ಹೊಂಡಾ ಆಕ್ಟಿವಾ ದಾಖಲೆ-ಭಾರತದಲ್ಲಿ 2 ಕೋಟಿ ಸ್ಕೂಟರ್ ಮಾರಾಟ!

Published : Oct 20, 2018, 03:22 PM ISTUpdated : Oct 20, 2018, 03:24 PM IST
ಹೊಂಡಾ ಆಕ್ಟಿವಾ ದಾಖಲೆ-ಭಾರತದಲ್ಲಿ 2 ಕೋಟಿ ಸ್ಕೂಟರ್ ಮಾರಾಟ!

ಸಾರಾಂಶ

ಹೊಂಡಾ ಅಕ್ಟಿವಾ ಸ್ಕೂಟರ್ ಭಾರತದಲ್ಲಿ ದಾಖಲೆ ನಿರ್ಮಿಸಿದೆ. 2001ರಲ್ಲಿ ಭಾರತಕ್ಕೆ ಕಾಲಿಟ್ಟ ಹೊಂಡಾ ಅಕ್ಟಿವಾ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಇತರ ಯಾರು ಮಾಡದ ದಾಖಲೆ ಬರೆದಿದೆ. ಹಾಗಾದರೆ ಆಕ್ಟಿವಾ ಸ್ಕೂಟರ್ ದಾಖಲೆ ಏನು? ಇಲ್ಲಿದೆ.

ಬೆಂಗಳೂರು(ಅ.20): ಭಾರತೀಯರ ಮನಗೆದ್ದಿರುವ ಹೊಂಡಾ ಅಕ್ಟಿವಾ ಸ್ಕೂಟರ್ ಇದೀಗ ಮಾರಾಟದಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ 2 ಕೋಟಿ ಹೊಂಡಾ ಆಕ್ಟಿವಾ ಸ್ಕೂಟರ್ ಮಾರಾಟವಾಗೋ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಇದೇ ಮೊದಲ ಬಾರಿಗೆ ಸ್ಕೂಟರ್ 2 ಕೋಟಿ ಮಾರಾಟವಾಗೋ ಮೂಲಕ ಭಾರತದಲ್ಲಿ ಹೊಸ ಇತಿಹಾಸ ರಚಿಸಿದೆ.  ಆರಂಭಿಕ 15 ವರ್ಷಗಳಲ್ಲಿ ಮಾರಾಟದಲ್ಲಿ 1 ಕೋಟಿ ಗಡಿ ದಾಟಿತ್ತು. ಆದರೆ ಕಳೆದ ಮೂರೇ ವರ್ಷಗಳಲ್ಲಿ ಹೊಂಡಾ ಅಕ್ಟೀವಾ 1 ಕೋಟಿ ಮಾರಾಟವಾಗಿದೆ.

ಕಳೆದ 18 ವರ್ಷಗಳಿಂದ ಹೊಂಡಾ ಅಕ್ಟಿವಾ ಸ್ಕೂಟರ್ ಭಾರತದಲ್ಲಿ ಮಾರಾಟವಾಗುತ್ತಿದೆ. 2001ರಲ್ಲಿ ಮೊದಲ ಬಾರಿಗೆ ಹೊಂಡಾ ಅಕ್ಟಿವಾ ಕಾಲಿಟ್ಟಿತು. ಇದೀಗ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಗರಿಷ್ಠ ಮಾರಾಟವಾಗೋ ಸ್ಕೂಟರ್ ಅನ್ನೋ ದಾಖಲೆಗೂ ಪಾತ್ರವಾಗಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ