ಕೊರೋನಾ ವೈರಸ್ ಆತಂಕದ ನಡುವೆಯೂ BS6 ಎಂಜಿನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಹಲವು ಹೊಸತನಗಳೊಂದಿಗೆ ಬೈಕ್ ಡೀಲರ್ ಬಳಿ ತಲುಪಿದೆ. ರಾಯಲ್ ಎನ್‌ಫೀಲ್ಡ್ ಬೈಕಗಳ ಪೈಕಿ ಬುಲೆಟ್ 350 ಬೈಕ್ ಅತ್ಯಂತ ಕಡಿಮೆ ಬೆಲೆ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೆನ್ನೈ(ಮಾ.19): ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಅಪ್‌ಗ್ರೇಡ್ ಆಗಿದೆ. ಫ್ಯುಯೆಲ್ ಇಂಜೆಕ್ಟೆಟ್ ಬೈಕ್ BS6 ಎಂಜಿನ್ ಹೊಂದಿದ್ದು, ಕೆಲ ಫೀಚರ್ಸ್ ಸೇರಿಸಲಾಗಿದೆ. ನೂತನ ಬೈಕ್ ಬೆಲೆ 1.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಕಿಕ್ ಸ್ಟಾರ್ಟ್ ಬೈಕ್ ಬೆಲೆಯಾಗಿದೆ. ಎಲೆಕ್ಟ್ರಿಕ್ ಸ್ಟಾರ್ಟ್ ಬೈಕ್ ಬೆಲೆ 1.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ:ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ 350X ಬೈಕ್ ಬಿಡುಗಡೆ!
undefined
ಸದ್ಯ ಮಾರುಕಟ್ಟೆಯಲ್ಲಿರುವ BS4 ಬುಲೆಟ್ ಬೈಕ್ ಬೆಲೆಗಿಂತ ನೂತನ ಬೈಕ್ ಬೆಲೆ 6,000-7,000 ರೂಪಾಯಿ ಹೆಚ್ಚಾಗಿದೆ. ಎಪ್ರಿಲ್ 1 ರಿಂದ ಮಾರಾಟವಾಗೋ ಎಲ್ಲಾ ಹೊಸ ವಾಹನಗಳು BS6 ಎಂಜಿನ್ ಹೊಂದಿರಬೇಕು. ಹೀಗಾಗಿ ರಾಯಲ್ ಎನ್‌ಫೀಲ್ಡ್ ಇದೀಗ ಬುಲೆಟ್ 350ಬೈಕನ್ನು BS6 ಎಂಜಿನ್ ಆಗಿ ಪರಿವರ್ತಿಸಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್‌ನ ಬಹುತೇಕ ಎಲ್ಲಾ ಬೈಕ್‌ಗಳು BS6 ಎಂಜಿನ್ ಪರಿವರ್ತಿಸಲಾಗಿದೆ.
ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!
ನೂತನ ಬುಲೆಟ್ 350 ಬೈಕ್ 346 cc, ಸಿಂಗಲ್ ಸಿಲಿಂಡಕ್, ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. 19.1 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಫ್ಯುಯೆಲ್ ಇಂಜೆಕ್ಟೆಡ್ ಫೀಚರ್ಸ್ ಹೊರತು ಪಡಿಸಿದರೆ, ಎಂಜಿನ್ ಹಾಗೂ ಚಾಸಿ, ಸಸ್ಪೆನ್ಶನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಮಾರ್ಚ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ