ಆಕ್ಟಿವಾಗೆ ಶುರುವಾಯ್ತು ತಲೆನೋವು-ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ!

By Web Desk  |  First Published Oct 20, 2018, 3:42 PM IST

ಹೀರೋ ಮೋಟಾರ್ ಕಾರ್ಪ್ ಸಂಸ್ಥೆ ಇದೀಗ ಹೊಂಡಾ ಅಕ್ಟಿವಾಗೆ ಪೈಪೋಟಿ ನೀಡಲು ಸಜ್ಜಾಗಿದೆ. ಹೀರೋ ಮೋಟಾರ್ ಕಾರ್ಪ್ ಇದೀಗ ನೂತನ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ ಮಾಡುತ್ತಿದೆ.


ಬೆಂಗಳೂರು(ಅ.20): ಹೊಂಡಾ ಅಕ್ಟಿವಾ ಮಾರಾಟದಲ್ಲಿ ದಾಖಲೆ ಬರೆದು ಮುನ್ನಗ್ಗುತ್ತಿದೆ. ಇದೀಗ ಅಕ್ಟಿವಾಗೆ ಪೈಪೋಟಿ ನೀಡಲು ಹೀರೋ ಸಂಸ್ಥೆ ಸಜ್ಜಾಗಿದೆ. ಇದೇ ಅಕ್ಟೋಬರ್ 22 ರಂದು ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಯಾಗುತ್ತಿದೆ. 

2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಾಲದ ನೂತನ ಹಿರೋ ಡೆಸ್ಟಿನಿ ಇದೀಗ ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ. ಹೀರೋ ಡೆಸ್ಟಿನಿ 125  ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. 124.6 ಸಿಸಿ ಇಂಜಿನ ಸಾಮರ್ಥ್ಯದ ಹೀರೋ ಡೆಸ್ಟಿನಿ 125 ಸ್ಕೂಟರ್ 8.70 ಬಿಹೆಚ್‌ಪಿ ಹಾಗೂ 10.2 ಟಾರ್ಕ್ಯೂ ಉತ್ಪಾದಿಸಲಿದೆ. 

Latest Videos

undefined

ಹೀರೋ ಡೆಸ್ಟಿನಿ ಸಂಪೂರ್ಣ ಮೆಟಲ್ ಬಾಡಿ ಹೊಂದಿದೆ. ಇಂಧನ್ ಫಿಲ್ಲರ್ ಕ್ಯಾಪ್, ಮೊಬೈಲ್ ಚಾರ್ಚಿಂಗ್ ಪೋರ್ಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಡ್ಯುಯೆಲ್ ಟೋನ್ ಮಿರರ್ ಹಾಗೂ ಟ್ಯುಬ್ ಲೆಸ್ ಟೈಯರ್ ನೂತನ ಸ್ಕೂಟರ್‌ನಲ್ಲಿ ಲಭ್ಯವಿದೆ.

10 ಇಂಚು ಆಲೋಯ್ ವೀಲ್ಸ್, ಫ್ರಂಟ್ ಹಾಗೂ ರೇರ್ ಡ್ರಂ ಬ್ರೇಕ್, 5.5 ಲೀಟರ್ ಇಂಧನ ಸಾಮರ್ಥ್ಯ, 155 ಎಂಎಂ ಗ್ರೌಂಡ್ ಕ್ಲೀಯರೆನ್ಸ್ ಹಾಗೂ ಗರಿಷ್ಠ 85 ಕೀಮಿ ವೇಗ ಸಾಮರ್ಥ್ಯ ಹೊಂದಿದೆ.

ಹೊಂಡಾ ಆಕ್ಟಿವಾ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಹೀರೋ ಡೆಸ್ಟಿನಿ ರಸ್ತೆಗಿಳಿಯುತ್ತಿದೆ. ನೂತನ ಡೆಸ್ಟಿನಿ ಯಾವ ರೀತಿ ಮೋಡಿ ಮಾಡುತ್ತೆ ಅನ್ನೋದು ಕೆಲ ದಿನಗಳಲ್ಲೇ ತಿಳಿಯಲಿದೆ. 

click me!