ಬೆಂಗಳೂರಿನಲ್ಲಿ ಸಾಮ್ರಾಜ್ಯ ವಿಸ್ತರಿಸಿದ ಹೀರೋ ಮೋಟಾರ್!

By Suvarna News  |  First Published Mar 19, 2020, 4:00 PM IST

ಎಲ್ಲಾ ಆಟೋಮೊಬೈಲ್ ಕಂಪನಿಗಳಿಗೆ ಬೆಂಗಳೂರು ಪ್ರಮುಖ ಮಾರಾಟ ಕೇಂದ್ರ. ಬೆಂಗಳೂರಿನಲ್ಲಿ ಗರಿಷ್ಠ ವಾಹನಗಳು ಮಾರಾಟವಾಗುತ್ತವೆ. ಹೀಗಾಗಿ ಎಲ್ಲಾ ಕಂಪನಿಗಳು ಬೆಂಗಳೂರಿನಲ್ಲಿ ಡೀಲರ್‌ಶಿಪ್, ಶೋರೂಂಗೆ ಹೆಚ್ಚಿನ ಒತ್ತು ನೀಡುತ್ತದೆ. ಇದೀಗ ಹೀರೋ ಬೆಂಗಳೂರಿನಲ್ಲಿ ತನ್ನ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸಿದೆ


ಬೆಂಗಳೂರು(ಮಾ.17): ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಬ್ರ್ಯಾಂಡ್ ಆಗಿರುವ ಹೀರೋ ಎಲೆಕ್ಟ್ರಿಕ್   ಬೆಂಗಳೂರು ವಲಯದಲ್ಲಿ ತನ್ನ ಮೂರು ಹೊಸ ಡೀಲರ್ ಶಿಪ್ ಗಳನ್ನು ಆರಂಭ ಮಾಡಿದೆ. ಈ ಮೂಲಕ ಬೆಂಗಳೂರು ನಗರದಲ್ಲಿ ತನ್ನ ಜಾಲವನ್ನು ವೃದ್ದಿಸಿದೆ . ಜೈದೀಪ್ ಮೋಟರ್ಸ್, ಪಲ್ಸ್ ಎಲೆಕ್ಟ್ರೋಚೆಮ್ ಮತ್ತು ವಿಆರ್ ಎಸ್ ಮೋಟರ್ಸ್ (ಮಾರಾಟ, ಸೇವೆ ಮತ್ತು ಬಿಡಿಭಾಗ) ಹೊಸ ಡೀಲರ್ ಶಿಪ್ ಗಳಾಗಿವೆ. ಈ ಸುಸಜ್ಜಿತ ಡೀಲರ್ ಶಿಪ್ ಗಳಲ್ಲಿ ಅತ್ಯುತ್ತಮ ತರಬೇತಿ ಹೊಂದಿದ ಮತ್ತು ಅರ್ಹ ವೃತ್ತಿಪರ ತಂತ್ರಜ್ಞರನ್ನು ಒಳಗೊಂಡಿವೆ. ಈ ಮೂಲಕ ವಾಹನಗಳ ಮಾರಾಟದ ನಂತರದ ಸೇವೆ ಮತ್ತು ಪರಿಹಾರಗಳನ್ನು ಗ್ರಾಹಕರಿಗೆ ನೀಡಲಿವೆ.

ಮೂರು ಹೊಸ ಹೀರೋ ಬೈಕ್ ದೇಶಕ್ಕೆ ಅರ್ಪಣೆ!

Tap to resize

Latest Videos

undefined

`ದೇಶಾದ್ಯಂತ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಅತ್ಯುತ್ತಮವಾದ ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಬದ್ಧತೆಯನ್ನು ಈ ಹೊಸ ಡೀಲರ್ ಶಿಪ್ ಗಳ ಮೂಲಕ ಪೂರೈಸಲಿದ್ದೇವೆ.  ಬೆಂಗಳೂರು ನಮಗೆ ಅತ್ಯಂತ ಪ್ರಮುಖವಾದ ಮಾರುಕಟ್ಟೆಯಾಗಿದೆ. ಭೌಗೋಳಿಕವಾಗಿ ಮತ್ತು ವ್ಯಾವಹಾರಿಕವಾಗಿ ಇದು ಪ್ರಮುಖವಾಗಿದ್ದು, ಈ ಹೊಸ ಡೀಲರ್ ಶಿಪ್ ಗಳ ಮೂಲಕ ವ್ಯವಹಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಿಕೊಳ್ಳುವ ವಿಶ್ವಾಸ ನಮಗಿದೆ. ಇದಲ್ಲದೇ, ಇದರ ಮೂಲಕ ನಾವು ಎಲೆಕ್ಟ್ರಿಕ್ ವಾಹನಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸಲಿದ್ದೇವೆ. ನಮ್ಮ ಡೀಲರ್ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡುವುದು ಮತ್ತು ವರ್ಷದಿಂದ ವರ್ಷಕ್ಕೆ ಬಲವರ್ಧನೆಗೊಳಿಸುವ ಮೂಲಕ ನಾವು ದೇಶದ ಬಹುತೇಕ ಎಲ್ಲಾ ಭಾಗಗಳನ್ನು ತಲುಪಲಿದ್ದೇವೆ’’ ಎಂದು  ಹೀರೋ ಎಲೆಕ್ಟ್ರಿಕ್ ನ ಸಿಇಒ ಸೊಹಿಂದರ್ ಗಿಲ್ ಹೇಳಿದ್ದಾರೆ. 

ಹೀರೋ AE-47 ಎಲೆಕ್ಟ್ರಿಕ್ ಬೈಕ್ ಅನಾವರಣ, 160KM ಮೈಲೇಜ್!

2020 ರ ಅಂತ್ಯದ ವೇಳೆಗೆ ಭಾರತದಲ್ಲಿ 1000 ಕಸ್ಟಮರ್ ಟಚ್ ಪಾಯಿಂಟ್ ಗಳನ್ನು ಆರಂಭಿಸುವ ಯೋಜನೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಈ ವಿಸ್ತರಣೆ ನಡೆಯುತ್ತಿದೆ. ನಮ್ಮ ಹಾಲಿ ಇರುವ ಮತ್ತು ಭವಿಷ್ಯದ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಪ್ರಯೋಜನಗಳ ಬಗ್ಗೆ ಅರ್ಥ ಮಾಡಿಸಲು ನಮ್ಮ ಡೀಲರ್ ಶಿಪ್ ಗಳು ನೆರವಾಗಲಿವೆ. ಹೀರೋ ಎಲೆಕ್ಟ್ರಿಕ್ ಡೀಲರ್ ಶಿಪ್ ಗಳಲ್ಲಿರುವ ತಂಡಗಳಿಗೆ ಅತ್ಯುತ್ತಮವಾದ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿಯ ಪ್ರಮುಖ ಉದ್ದೇಶ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಡಲು ನಮ್ಮ ಮಾರಾಟ ತಂಡಗಳಿಗೆ ನೆರವಾಗುವುದಾಗಿದೆ. ಇದಲ್ಲದೇ, ಹೀರೋ ಎಲೆಕ್ಟ್ರಿಕ್ ಬಳಕೆ ಮಾಡುತ್ತಿರುವ ಲೀಥಿಯಂ-ಐಯಾನ್  ನಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಗ್ರಾಹಕರಲ್ಲಿ ಅರಿವು ಮೂಡಿಸುವುದಾಗಿದೆ.

BS6 ಹೀರೋ ಸ್ಪ್ಲೆಂಡರ್ ಲಾಂಚ್, ಕಡಿಮೆ ಬೆಲೆ!

ಲೀಥಿಯಂ-ಐಯಾನ್  ನಿಂದ ಆಗುವ ಪ್ರಯೋಜನಗಳು:
ಹೆಚ್ಚು ಶಕ್ತಿ ಸಾಂದ್ರತೆ- ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಇಂಧನ ಅಥವಾ ಶಕ್ತಿಯ ಸಾಂದ್ರತೆ ಇರುವ ಬ್ಯಾಟರಿ ತಂತ್ರಜ್ಞಾನದ ಅಗತ್ಯವಿರುತ್ತದೆ. ಈ ಸಾಂದ್ರತೆಯನ್ನು 10 ಪಟ್ಟು ಹೆಚ್ಚು ನೀಡುವ ಮತ್ತು ದೀರ್ಘ ಬಾಳಿಕೆ ಬರುವ ಬ್ಯಾಟರಿಯನ್ನು ನೀಡಲಾಗುತ್ತಿದೆ.

ಸೆಲ್ಫ್ ಡಿಸ್ ಚಾರ್ಜ್- ಲೀಥಿಯಂ ಐಯಾನ್ ಘಟಕಗಳು ಸೆಲ್ಫ್ ಡಿಸ್ ಚಾರ್ಜ್ ರೇಟ್ ಹೊಂದಿವೆ. ಚಾರ್ಜ್ ಆದ ಮೊದಲ 4 ಗಂಟೆಗಳಲ್ಲಿ ಶೇ.5 ರಷ್ಟು ಅನ್ನು ಸ್ವಯಂಪ್ರೇರಿತವಾಗಿ ಡಿಸ್ ಚಾರ್ಜ್ ಮಾಡಲಿವೆ. ಇದರಿಂದ ತ್ವರಿತವಾಗಿ ಮತ್ತು ಸರಳವಾದ ರೀತಿಯಲ್ಲಿ ರೀಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿವೆ.

ಕಡಿಮೆ ನಿರ್ವಹಣೆ- ಲೀಥಿಯಂ-ಐಯಾನ್ ಬ್ಯಾಟರಿಯ ಒಂದು ಪ್ರಮುಖ ಪ್ರಯೋಜನವೆಂದರೆ ಸ್ಕೂಟರ್ ಗಳನ್ನು ಸಮರ್ಥಗೊಳಿಸಲು ಅವುಗಳ ಕಾರ್ಯಕ್ಷಮತೆಯನ್ನು ಖಾತರಿಪಡಿಸಲು ಯಾವುದೇ ನಿರ್ವಹಣೆ ಅಗತ್ಯವಿಲ್ಲ.

ಪ್ರೈಮಿಂಗ್ ನ ಅಗತ್ಯವಿರುವುದಿಲ್ಲ- ಕೆಲವು ರೀಚಾರ್ಜ್ ಸೆಲ್ ಗಳಿಗೆ ಮೊದಲ ಚಾರ್ಜ್ ನಂತರ ಪ್ರೈಂ ಮಾಡಬೇಕಾದ ಅಗತ್ಯವಿರುತ್ತದೆ. ಆದರೆ, ಈ ಲೀಥಿಯಂ-ಐಯಾನ್ ಬ್ಯಾಟರಿಗಳಿಗೆ ಇದರ ಅಗತ್ಯವೇ ಇರುವುದಿಲ್ಲ.

ಕಡಿಮೆ ತೂಕ- ಇತರೆ ತಂತ್ರಜ್ಞಾನಗಳಿಗೆ ಹೋಲಿಸಿದರೆ 10 ಪಟ್ಟು ಹೆಚ್ಚು ಇಂಧನವನ್ನು ನೀಡುವ ಈ ಲೀಥಿಯಂ ಐಯಾನ್ ಬ್ಯಾಟರಿಗಳು ತೂಕದಲ್ಲಿ ಅತ್ಯಂತ ಕಡಿಮೆ ಇರುತ್ತವೆ.

ಮಾಲಿನ್ಯ- ಹಸಿರು ಸಾರಿಗೆ ಪರ್ಯಾಯಗಳನ್ನು ಹೊಂದುವುದು ಈಗಿನ ಆದ್ಯತೆಯಾಗಿದೆ. ಲಿ-ಐಯಾನ್ ಬ್ಯಾಟರಿ ಇವುಗಳಿಗೆ ಅತ್ಯಂತ ಸೂಕ್ತವಾದ ಪರ್ಯಾಯವಾಗಿದೆ.

 ಹೀರೋ ಎಲೆಕ್ಟ್ರಿಕ್ ಆಕರ್ಷಕ ಮತ್ತು ಹಣಕ್ಕೆ ತಕ್ಕ ಮೌಲ್ಯವನ್ನು ತಂದುಕೊಡುವ ಲೀಥಿಯಂ-ಐಯಾನ್ ಮಾಡೆಲ್ ಗಳನ್ನು ನೀಡುತ್ತಿದೆ. ಈ ಮಾಡೆಲ್ ಗಳನ್ನು ಕಡಿಮೆ ವೇಗ ಮತ್ತು ಹೆಚ್ಚು ವೇಗದ ವಿಭಾಗಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್ ಆಗಿರುವ ಹೀರೋ ಎಲೆಕ್ಟ್ರಿಕ್ ಪರಿಸರ ರಕ್ಷಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಇದಲ್ಲದೇ, ಪರಿಸರ ಸ್ನೇಹಿಯಾಗಿರುವ ಲೀಥಿಯಂ-ಐಯಾನ್ ಬ್ಯಾಟರಿಗಳು ಹೆಚ್ಚು ಜನಪ್ರಿಯಗೊಳಿಸುವುದು ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಹೀರೋ ಎಲೆಕ್ಟ್ರಿಕ್ ಲೂಧಿಯಾನದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಜೋಡಣೆ ಮಾಡಿ ಮತ್ತು ಗುಣಮಟ್ಟ ಪರೀಕ್ಷೆ ಮಾಡುವ ಮೂಲಕ ತನ್ನ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಕಳೆದ 5 ವರ್ಷಗಳಿಂದ ಮೇಕ್ ಇಟ್ ಇಂಡಿಯಾ ಪರಿಕಲ್ಪನೆಯಡಿ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಇದಲ್ಲದೇ, ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ಹೀರೋ ಎಲೆಕ್ಟ್ರಿಕ್ ಅಲ್ಟ್ರಾ ಪೋರ್ಟೇಬಲ್ ನಿಂದ ಗರಿಷ್ಠ 8 ಕೆಜಿ ತೂಕದಲ್ಲಿ ತಯಾರಿಸುತ್ತಿದೆ. ಇದರ ಮೂಲಕ ಬಳಕೆದಾರರು ತೂಕದ ವಿಚಾರದಲ್ಲಿ ಹೊಂದಿದ್ದ ಆತಂಕವನ್ನು ದೂರ ಮಾಡುತ್ತಿದೆ. ಈ ಬ್ಯಾಟರಿಗಳನ್ನು ಚಾರ್ಜ್ ಮಾಡಲು 3-ಪಿನ್ ಸಾಕೆಟ್ ಪ್ಲಗ್ ಅನ್ನು ನೀಡಲಾಗುತ್ತದೆ.

ಮುಂದಿನ ಮೂರು ವರ್ಷಗಳಲ್ಲಿ ಕಂಪನಿಯು ಹೆಚ್ಚು ಹೆಚ್ಚು ಬಂಡವಾಳ ತೊಡಗಿಸುವ ಯೋಜನೆಗಳನ್ನು ಹಾಕಿಕೊಂಡಿದೆ ಮತ್ತು ವಾರ್ಷಿಕ 5 ಲಕ್ಷ ಘಟಕಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದುವ ಯೋಜನೆಯನ್ನು ಹಾಕಿಕೊಂಡಿದೆ. ಇದಲ್ಲದೇ, ಗ್ರಾಹಕರಿಗೆ ಹಣಕಾಸು ನೆರವಾಗಲೆಂಬ ದೃಷ್ಟಿಯಿಂದ ಹಲವಾರಜು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ಸುಲಭದಲ್ಲಿ ಹಣಕಾಸು ಸೌಲಭ್ಯ ದೊರೆಯುವಂತೆ ಮಾಡಲಿದೆ.

click me!