೇತುವೇ ಮೇಲೆ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ವಾಹನ ಚಲಾಯಿಸಿವುದು ಸೂಕ್ತವಲ್ಲ. ಕಾರಣ ನೀರಿನಲ್ಲಿ ಅದೆಷ್ಟೇ ಭಾರವಿದ್ದರೂ ವಾಹನ ತೇಲುವ ಸಂಭವ ಜಾಸ್ತಿ. ಇನ್ನು ಸ್ಕಿಡ್ ಆಗುವುದಲ್ಲದೆ, ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: 20 ಲಕ್ಷ ಸ್ಫಟಿಕದಿಂದ ಕಾರು ಮಾಡಿಫೈ ಮಾಡಿದ ಸೆಲೆಬ್ರೆಟಿ -ಬೇಕಾ ಬಿಟ್ಟಿ ಖರ್ಚಿಗೆ ತರಾಟೆ!

ಆದರೆ ಮಹೀಂದ್ರ ಯಾವ ಆತಂಕ ಎದುರಿಸದೇ ನದಿ ದಾಟಿದೆ. ಸಾಮಾಜಿಕ ಜಾಲತಾಣದಲ್ಲಿ ಥಾರ್ ಬಲಿಷ್ಠತೆ ಕುರಿತಿ ಈ ವೀಡಿಯೋ ಹರಿದಾಡುತ್ತಿದೆ. ಆದರೆ ಈ ಘಟನೆ ನಡೆದಿರೋದು ಎಲ್ಲಿ ಅನ್ನೋದು ಸ್ಪಷ್ಟವಾಗಿಲ್ಲ. ಥಾರ್ ನದಿ ದಾಟಿದೆ ನಿಜ. ಹಾಗಂತ ಈ ಸಾಹಸ ಮಾಡಲು ಮುಂದಾಗುವುದು ಉಚಿತವಲ್ಲ.


 

click me!